ಬೀದಿ ಬದಿ ವ್ಯಾಪಾರಿಗಳಿಂದ ಬೃಹತ್ ಪ್ರತಿಭಟನೆ…

ಗಂಗಾವತಿ : ಪಾದಚಾರಿ ರಸ್ತೆಗಳ ತೆರವು ಎನ್ನುವ ನೆಪದಲ್ಲಿ ಬೀದಿ ಬದಿಯ ವ್ಯಾಪಾರಗಳನ್ನು ಒಕ್ಕಲೆಬ್ಬಿಸಲು ಮಂದಾಗಿರುವುದನ್ನು ಖಂಡಿಸಿ, ಡಿಎಸ್ಎಸ್ ಭೀಮವಾದ ಸಂಘಟನೆಯ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಮರಿಸ್ವಾಮಿ ಬರಗೂರು ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ನಗರಸಭೆಯ ಅಧಿಕಾರಿಗಳು ಪಾದಚಾರಿಗಖ ರಸ್ತೆ ತೆರವು ಎನ್ನುವ ಉದ್ದೇಶ ಬೀದಿ ಬದಿಯ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿದ್ದಾರೆ. ನಗರದಲ್ಲಿ ಬಡವರಿಗೆ ಒಂದು ನ್ಯಾಯ, ಉಳ್ಳವರಿಗೆ ಒಂದು ನ್ಯಾಯಾ ಎನ್ನುವಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಪಾದಚಾರಿ ರಸ್ತೆ ಒತ್ತುವರಿ ಮಾಡಿದ ಕೆಲ ಪ್ರಭಾವಿಗಳ ಆಸ್ತಿಯನ್ನು ಹಾಗೇ ಬಿಟ್ಟಿದ್ದಾರೆ. ಸಣ್ಣಪುಟ್ಟ ವ್ಯಾಪಾರಸ್ಥರ ಮೇಲೆ ಕ್ರಮಕ್ಕೆ ಮುಂದಾಗಲಾಗಿದೆ. ನ್ಯಾಯಾಲಯ ಆದೇಶದಂತೆ ಅಧಿಕಾರಗಳು ಕೆಲಸ ಮಾಡಿದ್ದರು, ಬೀದಿಬದಿಯ ವ್ಯಾಪಾರಿಗಳಿಗೆ ಪಯಾ೯ಯ ಜಾಗವನ್ನು ಗುರುತು ಮಾಡಿ, ಅವರಿಗೆ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಬೇಕು, ಗಂಗಾವತಿ ನಗರದಲ್ಲಿ 1600ಕ್ಕೂ ಅಧಿಕ ಕುಟುಂಬಗಳು ಬೀದಿ ಬದಿಯಲ್ಲಿ ಹೊಟೆಲ್ ನಡೆಸಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಅವರು ಈಗ ಬೀದಿಗೆ ಬರುವಂತೆ ಆಗಿದೆ. ನಗರಸಭೆ ಅಧಿಕಾರಿಗಳು ಕೂಡಲೇ ಅವರಿಗೆ ಪಯಾ೯ಯ ವ್ಯವಸ್ಥೆಯನ್ನು ಕಲ್ಪಿಸಬೇಕು. ಅದಕ್ಕಾಗಿಯೇ ನಗರಸಭೆಯವರ ಮೇಲೆ ಒತ್ತಡ ಹಾಕಲು ಮೇ.19 ಮಂಗಳವಾರದಂದು ನಗರಸಭೆ ಎದುರು ಬೀದಿ ಬದಿಯ ವ್ಯಾಪಾರಿಗಳು ಹಾಗೂ ನಮ್ಮ ಸಂಘಟನೆಯ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಒತ್ತಾಯಿಸಿದರು.ಬೀದಿ ಬದಿಯ ವ್ಯಾಪಾರಿಗಳಾದ ರಾಘವೇಂದ್ರ ಬೋವಿ, ಲಕ್ಷಮ್ಮ, ಅನ್ನಪೂಣ೯, ಗೌಸ್, ಶಿವಕುಮಾರ ರಾಜಣ್ಣ ಹಾಗೂ ಇತರಿದ್ದರು.

