ತಾಂಡಾದ ಹೆಮ್ಮೆಯ ಸಾಧಕ ಡಾ. ತೇಜು ನಾಯ್ಕ್ ಅವರಿಗೆ ಶ್ರೀ ಸೇವಾಲಾಲ್ ಮಹಾರಾಜ ಕಟ್ಟಡ ಕಾರ್ಮಿಕ ಸಂಘದಿಂದ ಭವ್ಯ ಸನ್ಮಾನ….

ಗಂಗಾವತಿ: ವಿರುಪಾಪುರ ತಾಂಡಾದ ಹೆಮ್ಮೆಯ ಪುತ್ರ ಹಾಗೂ ಶ್ರಮಜೀವಿಗಳ ಬದುಕಿಗೆ ಪ್ರೇರಣೆಯಾಗಿರುವ ಡಾ. ತೇಜು ನಾಯ್ಕ್ ಅವರು ವೈದ್ಯಕೀಯ (MBBS) ಶಿಕ್ಷಣ ಪೂರ್ಣಗೊಳಿಸಿ ಸಾಧನೆಗೈದಿರುವ ಹಿನ್ನೆಲೆಯಲ್ಲಿ, ಶ್ರೀ ಸೇವಾಲಾಲ್ ಮಹಾರಾಜ ಕಟ್ಟಡ ಕಾರ್ಮಿಕ ಸಂಘ ಹಾಗೂ ಸೋಷಿಯಲ್ ವರ್ಕ್ ಟೀಮ್ VRPT ವತಿಯಿಂದ ಅವರ ಸ್ವಗೃಹದಲ್ಲಿ ಮಂಗಳವಾರ ಗೌರವ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಡಾ. ತೇಜು ನಾಯ್ಕ್ ಅವರಿಗೆ ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಶ್ರೀ ಪಾಂಡುನಾಯ್ಕ್ ಮೇಸ್ತ್ರಿ ಅವರು, “ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ನಮ್ಮ ತಾಂಡಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಾಗಿ ಕಟ್ಟಡ ಕಾರ್ಮಿಕರು ವಾಸಿಸುತ್ತಿದ್ದಾರೆ. ಇಂತಹ ಶ್ರಮಜೀವಿಗಳ ವಾತಾವರಣದಲ್ಲಿ ಬೆಳೆದು, ಬಡತನವನ್ನು ಮೆಟ್ಟಿ ನಿಂತು ಡಾಕ್ಟರ್ ಪದವಿ ಪಡೆದಿರುವ ಡಾ. ತೇಜು ನಾಯ್ಕ್ ಅವರ ಸಾಧನೆ ಇಡೀ ಜನಾಂಗಕ್ಕೆ ಹಾಗೂ ಕಾರ್ಮಿಕರ ಮನೆತನಗಳಿಗೆ ಅತ್ಯಂತ ಸ್ಪೂರ್ತಿದಾಯಕವಾಗಿದೆ. ಶಿಕ್ಷಣವೇ ನಮ್ಮ ನಿಜವಾದ ಆಸ್ತಿಯಾಗಿದ್ದು, ನಮ್ಮ ತಾಂಡಾದ ಮಕ್ಕಳು ಉನ್ನತ ಶಿಕ್ಷಣದತ್ತ ಮುಖಮಾಡಲು ಈ ಸಾಧನೆ ದಾರಿದೀಪವಾಗಲಿದೆ” ಎಂದು ಅಭಿಪ್ರಾಯಪಟ್ಟರು.ಈ ಶುಭ ಸಮಾರಂಭದಲ್ಲಿ ತಾಂಡಾದ ಹಿರಿಯರು, ಶ್ರೀ ಸೇವಾಲಾಲ್ ಮಹಾರಾಜ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಸೋಷಿಯಲ್ ವರ್ಕ್ ಟೀಮ್ VRPT ಸದಸ್ಯರು, ಮುಖಂಡರು ಹಾಗೂ ಬಂಧು-ಮಿತ್ರರು ಭಾಗವಹಿಸಿ ಸಾಧಕನಿಗೆ ಶುಭ ಹಾರೈಸಿದರು.ಮಾಹಿತಿಗಾಗಿ:ಪಾಂಡುನಾಯ್ಕ ಮೇಸ್ತ್ರಿಅಧ್ಯಕ್ಷರು, ಶ್ರೀ ಸೇವಾಲಾಲ್ ಮಹಾರಾಜ ಕಟ್ಟಡ ಕಾರ್ಮಿಕರ ಸಂಘ, ಗಂಗಾವತಿ.ಮೊ: 9901487846

