ಕನ್ನಡ ಅಸ್ಮಿತೆಗಾಗಿ ಬೀದರ್ ನಿಂದ ಬೆಂಗಳೂರಿಗೆ ಪಾದಯಾತ್ರೆಗೆ ಸನ್ಮಾನ…

ಕನ್ನಡ ಅಸ್ಮಿತೆಗಾಗಿ ಬೀದರ್ ನಿಂದ ಬೆಂಗಳೂರಿಗೆ ಪಾದಯಾತ್ರೆಗೆ ಸನ್ಮಾನ…


ಗಂಗಾವತಿ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯ ಅಸ್ಮಿತೆಗಾಗಿ ಹಾಗೂ ರಕ್ಷಣೆಗಾಗಿ ಬೀದರ್ ನಿಂದ ಬೆಂಗಳೂರು ವರೆಗೆ ಪಾದಯಾತ್ರೆ ಹಮ್ಮಿಕೊಂಡಿರುವ ಪುತ್ತೂರಿನ ರೂಪೇಶ್ ಎಂಬ ಸಾಮಾಜಿಕ ಹೋರಾಟಗಾರರನ್ನು ಇಲ್ಲಿನ ಚಾರಣ ಬಳಗದ ಅಧ್ಯಕ್ಷ ಡಾಕ್ಟರ್ ಶಿವಕುಮಾರ್ ಮಾಲಿ ಪಾಟೀಲ್ ಕನ್ನಡ ಪದ ಸಂಘಟನೆಗಳ ಮುಖಂಡರುಗಳಾದ ಚನ್ನಬಸವ ಜೆಕಿನ್. ಪಂಪಣ್ಣ ನಾಯಕ್ ಕಸಾಪ ಅಧ್ಯಕ್ಷ ರುದ್ರೇಶ್ ಆರಾಳ್ ಹಾಗೂ ಸರ್ವಾಂಗೀನ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜ ಮ್ಯಾಗಳ ಮನಿ ಮಹಾಲಿಂಗಪ್ಪ ಬನ್ನಿಕೊಪ್ಪ ಸೇರಿದಂತೆ ಇತರರು ಶ್ರೀ ಬಸವೇಶ್ವರ ಪ್ರತಿಮೆಯ ಬಳಿ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳುವುದರ ಮೂಲಕ ಅವರಲ್ಲಿನ ಕನ್ನಡ ಭಾಷೆಯ ಅಭಿಮಾನಕ್ಕೆ ಸನ್ಮಾನಿಸಿ ಗೌರವಿಸಿದರು
ಈ ಸಂದರ್ಭದಲ್ಲಿ ಪಾದಯಾತ್ರೆಯ ರೂವಾರಿ ರೂಪೇಶ್ ಪುತ್ತೂರು ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆಯ ಅಸ್ಮಿತೆ ಹಾಗೂ ರಕ್ಷಣೆಗಾಗಿ ಸರಕಾರದ ಗಮನಸೆಳೆಯಲು ತಾವು ಪಾದಯಾತ್ರೆಯನ್ನು ಬೀದರ್ ನಿಂದ ಆರಂಭಿಸಲಾಗಿದ್ದು ಇಂದು ಸಿಂಧನೂರಿನ ಮೂಲಕ ಗಂಗಾವತಿಗೆ ಆಗಮಿಸಿದ್ದು ಇದರ ಮೂಲ ಉದ್ದೇಶ ಕನ್ನಡದ ನೆಲ ಜಲ ಭಾಷೆ ಸಂಸ್ಕೃತಿ ಉಳಿಸುವುದು ಸರ್ಕಾರದ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದು ಖಾಸಗಿ ಕಂಪನಿಗಳಲ್ಲಿ ಶೇಕಡಾ 80 ರಷ್ಟು ಕನ್ನಡಿಗರಿಗೆ ಉದ್ಯೋಗ ಅವಕಾಶ ಕಲ್ಪಿಸುವುದು ಸರಕಾರದ ನೇಮಕಾತಿಯಲ್ಲಿ ಭಾಷೆ ಆದ್ಯತೆ ನೀಡುವುದು ಮತ್ತಿತರ ಅಂಶಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಹಾಗೂ ಕನ್ನಡ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಭಾಷೆಯ ಉಳಿವಿಗಾಗಿ ಕಾನೂನು ತಿದ್ದುಪಡಿ ಮಾಡುವಂತೆ ಒತ್ತಾಯಿಸುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾಕ್ಟರ್ ಶಿವಕುಮಾರ್ ಸೇರಿದಂತೆ ಮುಖಂಡರುಗಳು ಮಾತನಾಡಿ ಕನ್ನಡ ಭಾಷೆ ಹಾಗೂ ರಕ್ಷಣೆಗೆ ನಮ್ಮನ್ನು ಆಳುವ ಯಾವುದೇ ಸರ್ಕಾರ ನಿರ್ಲಕ್ಷ ಧೋರಣೆ ಅನುಸರಿಸುತ್ತದೆ. ಇದಕ್ಕೆ ಮೂಲ ಕಾರಣ ಸಚಿವರ ಹಾಗೂ ಮಾಜಿ ಸಚಿವರುಗಳ ರಾಜಕೀಯ ಮುಖಂಡರುಗಳ ಖಾಸಗಿ ಶಾಲೆಗಳಿಗೆ ಹೆಚ್ಚು ಪ್ರಾಶಸ್ತ ನೀಡುತ್ತಿರುವುದು ಪ್ರಮುಖವಾಗಿದೆ ಉಳಿದಂತೆ ರಾಜ್ಯಕ್ಕೆ ಆಗಮಿಸುವ ಬೃಹತ್ ಉದ್ದಿಮೆಗಳು ಇಲ್ಲಿಯ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಕನ್ನಡಿಗರಿಗೆ ಉದ್ಯೋಗ ಅವಕಾಶ ಕಲ್ಪಿಸದೆ ಹೊರರಾಜ್ಯಗಳ ಅಭಿವೃದ್ಧಿಗಳಿಗೆ ಅವಕಾಶ ನೀಡುವುದು ಹಾಗೂ ಇಲ್ಲಿ ಉನ್ನತ ವ್ಯಾಸಂಗ ಮಾಡಿದ ಅಭ್ಯರ್ಥಿಗಳು ಹೊರದೇಶಕ್ಕೆ ಉದ್ಯೋಗಕ್ಕೆ ಹೋಗುವುದು ಇಂತಹ ಅನೇಕ ಕಾರಣದಿಂದ ಕನ್ನಡ ಭಾಷೆ ಅವಸಾನದ ಅಂಚಿನಲ್ಲಿದ್ದು ಇದು ಹೀಗೆ ಮುಂದುವರೆದರೆ ರಾಜಧಾನಿಯಲ್ಲಿ ಕನ್ನಡ ಎನ್ನಡ ಎಕ್ಕಡ ಎನ್ನುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು

Leave a Reply

Your email address will not be published. Required fields are marked *