ಗಂಗಾವತಿ ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ…

ಗಂಗಾವತಿ ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ…

ಗಂಗಾವತಿ: ನಗರದ ಶೃಂಗೇರಿ ಶಂಕರ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಹೋತ್ಸವವನ್ನು ಶುಕ್ರವಾರ ಅತ್ಯಂತ ಭಕ್ತಿ, ಶ್ರದ್ಧೆ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಪರಮ ಪೂಜ್ಯ ಉಭಯ ಜಗದ್ಗುರುಗಳ ಪರಮಾನುಗ್ರಹ ಹಾಗೂ ಆಶೀರ್ವಾದದೊಂದಿಗೆ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮುಂಜಾನೆಯಿಂದಲೇ ಮಠದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಶ್ರೀಕೃಷ್ಣನಿಗೆ ಅಭಿಷೇಕ, ರುದ್ರಾಭಿಷೇಕ, ಅಷ್ಟೋತ್ತರ ಶತನಾಮಾವಳಿ ಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಭಕ್ತರು ಪೂಜೆ ಹಾಗೂ ಪಾರಾಯಣದಲ್ಲಿ ಭಾಗವಹಿಸಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾದರು. ಸಂಜೆ 5.30ಕ್ಕೆ ಎಲ್ಲ ಶಾರದಾ ಶಂಕರ ಭಕ್ತ ಮಂಡಳಿಯವತಿಯಿಂದ ಗುರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ಅಷ್ಟೋತ್ತರ ಶತನಾಮಾವಳಿ ಪಾರಾಯಣ, ಶ್ರೀಕೃಷ್ಣ ಭಜನೆ ಹಾಗೂ ವಿವಿಧ ಭಜನಾ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.ಈ ಸಂದರ್ಭದಲ್ಲಿ ಶ್ರೀಮತಿ ಶಿಲ್ಪಾ ದೇಸಾಯಿ ಅವರು ಕೃಷ್ಣ ಜನ್ಮಾಷ್ಟಮಿಯ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ವಿವರಿಸಿ, ಶ್ರೀಕೃಷ್ಣನ ಜೀವನ ಸಂದೇಶಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸುಮಾರು 10 ಮಕ್ಕಳು ಶ್ರೀಕೃಷ್ಣನ ವಿವಿಧ ವೇಷಭೂಷಣಗಳಲ್ಲಿ ಮಿಂಚಿ ಭಕ್ತರ ಗಮನ ಸೆಳೆದರು. ಪುಟಾಣಿ ಮಕ್ಕಳ ಕೃಷ್ಣ ವೇಷವು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.

ಈ ಸಂದರ್ಭದಲ್ಲಿ ಮಠದ ಗೌರವ ವ್ಯವಸ್ಥಾಪಕರಾದ ಧರ್ಮದರ್ಶಿ ಶ್ರೀ ನಾರಾಯಣರಾವ್ ವೈದ್ಯ ಅವರು ಮಾತನಾಡಿ, ಗಂಗಾವತಿಯ ಶ್ರೀ ಶೃಂಗೇರಿ ಶಂಕರಮಠದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ನಡೆದುಕೊಂಡು ಬಂದಿರುವ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಅವಲೋಕನ ನಡೆಸಿದರು. ಮಠವು ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆ, ಸಂಸ್ಕಾರ ಮತ್ತು ಆಧ್ಯಾತ್ಮಿಕ ಚಿಂತನೆ ಬೆಳೆಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ ಎಂದು ಹೇಳಿದರು.ಶ್ರೀಮತಿ ಗಾಯತ್ರಿ ಶ್ರೀಧರ್ ಅಳವಂಡಿಕರ್ ಅವರು ಮಾತನಾಡಿ, ಶಂಕರ ತತ್ವ ಹಾಗೂ ಸನಾತನ ಧರ್ಮದ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು.ನಂತರ ಆರತಿ ಹಾಗೂ ಮಂಗಳಾರತಿಯನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸುಮಾರು 60 ರಿಂದ 70ಕ್ಕೂ ಹೆಚ್ಚು ಭಕ್ತಮಂಡಳಿಗೆ ಪ್ರಸಾದ ವಿತರಿಸಲಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯು ಭಕ್ತಿ, ಭಜನೆ, ಪಾರಾಯಣ ಹಾಗೂ ಮಕ್ಕಳ ಕೃಷ್ಣ ವೇಷಧಾರಣೆಯೊಂದಿಗೆ ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು. ಒಟ್ಟಾರೆ ಕಾರ್ಯಕ್ರಮವು ಪರಮ ಪೂಜ್ಯ ಉಭಯ ಜಗದ್ಗುರುಗಳ ಪರಮಾನುಗ್ರಹ ಹಾಗೂ ಆಶೀರ್ವಾದದಿಂದ ಸುಸಂಪನ್ನಗೊಂಡಿತು.ಮಾಹಿತಿಗಾಗಿಶ್ರೀ ನಾರಾಯಣರಾವ್‌ ವೈದ್ಯಧರ್ಮದರ್ಶಿಗಳುಮೊ: 9448118717

Leave a Reply

Your email address will not be published. Required fields are marked *