ಅನ್ನದಾನೀಶ್ವರ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಶಾಸಕ ಪರಣ್ಣ, ಸುಳೆಕಲ್ ಶ್ರೀ, ಶ್ರೀ, ಗಡ್ಡಿ ಶ್ರೀಬರದಲ್ಲಿ ಅಕ್ಷರ, ಅನ್ನವನಿಕ್ಕಿ ದಾನೀಶ್ವರನಾದ ಅನ್ನದಾನೀಶ್ವರ ಮಾನವೀಯ ಸಾಕಾರಮೂರ್ತಿ : ನಿರ್ದೇಶಕಿ ಗೌರಿ

ಗಂಗಾವತಿ: ದಾನವ ಕೃತ್ಯದಲ್ಲಿ ತೊಡಗಿದ್ದಕಾಡುಗಳ್ಳ ಅನಕ್ಷರಸ್ಥರಿಗೆ ಅಕ್ಷರ ಅನ್ನವನ್ನಿಕ್ಕಿ ದಾನೀಶ್ವರನಾದ ಶ್ರೀ ಅನ್ನದಾನೀಶ್ವರ ಮಹಾತ್ಮೆ ಚಿತ್ರವು ಮಾನವೀಯ ಗುಣಗಳನ್ನು ಸಾರುತ್ತಾ ಅಂತಕರಣ ಮಿಡಿಯುವ ಚಿತ್ರವಾಗಿದ್ದು ಸೆ.೨೫ಕ್ಕೆ ಚಿತ್ರ ವೀಕ್ಷಿಸಿ ಸಾರ್ವಜನಿಕರು ಪ್ರೋತ್ಸಾಹಿಸಬೇಕೆಂದು ಚಿತ್ರದ ನಿರ್ಮಾಪಕಿ ಹಾಗು ನಿರ್ದೇಶಕಿ ಗೌರಿ ಎಲ್.ರಾಮನಗೌಡ ಹೇಳಿದರು.ಅವರು ಇಲ್ಲಿನ ಸಾಹಿತ್ಯ ಪರಿಷತ್ ಭವನದಲ್ಲಿ ಶ್ರೀ ಅನ್ನದಾನೀಶ್ವರ ಮಹಾತ್ಮೆ ಚಲನಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದರು.ಕಷ್ಟಪಟ್ಟು ಸಿನೆಮಾ ಮಾಡಿದ್ದೇವೆ, ಚಿತ್ರಕ್ಕೆ ಇಲ್ಲಿನ ಬೇವಿನಾಳ್ ಸಂಜಯ್ ಬೆಂಗಳೂರು ಇವರು ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿದ್ದು, ವಿ.ಮನೋಹರ್ ಅವರ ಸೊಗಸಾದ ಸಂಗೀತವಿದೆ, ಖ್ಯಾತ ಗಾಯಕರಾದ ರವೀಂದ್ರ ಸುರೆಗಾವಿ, ಎಂ.ಡಿ.ಪಲ್ಲವಿ, ಸಚಿನ್, ಪ್ರಜ್ವಲ್, ಅಭಿಷೇಕ್ ಇವರು ಭಾವತುಂಬಿ ಹಾಡಿದ್ದಾರೆ. ಶಿವಶರಣ ವಿ.ಸುಗ್ನಳ್ಳಿ ಹಾಗು ಸಿದ್ದರಾಜು ಇವರ ಅತ್ಯಾಕರ್ಷಕ ಕೆಮೆರಾ ಕೈಚಳಕವಿದ್ದು, ಸಿದ್ದಗಂಗಮಠ, ಶ್ರೀರಂಗಪಟ್ಟಣ, ಕಪ್ಪತಗುಡ್ಡ, ಕೌಲೂರು ಹಾಗು ಮುಂಡರಗಿಯ ಸುತ್ತಮುತ್ತಲಿನ ಮನಮೋಹಕ ಪರಿಸರದಲ್ಲಿ ಚಿತ್ರೀಕರಿಸಲಾಗಿದ್ದು ಚಿತ್ರವು ಗಮನಸೆಳೆಯುತ್ತಿದೆ ಎಂದು ತಿಳಿಸಿದರು.ಸಾಹಿತಿ, ಶಿಕ್ಷಕ ಬೇವಿನಾಳ್ ಸಂಜಯ್ ಕುಮಾರ್ ಬೆಂಗಳೂರು ಇವರು ಮಾತನಾಡಿ, ಎನ್.ಎಂ.ವಿಶ್ವ ಕಪ್ಪತಗಿರಿ ಇವರ ಅತ್ಯುತ್ತಮ ಸಂಕಲವಿದೆ, ಖ್ಯಾತ ನಟ ಅಬಿಜಿತ್ರಾವ್, ಮುಂಡರಗಿಯ ಅನ್ನದಾನೀಶ್ವರ ಶಾಖಾ ಮಠ ಕುಕನೂರಿನ ಪರಮಪೂಜ್ಯ ಶ್ರೀ ಡಾಕ್ಟರ್ ಮಹಾದೇವದೇವರು, ತಾವರಗೆರೆಯ ಪೂಜ್ಯ ಶ್ರಿ ಮಹೇಶ್ವರ ಹಿರೇಮಠ ಇವರು ಪ್ರಮುಖಪಾತ್ರಲ್ಲಿ ಕಾಣಿಸಿಕೊಂಡಿದ್ದು, ಡಿಂಗ್ರಿ ನಾಗರಾಜ್, ಮೂಗು ಸುರೇಶ್, ಮೀನಾಕ್ಷಿ, ಅನುರಾಧ, ಶಿವಕುಮಾರ್ ಆರಾಧ್ಯ, ಸುಂದರ್, ರತ್ನಮಾಲಾ, ಹಳ್ಳಿಮೇಸ್ಟುç ಖ್ಯಾತಿಯ ಕಪ್ಪೆರಾಯ, ಗಂಗಾವತಿಯ ಖ್ಯಾತ ನಟ ನಾಗರಾಜ್ ಇಂಗಳಗಿ, ವಿಷ್ಣುತೀರ್ಥ ಜೋಷಿ, ವಕೀಲ ದಿವಂಗತ ಲಿಂಗಪ್ಪ ಸುದ್ದಿ ನಟಿಸಿದ್ದಾರೆ, ಚಿತ್ರಕ್ಕೆ ಪಣೀಶ್ ಹಾಗು ಈಶ್ವರ್ ಮೇಕಪ್ ಮಾಡಿದ್ದಾರೆ, ವಸ್ತಲಂಕಾರ ಕೃಷ್ಣ, ಲೊಕಪ್ರೀಯ ಹಾಗು ಮಂಜುನಾಥ ಗೋರಡೆ ಕಲಾ ನಿರ್ದೇಶನ ಮಾಡಿದ್ದು ಒಂದೇ ಉಸಿರಿನಲ್ಲಿ ಚಿತ್ರ ನೋಡಿಸಿಕೊಂಡು ಹೋಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಶ್ರೀ ಸಂಗಮೇಶ ಅಪ್ಪಾಜಿ ಗಡ್ಡಿ ಇವರು ಮಾತನಾಡಿ, ಮುಂಡರಗಿಯ ಶ್ರೀ ಅನ್ನದಾನೀಶ್ವರ ಶ್ರೀಗಳ ಜೀವನ ಚರಿತ್ರೆ ದೈವೀಕತೆಯಿಂದ ಕೂಡಿದ್ದು ಸಾಮಾಜಿಕ ಕಾರ್ಯಗಳ ಮೂಲಕ ಅವರು ಬಡವರ ಹಸಿವನ್ನು, ಅಕ್ಷರ ದಾಹ ತಣಿಸಿ ಪ್ರಕೃತಿಯನ್ನು ಉಳಿಸಿದ ಮಹಾನ್ ಚೇತನ ಎಂದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಧ್ಯಕ್ಷ ನಾಗರಾಜ್ ಇಂಗಳಗಿ ಮಾತನಾಡಿ, ನಿರ್ಮಾಪಕರು ಹಾಗು ನಿರ್ದೇಶಕಿ ಗೌರಿಯವರು ಮತ್ತು ಬೇವಿನಾಳ್ ಸಂಜಯ್ ಕುಮಾರ್ ಅತಿ ಹೆಚ್ಚು ಪರಿಶ್ರಮಪಟ್ಟು ಚಿತ್ರ ತಯಾರಿಸಿದ್ದು ಚಿತ್ರವನ್ನು ಥೀಯೇಟರ್ಗೆ ಬಂದು ನೋಡಿ ಹಾರೈಸಿ ಎಂದರು.ಈ ಸಂದರ್ಭದಲ್ಲಿ ತಾವರಗೆರೆಯ ಪೂಜ್ಯ ಶ್ರಿ ಮಹೇಶ್ವರ ಹಿರೇಮಠ, ಮಂಗಳಮ್ಮ ಜೋಗತಿ ಬೆಂಗಳೂರು, ಆರ್.ಬಿ.ಪಾಟೀಲ್ ನಟ ವಿಷ್ಣುತೀಥ ಜೋಷಿ ಇದ್ದರು.( ಬಾಕ್ಸ್ )ಚಿತ್ರಕ್ಕೆ ಪ್ರೋತ್ಸಾಹಿಸಿ :ಸುಳೇಕಲ್ ಶ್ರೀ, ಪರಣ್ಣನೈತಿಕತೆ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಸಮಾಜಕ್ಕೆ ಸ್ಪೂರ್ತಿ ನೀಡುವಂಥ ಚಿತ್ರಗಳು ವಿರಳವಾಗಿದ್ದು, ಸಮಾಜತಿದ್ದುವ ಕಾಯಕದಲ್ಲಿ ತೊಡಗಿರುವ ವೀರಶೈವ ಸಮಾಜದ ಮುಂಡರಗಿಯ ಶ್ರೀ ಅನ್ನದಾನೀಶ್ವರ ಮಹಾತ್ಮೆ ಚಿತ್ರ ಸೆಪ್ಟಂಬರ್ ೨೫ಕ್ಕೆ ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ ಗಂಗಾವತಿಯ ಶಿವೆ ಚಿತ್ರಮಂದಿರಲ್ಲಿಯೂ ಪ್ರದರ್ಶನಗೊಳ್ಳಲಿದೆ ಕುಟುಂಬ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಚಿತ್ರ ವೀಕ್ಷಿಸಿ. ಪ್ರೋತ್ಸಾಹಿಸಿಬೇಕೆಂದರು.

