ಬಸವಣ್ಣ ದೇವರ ಅಭಿಷೇಕ ಮಹೋತ್ಸವ ಆಚರಣೆ .

ಗಂಗಾವತಿ: ನಗರದ ಅಮರ ಭಗತ್ ಸಿಂಗ್ ನಗರದ ಬಸವಣ್ಣ ದೇವಸ್ಥಾನದಲ್ಲಿ ಬಸವಣ್ಣ ದೇವಸ್ಥಾನ ಸಮಿತಿ ಹಾಗೂ ಅಮರ್ ಭಗತ್ ಸಿಂಗ್ ನಗರ ಯುವಕರ ವತಿಯಿಂದ ಶ್ರಾವಣ ಮಾಸದ ಕೊನೆಯ ಶನಿವಾರದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ಬಸವಣ್ಣ ದೇವರಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಕಳಶ ಪ್ರತಿಷ್ಠಾಪನೆ ಹಾಗೂ ವಿಶೇಷ ಹೂವಿನ ಅಲಂಕಾರ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದಲ್ಲಿ ಧಾರ್ಮಿಕ ವಾತಾವರಣ ನಿರ್ಮಾಣವಾಗಿದ್ದು, ಭಕ್ತರು ಭಜನೆ ಹಾಗೂ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.ಹಿರಿಯರಾದ ನಾಗಲಿಂಗಪ್ಪ ಪತ್ತಾರ ಮಾತನಾಡಿ, ಶ್ರಾವಣ ಮಾಸವು ಧಾರ್ಮಿಕವಾಗಿ ವಿಶೇಷ ಮಹತ್ವ ಹೊಂದಿದ್ದು, ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಸಂತಸದ ಸಂಗತಿ. ಇಂತಹ ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಭಕ್ತಿ, ಸೌಹಾರ್ದತೆ ಹಾಗೂ ಒಗ್ಗಟ್ಟನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು.ಪ್ರಮುಖರಾದ ಈ. ರಾಮಕೃಷ್ಣ, ಶಿವಣ್ಣ, ಮಲ್ಲಪ್ಪ, ಕುಮಾರಸ್ವಾಮಿ, ಮಡಿವಾಳಪ್ಪ ಪೂಜಾರ, ಜಂಗ್ಲಿ ಭೀಮಣ್ಣ, ಮರಿಯಪ್ಪ, ಅಶೋಕಗೌಡ, ಧರ್ಮಣ್ಣ ಆಡಿನ್, ಸುಭಾಷ್, ಶರಣಪ್ಪ, ಪರಶುರಾಮ ಇಟಗಿ, ಶಾಂತಪ್ಪ ಇಟಗಿ, ಶಶಿಕುಮಾರ, ಚಂದ್ರಶೇಖರ ಮುಕ್ಕುಂದಿ, ಕಂದಗಲ ಬಸಪ್ಪ, ಓಂಕಾರ, ಅಲಿಸ್, ಸಂಜೀವ್, ನಾಗರಾಜ, ಮಹೇಶಪ್ಪ, ಶಿವರಾಜ ಹೊಸಳ್ಳಿ, ನಾಗರಾಜ ಪತ್ತಾರ, ಶಾಮಸುಂದರ್, ಆಜಿ, ಬಸವರಾಜ, ತ್ಯಾವರಪ್ಪ, ಕುರಿ ಶರಣಪ್ಪ, ಮಂಜುನಾಥ, ಜಂಗ್ಲಿ ಮೌನೇಶ್ ಸೇರಿದಂತೆ ಮಹಿಳಾ ಮಂಡಳಿಯ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

