ವೀರಶೈವ ಸಮಾಜದ ಮುಖಂಡ ಬಳ್ಳಾರಿ ದೊಡ್ಡಬಸಪ್ಪ ನಿಧನ..

ಗಂಗಾವತಿ: 09 ವೀರಶೈವ ಸಮಾಜದ ಮುಖಂಡ ಸಾಹಿತಿಗಳ ನಿಕಟವರ್ತಿ ಬಳ್ಳಾರಿ ದೊಡ್ಡಬಸಪ್ಪ (70) ಸೆ.9 ಬೆಳಿಗ್ಗೆ ನಿಧನರಾದರು. ಓರ್ವ ಪುತ್ರ, ಪುತ್ರಿ ಮತ್ತು ಅಪಾರ ಬಂಧುಗಳನ್ನು ಬಿಟ್ಟು ಅವರು ಅಗಲಿದ್ದಾರೆ.ವೀರಶೈವ ರುದ್ರಭೂಮಿಯಲ್ಲಿ ಅವರ ಸಂಸ್ಕಾರ ನಡೆಯಿತು.ಸಂತಾಪ:ನಿಕಟಪೂರ್ವ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ,ಮಾಜಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ವಕೀಲರು, ವೀರಶೈವ ಮಹಾಸಭಾ ತಾಲೂಕು ಘಟಕದ ಎಚ್.ಗಿರೇಗೌಡ, ನಗರಸಭೆ ಮಾಜಿ ಉಪಾಧ್ಯಕ್ಷ ಹೊಸಳ್ಳಿ ಶಂಕರಗೌಡ,ಎಸ್.ಬಿ.ಹಿರೇಮಠ, ಚಲನಚಿತ್ರ ನಟ ವಿರ್ಷತಿರ್ಥ, ಗಂಗಾವತಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಇಂಗಳಗಿ, ಪತ್ರಕರ್ತರಾದ,ವಿಶ್ಬನಾಥ ಬೆಳಗಲ್ ಮಠ, ವಾಗೀಶಸ್ವಾಮಿ ನವಲಿ ಹಿರೇಮಠ, ಹೊಸಗೇರಿ ಮಂಜುನಾಥ, ರಾಮಮೂರ್ತಿ ನವಲಿ, ಕೆ.ನಿಂಗಜ್ಜ,ನಿತ್ಯ ಕರ್ನಾಟಕ ರವಿ, ಕಸಾಪ ಮಾಜಿ ಅಧ್ಯಕ್ಷ ರುಗಳಾದ ಸಿ.ಎಚ್.ನಾರನಾಳ, ಅಜ್ಮೀರ ನಂದಾಪುರ, ದಂತ ವೈದ್ಯ ಡಾ.ಶಿವಕುಮಾರ ಮಾಲೀಪಾಟೀಲ, ಹೋರಾಟಗಾರ ಜೆ.ಭಾರದ್ವಜ ತಮ್ಮ ತೀವ್ರ ಸಂತಾಪ ಸೂಚಿಸಿದ್ದಾರೆ.

