ನೀಲಕಂಠೇಶ್ವರ ದೇವಸ್ಥಾನದಲ್ಲಿ ಉಟಕನೂರು ಶ್ರೀ ಬಸವಲಿಂಗ ಶಿವಯೋಗಿಗಳ ಪುರಾಣ ಮಹಾಮಂಗಳೋತ್ಸವ…

ನೀಲಕಂಠೇಶ್ವರ ದೇವಸ್ಥಾನದಲ್ಲಿ ಉಟಕನೂರು ಶ್ರೀ ಬಸವಲಿಂಗ ಶಿವಯೋಗಿಗಳ ಪುರಾಣ ಮಹಾಮಂಗಳೋತ್ಸವ…

ನೀಲಕಂಠೇಶ್ವರ ದೇವಸ್ಥಾನದಲ್ಲಿ ಉಟಕನೂರು ಶ್ರೀ ಬಸವಲಿಂಗ ಶಿವಯೋಗಿಗಳ ಪುರಾಣ ಮಹಾಮಂಗಳೋತ್ಸವ…

ಗಂಗಾವತಿ: ನಗರದ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಉಟಕನೂರು ಶ್ರೀ ಬಸವಲಿಂಗ ಶಿವಯೋಗಿಗಳ ಪುರಾಣ ಮಹಾಮಂಗಳೋತ್ಸವದ ಅಂಗವಾಗಿ ಭಕ್ತಿಭಾವದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಮಹಾಮಂಗಳೋತ್ಸವದ ಅಂಗವಾಗಿ ಶ್ರೀ ಬಸವಲಿಂಗ ಶಿವಯೋಗಿಗಳ ಭಾವಚಿತ್ರವನ್ನು ಅಲಂಕರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಸಮಾಜದ ಮುಖಂಡರು, ಮಹಿಳೆಯರು, ಭಕ್ತರು ಹಾಗೂ ವಿವಿಧ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದರು. ಸುಮಂಗಲಿಯರು ಪೂರ್ಣಕುಂಭ ಕಳಸಗಳನ್ನು ಹೊತ್ತುಕೊಂಡು ಭಜನೆ ಮಾಡುತ್ತಾ ಮೆರವಣಿಗೆಯಲ್ಲಿ ಸಾಗಿದರು.ಸಕಲ ವಾದ್ಯಮೇಳಗಳೊಂದಿಗೆ ನಡೆದ ಮೆರವಣಿಗೆಯು ಭಕ್ತಿಭಾವದ ವಾತಾವರಣ ನಿರ್ಮಿಸಿತು. ಭಕ್ತರು ಬಸವಲಿಂಗ ಶಿವಯೋಗಿಗಳ ಸ್ಮರಣೆ ಹಾಗೂ ಭಜನೆಗಳ ಮೂಲಕ ಧಾರ್ಮಿಕ ಭಾವೈಕ್ಯತೆ ಮೆರೆದರು. ಕಾರ್ಯಕ್ರಮದಲ್ಲಿ ಮಹಿಳಾ ಮಂಡಳಿಯ ಪದಾಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಂಡು ಕಳಸ ಹೊತ್ತು ಭಜನೆ ಮಾಡುವ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.ಈ ಸಂದರ್ಭದಲ್ಲಿ ಸಮಾಜದ ಯಜಮಾನರಾದ ಎಂ. ಮಲ್ಲಿಕಾರ್ಜುನ ನಾಗಪ್ಪ, ಏಳುಬಾವಿ ಕುಬೇರಪ್ಪ, ಚೆಗೂರು ಶ್ಯಾಮಣ್ಣ, ತಟ್ಟಿ ನಾಗಪ್ಪ, ಶ್ಯಾವಿ ತಿಪ್ಪಣ್ಣ, ಕುರುಗೋಡು ಬಸವರಾಜ, ಗೌರವ ಅಧ್ಯಕ್ಷರಾದ ಶ್ರೀ ರವೀಂದ್ರ ನಾಗಪ್ಪ ಸೇರಿದಂತೆ ಸಮಾಜದ ಮುಖಂಡರು, ಮಹಿಳಾ ಮಂಡಳಿಯ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.ಮಹಾಮಂಗಳೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಬಸವಲಿಂಗ ಶಿವಯೋಗಿಗಳ ಆಶೀರ್ವಾದ ಪಡೆದುಕೊಂಡರು. ಕಾರ್ಯಕ್ರಮವನ್ನು ಸಮಾಜದ ಮುಖಂಡರು, ಮಹಿಳಾ ಮಂಡಳಿ ಹಾಗೂ ಕಾರ್ಯಕರ್ತರು ಸಮನ್ವಯದಿಂದ ನಡೆಸಿ ಯಶಸ್ವಿಗೊಳಿಸಿದರು.ವರದಿ: ಡಾ. ಮಂಜುನಾಥ ಕುರುಗೋಡು

Leave a Reply

Your email address will not be published. Required fields are marked *