ಆತ್ಮವಿಶ್ವಾಸದಿಂದ ಕಡುಕಷ್ಟಗಳನ್ನು ಜಯಿಸಿದಾಗ ಮಾತ್ರ ಸಾಮರ್ಥ್ಯ ವೃದ್ಧಿ …

ಆತ್ಮವಿಶ್ವಾಸದಿಂದ ಕಡುಕಷ್ಟಗಳನ್ನು ಜಯಿಸಿದಾಗ ಮಾತ್ರ ಸಾಮರ್ಥ್ಯ ವೃದ್ಧಿ …

ಗಂಗಾವತಿ: ಬಡತನದ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಿ ಗೆದ್ದು ತಮ್ಮ ಸಾಮಾಥ್ಯ ಹೆಚ್ಚಿಸಿಕೊಂಡು ವಿಶ್ವದ ಗಮನ ಸೆಳೆದು ನಾಯಕರಾಗಿದ್ದಾರೆ ಎಂದು ಶ್ರೀರಾಮುಲು ಮಹಾವಿದ್ಯಾಲಯದ ಪ್ರೊ.ಡಾ.ಅರ್ಚನ ಹಿರೇಮಠ ಹೇಳಿದರು. ಅವರು ಬಸವ ಕೇಂದ್ರ ಹಾಗೂ ಬಸವ ಪರ ಸಂಘಟನೆಗಳ ಸಹಯೋಗದಲ್ಲಿ ಇಲ್ಲಿನ ಉಪ್ಪಾರ ಓಣಿಯಲ್ಲಿರುವ ಪಂಪಾಪತಿ ಹನುಮಂತಪ್ಪ ಇಂಗಳಗಿ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ `ವಚನ ಶ್ರವಣ-೨೦೨೬’ ಕಾರ್ಯಕ್ರಮದ ಉಪನ್ಯಾಸಕರಾಗಿ ಮಾತನಾಡಿದರು, ಬದುಕಲ್ಲಿ ಪ್ರಯೋಗತ್ಮವಾಗಿ ನಾವು ಭಕ್ತಿಯನ್ನು ವರೆಗೆ ಹಚ್ಚಿದಂತೆ ಜ್ಞಾನ ನಿಧಾನವಾಗಿ ಪ್ರಕಾಶಿಸುತ್ತದೆ, ಆಗ ದ್ವೇಷಕ್ಕೆ ಬದಲಾಗಿ ಪ್ರೀತಿ ಕೊಡುವ ವಿಶ್ವಮಾನವ ಮನೋಭಾವ ಬೆಳೆಯುತ್ತದೆ, ಹೃದಯ ವೈಶಾಲ್ಯತೆ ಹೆಚ್ಚುತ್ತದೆ ಭಕ್ತಿ ಮತ್ತು ಜ್ಞಾನ ಒಂದಕ್ಕೊAದು ಪೂರಕವಾಗಿದ್ದು, ನಿಜವಾದ ಭಕ್ತಿಯಲ್ಲಿ ಸ್ವಾರ್ಥಕ್ಕೆ ಅವಕಾಶವಿರುವುದಿಲ್ಲ ಎಂದರು,

ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಧ್ಯಕ್ಷ ನಾಗರಾಜ್ ಇಂಗಳಗಿ, ಮುಸ್ಲಿಂ ಸಮಾಜದ ಗುರುಗಳಾದ ಔಲೇಸಾಬ್ ಬಸವ ಸಂಘಟನೆಯ ಪ್ರಮುಖರಾದ ಎ.ಕೆ. ಮಹೇಶಕುಮಾರ್, ಪರಿಸರ ಟ್ರಸ್ಟ್ನ ಮಂಜುನಾಥ ಗುಡ್ಲಾನೂರು ಶರಣಪ್ಪ ಉಪ್ಪಾರ್, ಕೆ. ಪಂಪಣ್ಣ, ಪಂಪಾಪತಿ ಇಂಗಳಗಿ, ಪ್ರೇಮಾ ಇಂಗಳಗಿ, ಶ್ರೀನಿವಾಸ್ ಇಂಗಳಗಿ, ದಿಲೀಪಕುಮಾರ್, ಕೆ. ವೀರೇಶ, ವೀರೇಶ ರೆಡ್ಡಿ, ಜ್ಯೋತಿ, ರತ್ನಮ್ಮ ಆರೇಗಾರ್, ಕುಮಾರ, ನೂರ್ ಮಹಮ್ಮದ್, ಅಮರೇಗೌಡ ಜಾನೂರ್, ಪ್ರಕಾಶಗೌಡ ಪಾಟೀಲ, ಶಿವಮಾರ್ ಗೌಡ, ನವೀನ ಕುಮಾರ್ ಅಂಗಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *