ರಂಗಶಿಬಿರ ಸಮಾರೋಪ: ಮುದ್ದುಮೌನ ಕಿರುಚಿತ್ರ ಬಿಡುಗಡೆಇಂದು ಬೆಣಕಲ್ ನಿರ್ದೇಶನದ ಕಪಟ ಸನ್ಯಾಸಿ ನಾಟಕ ಉಚಿತ ಪ್ರದರ್ಶನ …

ರಂಗಶಿಬಿರ ಸಮಾರೋಪ: ಮುದ್ದುಮೌನ ಕಿರುಚಿತ್ರ ಬಿಡುಗಡೆಇಂದು ಬೆಣಕಲ್ ನಿರ್ದೇಶನದ ಕಪಟ ಸನ್ಯಾಸಿ ನಾಟಕ ಉಚಿತ ಪ್ರದರ್ಶನ …

ಗಂಗಾವತಿ: ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಇಂದು ಸೆಪ್ಟಂಬರ್ ೧೩ ಸಂಜೆ ೬ ಗಂಟೆಗೆ ಉಳುಮೆ ರಂಗಭೂಮಿ ಸಂಸ್ಥೆಯಿAದ ಜರುಗಿದ ಎರಡು ತಿಂಗಳ ರಂಗ ತರಬೇತಿ ಶಿಬಿರ ಸಮಾರೋಪದ ಅಂಗವಾಗಿ ರಂಗಾಯಣ ರಮೇಶ್ ಕೆ.ಬೆಣಕಲ್ ನಿರ್ದೇಶನದ ಕಪಟ ಸನ್ಯಾಸಿ ಉಚಿತ ನಾಟಕ ಪ್ರದರ್ಶನಗೊಳ್ಳಲಿದೆ.ಕಳೆದ ಎರಡು ತಿಂಗಳಿAದಲೂ ತರಬೇತಿ ಶಿಬಿರ ನಡೆಯುತ್ತಿದ್ದು, ನಟನಾ ಹಾಗು ಮೈಸೂರು ರಂಗಾಯಣದಲ್ಲಿ ತರಬೇತಿ ಪಡೆದಿರುವ, ತಿರುಗಾಟದಲ್ಲಿ ಅಪಾರ ಅನುಭವ ಹೊಂದಿರುವ ಸ್ಥಳೀಯ ಗಮನಾರ್ಹ ಪ್ರತಿಭೆ ರಮೇಶ್ ಕೆ.ಬೆಣಕಲ್‌ರ ನಿರ್ದೇಶನ ಹಾಗು ಸಹ ನಿರ್ದೇಶನ, ವಿನ್ಯಾಸ ನೀನಾಸಂ ಪ್ರತಿಭಾವಂತ ಸುಶ್ಮಿತಾ ಪಿ ಮೋಹನ್ ಇವರು ಶಿಬಿರವನ್ನು ನಿರ್ವಹಿಸಿದ್ದು, ಕಪಟಸನ್ಯಾಸಿ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ, ೧೬ ಕ್ಕು ಹೆಚ್ಚು ಮಕ್ಕಳು ನಾಟಕದಲ್ಲಿ ಪಾತ್ರ ನಿರ್ವಹಿಸಲಿದ್ದಾರೆ, ಮೈಸೂರಿನ ಸ್ವರೂಪ್ ನಿರ್ದೇಶನದ ಮುದ್ದುಮೌನ ಕಿರುಚಿತ್ರವು ಈ ಸಂದರ್ಭದಲ್ಲಿ ಬಿಡುಗಡೆಗೊಳ್ಳಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಸಂಘಟಕರು ಕೋರಿದ್ದಾರೆ.

Leave a Reply

Your email address will not be published. Required fields are marked *