ಇಳಕಲ್ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ…

ಇಳಕಲ್:ಜೂ 24 ಇಲ್ಲಿಯ ರೋಟರಿಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಇದೇ ಜೂ 26 ರಂದು ಸಾಯಂ ಕಾಲ ಸಂಜೆ 6 ಕ್ಕೆ ಇಳಕಲ್ ನಗರದ ಬಸವ ಪ್ಯಾಲೇಸ್ ನಲ್ಲಿ ನಡೆಯಲಿದೆ ಎಂದು ರೋಟರಿ ಕ್ಲಬ್ ನ ನೂತನ ಅಧ್ಯಕ್ಷರಾದ ಶ್ರೀಕಾಂತ್ ಮಂಟಗಿರಿ ಅವರು ನಗರದ ಶ್ರೀ ವಿಜಯ ಮಹಾಂತೇಶ್ವರ ಅನುಭವ ಮಠದ ಕಾನಿಪ ಕಚೇರಿಯಲ್ಲಿ ಪತ್ರಿಕಾ ಹೇಳಿಕೆ ಮೂಲಕ ನುಡಿದರು.ಇಳಕಲ್ ನಗರದ ರೋಟರಿ ಕ್ಲಬ್ ನ ಪದಾಧಿಕಾರಿಗಳ ಪದಗ್ರಹನ ಸಮಾರಂಭವನ್ನು ಏರ್ಪಡಿಸಲಾಗಿದೆ.ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಡಾ.ಗುರು ಮಹಾಂತ ಶ್ರೀಗಳು ವಹಿಸಲಿದ್ದಾರೆ ಎಂದು ನೂತನ ಕಾರ್ಯದರ್ಶಿಯಾದ ಶಶಾಂಕ ಕಾಗಿಯವರ ಮಾತನಾಡಿದರು.ರೋಟರಿ ಕ್ಲಬ್ ನ ನೂತನ ಅಧ್ಯಕ್ಷರಾಗಿ ಶ್ರೀ ಕಾಂತ ಮಂಟಗೇರಿ,ಕಾರ್ಯದರ್ಶಿಯಾಗಿ ಶಶಾಂಕ ಕಾಗಿಯವರ ಮತ್ತು ಖಜಾಂಚಿಯಾಗಿ ಡಾ.ಪ್ರಕಾಶ ತಾರಿವಾಳ ಅವರ ನೂತನ ಪದಗ್ರಹನ ನಡೆಯಲಿದೆ,ಇನ್ಸ್ಟಾಲೇಶನ್ ಅಧಿಕಾರಿಯಾಗಿ ರೋಟರಿಯನ್ ವಾಸುಕಿ ಸಂಜಿ ಡಿಸ್ಟ್ರಿಕ್ಟ್ ಗವರ್ನರ್,ಮುಖ್ಯ ಅತಿಥಿಗಳಾಗಿ ರೋಟರಿಯನ್ ಶಿವಕುಮಾರ ನಂದಕೋಲಮಠ,ಅಸಿಸ್ಟೆಂಟ್ ಗವರ್ನರ್ 3170 ಬಾಗಲಕೋಟೆ ಆಗಮಿಸುವರು ಎಂದು ಮಹಾಂತೇಶ ಜಕ್ಕಲಿ ಅವರುಪತ್ರಕರ್ತರ ಮುಂದೆ ಹೇಳಿದರು.ಇದೇ ಸಂದರ್ಭದಲ್ಲಿಮಹಾಂತೇಶ ಜಕ್ಕಲಿ,ಶ್ರೀಕಾಂತ್ ಮಂಟಗೇರಿ,ಶಶಾಂಕ ಕಾಗಿಯವರ,ಪ್ರಕಾಶ ತಾರಿವಾಳ,ಕುಡ್ಲೇಪ ಕೊಡ್ಲಪ್ಪನವರ,ಮುತ್ತು ಬೆಂಗಳೂರು,ಬಸವರಾಜ ಗೋಟೂರ,ಬಾಲನಗೌಡ ಪೊಲೀಸ್ ಪಾಟೀಲ,ಮತ್ತು ರೋಟರಿ ಸರ್ವಸದಸ್ಯರು ಉಪಸ್ಥಿತರಿದ್ದರು.
