ಗಂಗಾವತಿಯಲ್ಲಿ ಅರ್ಧಂಬರ್ಧ ಕಾಮಗಾರಿ: ಸಾರ್ವಜನಿಕರ ತೆರಿಗೆ ಹಣ ಪೋಲು! ಪೌರಾಡಳಿತದ ನಿರ್ಲಕ್ಷ್ಯಕ್ಕೆ ಹೈರಾಣಾದ ನಗರವಾಸಿಗಳು…

ಯುಜಿಡಿ ನೆಪದಲ್ಲಿ ವಾರ್ಡ್ಗಳಲ್ಲಿ ಗುಂಡಿ ತೋಡಿ ಮಾಯವಾದ ಗುತ್ತಿಗೆದಾರರು; ವೃದ್ಧರು, ಅಂಗವಿಕಲರ ಪರದಾಟಗಂಗಾವತಿ: ನಗರದಲ್ಲಿ ಜನಸಾಮಾನ್ಯರ ಕಷ್ಟ-ಸುಖ ಆಲಿಸಬೇಕಾದ ನಗರಸಭೆ ಅಧಿಕಾರಿಗಳು ಹಾಗೂ ಇಂಜಿನಿಯರ್ಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು, ಸಾರ್ವಜನಿಕರ ತೆರಿಗೆ ಹಣ ಪಾಣಿಪಾಲಾಗುತ್ತಿದೆ ಎಂದು ನಗರವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ವರ್ಷಗಳ ಹಿಂದೆಯೇ ಯುಜಿಡಿ (ಒಳಚರಂಡಿ) ಕಾಮಗಾರಿ ಮುಗಿದಿದ್ದರೂ, ಮತ್ತೆ ಹಳೆಯ ಕಾಮಗಾರಿಯನ್ನೇ ನೆಪ ಮಾಡಿಕೊಂಡು ವಿವಿಧ ವಾರ್ಡ್ಗಳ ರಸ್ತೆಗಳನ್ನು ಅಗೆದು ದೊಡ್ಡ ದೊಡ್ಡ ಗುಂಡಿಗಳನ್ನು ಮಾಡಲಾಗಿದೆ. ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರರು ಹಾಗೂ ಸಿಬ್ಬಂದಿ ಗುಂಡಿಗಳನ್ನು ಮುಚ್ಚದೇ ಅರ್ಧಕ್ಕೆ ಕೆಲಸ ನಿಲ್ಲಿಸಿ ಮಾಯವಾಗಿದ್ದಾರೆ.ಹಿರಿಯ ನಾಗರಿಕರು, ಅಂಗವಿಕಲರ ಗೋಳು ಕೇಳುವವರೇ ಇಲ್ಲರಸ್ತೆ ಮಧ್ಯೆ ತೋಡಿರುವ ಗುಂಡಿಗಳಿಂದಾಗಿ ಪ್ರತಿನಿತ್ಯ ಸಂಚಾರ ನಡೆಸಲು ಸಾರ್ವಜನಿಕರು ಹರಸಾಹಸ ಪಡುವಂತಾಗಿದೆ. ಮುಖ್ಯವಾಗಿ ವಯೋವೃದ್ಧರು, ಶಾಲಾ ಮಕ್ಕಳು ಹಾಗೂ ಅಂಗವಿಕಲರು ಈ ಅವ್ಯವಸ್ಥೆಯಿಂದಾಗಿ ತೀವ್ರ ಅಪಘಾತದ ಭೀತಿ ಎದುರಿಸುತ್ತಿದ್ದಾರೆ. ರಾತ್ರಿ ವೇಳೆಯಲ್ಲಂತೂ ಕಾಲು ಜಾರಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.35 ವಾರ್ಡ್ಗಳಲ್ಲೂ ತಾಂಡವವಾಡುತ್ತಿದೆ ಅವ್ಯವಸ್ಥೆನಗರದ ಒಟ್ಟು 35 ವಾರ್ಡ್ಗಳಲ್ಲೂ ಇದೇ ರೀತಿಯ ಅರ್ಧಂಬರ್ಧ ಕಾಮಗಾರಿಗಳ ಸಮಸ್ಯೆ ಎದುರಾಗಿದೆ. ಕಾಮಗಾರಿಗಳ ಉಸ್ತುವಾರಿ ವಹಿಸಬೇಕಾದ ನಗರಸಭೆಯ ಇಂಜಿನಿಯರ್ಗಳು ಹಾಗೂ ಅಧಿಕಾರಿಗಳು ಜಾಗದಲ್ಲಿದ್ದು ಪರಿಶೀಲಿಸದೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ನೇರ ಆರೋಪವಾಗಿದೆ.ಸಾರ್ವಜನಿಕರ ಆಗ್ರಹ:”ನಗರಸಭೆಯ ಸಂಬಂಧಪಟ್ಟ ಮೇಲಾಧಿಕಾರಿಗಳು ಹಾಗೂ ಪೌರಾಯುಕ್ತರು ತಕ್ಷಣವೇ ಜಾಗೃತರಾಗಿ ನಗರದ ಎಲ್ಲಾ 35 ವಾರ್ಡ್ಗಳಲ್ಲಿ ಅರ್ಧಕ್ಕೆ ನಿಂತಿರುವ ಕಾಮಗಾರಿಗಳ ಕುರಿತು ಸ್ಥಳ ಪರಿಶೀಲನೆ ನಡೆಸಬೇಕು. ಕಳಪೆ ಹಾಗೂ ವಿಳಂಬ ಕಾಮಗಾರಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ತಕ್ಷಣ ವ್ಯವಸ್ಥೆ ಮಾಡಿಕೊಡಬೇಕು.

