ಉತ್ತಮ ಮಳೆಗಾಗಿ ಪ್ರಾರ್ಥಿಸಿ ಮಂತ್ರಾಲಯಕ್ಕೆ ಆರ್ಯವೈಶ್ಯ ಸಮಾಜದ ಐದನೇ ವರ್ಷದ ಪಾದಯಾತ್ರೆ: ಅಧ್ಯಕ್ಷ ದರೋಜಿ ನಾಗರಾಜ ಶ್ರೇಷ್ಠಿ ….

ಗಂಗಾವತಿ: ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಲಿ ಮತ್ತು ರೈತರ ಬದುಕು ಸುಭಿಕ್ಷವಾಗಿರಲಿ ಎಂದು ಪ್ರಾರ್ಥಿಸಿ, ಆರ್ಯವೈಶ್ಯ ಸಮಾಜದ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ (ಹಿರೇಜಂತಕಲ್-ವಿರುವಾಪುರ) ಮತ್ತು ನವಬೃಂದಾವನ ಭಜನಾ ಮಂಡಳಿಯ ಸಹಯೋಗದಲ್ಲಿ ಆಯೋಜಿಸಿರುವ ಐದನೇ ವರ್ಷದ ‘ಮಂತ್ರಾಲಯ ಪಾದಯಾತ್ರೆ’ ಭಾನುವಾರ ಭಕ್ತಿಪೂರ್ವಕವಾಗಿ ಚಾಲನೆಗೊಂಡಿತು.ಜುಲೈ 19ರಂದು ಬೆಳಿಗ್ಗೆ 6:30ಕ್ಕೆ ಆರಂಭವಾದ ಈ ಪಾದಯಾತ್ರೆಯು, ಜುಲೈ 23ರವರೆಗೆ ಐದು ದಿನಗಳ ಕಾಲ ನಡೆಯಲಿದೆ.ರೈತರ ಹಿತವೇ ಮುಖ್ಯ ಉದ್ದೇಶ:ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಆರ್ಯವೈಶ್ಯ ಸಮಾಜ ಮತ್ತು ದೇವಸ್ಥಾನದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ಮಾತನಾಡಿ, “ಈ ವರ್ಷ ಮಳೆಯ ಅಭಾವದಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ವರುಣ ದೇವನ ಕೃಪೆ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಹಾಗೂ ತಾಯಿ ಕನ್ನಿಕಾಪರಮೇಶ್ವರಿಯ ಆಶೀರ್ವಾದದಿಂದ ಮಳೆ ಬಂದು, ರೈತರು ಸಂತೋಷದಿಂದಿರಲಿ ಎಂದು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ” ಎಂದರು.ಸಮಾಜದ ಒಳಿತಿಗಾಗಿ ಪ್ರಾರ್ಥನೆ:ಭಜನಾ ಮಂಡಳಿಯ ಅಧ್ಯಕ್ಷರಾದ ದರೋಜಿ ನರಸಿಂಹ ಶ್ರೇಷ್ಠಿ ಮಾತನಾಡಿ, “ರೈತ ಸುಭಿಕ್ಷವಾಗಿದ್ದರೆ ಮಾತ್ರ ದೇಶ ಸುಭಿಕ್ಷವಾಗಿರಲು ಸಾಧ್ಯ. ಮಳೆಗಾಗಿ ದೇವರಲ್ಲಿ ಮೊರೆ ಹೋಗುತ್ತಿದ್ದು, ಈ ಪಾದಯಾತ್ರೆ ಯಶಸ್ವಿಯಾಗಲಿ” ಎಂದು ಆಶಿಸಿದರು. ಗುರುಗಳಾದ ಬಿಮ್ ಭಟ್ ಜೋಶಿ ಅವರು ಪಾದಯಾತ್ರಿಗಳಿಗೆ ಆಶೀರ್ವಚನ ನೀಡಿ, ನಾಡಿನಾದ್ಯಂತ ಮಳೆ-ಬೆಳೆ ಸಮೃದ್ಧಿಯಾಗಿ ನೆಲೆಸಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ಹಣವಾಳ ಚಂದ್ರಶೇಖರ ಶ್ರೇಷ್ಠಿ . ಚಂದ್ರು ಬನ್ನಿಗೋಳ. ಮಂಜುನಾಥ ಹಣವಾಳ . ದತ್ತಾತ್ರೇಯ. ಗುಂಡೂರ ಪ್ರಲಾದ್. ದಮ್ಮೂರ್ ಸುರೇಶ.ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ರುಕ್ಮಿಣಿ. ಭಜನಾ ಮಂಡಳಿ ಅಧ್ಯಕ್ಷರಾದ ದಮ್ಮೂರು ಮಂಜುಳಾ. ಸುಮಲತಾ. ದೀಪಾ ಬನ್ನಿಗೊಳ್.ವಾಸವಿ ಯುವಜನ ಸಂಘದ ಗೌರವಾಧ್ಯಕ್ಷರಾದ ವೆಂಕಟೇಶ ದರೋಜಿ. ಬೆನ್ನೂರ ಪ್ರಹ್ಲಾದ್. ಅಧ್ಯಕ್ಷ ಮಂಜುನಾಥ ಮತ್ತು ಸದಸ್ಯರು ಆರ್ಯವೈಶ್ಯ ಸಮಾಜದ ಮುಖಂಡರು, ಭಜನಾ ಮಂಡಳಿಯ ಪದಾಧಿಕಾರಿಗಳು ಮತ್ತು ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

