*ಕೂಡ್ಲಿಗಿ : ಬಕ್ರೀದ್ ಹಬ್ಬ ಆಚರಣೆ , ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಪ್ರಾರ್ಥನೆ*-
ವಿಜಯನಗರ ಜಿಲ್ಲೆ ಕೂಡ್ಲಿಗಿ : ಮೇ 28ರಂದು ಬಕ್ರೀದ್ ಹಬ್ವದ ಪ್ರಯುಕ್ತ , ಪಟ್ಟಣದ ಹೊರವಲಯದ ಬೃಹತ್ ಸಾಮೂಹಿಕ ಪ್ರಾರ್ಥನಾ ಮಸೀದಿಯಲ್ಲಿ. ಪಟ್ಟಣದ ಸಾವಿರಾರು ಮುಸ್ಲೀಂ ಭಾಂದವರು ಸೇರಿದಂತೆ , ವಿವಿದೆಡೆಗಳಿಂದ ಆಗಮಿಸಿದ್ದ ಮುಸ್ಲಿಂ ಸಮುದಾಯದವರು. ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ , ಸರ್ವಜೀವಿಗಳಿಗೆ ಲೇಸನ್ನು ಕರುಣಿಸೆಂದು ದೇವರಲ್ಲಿ ಮೊರೆ ಇಟ್ಟರು. ವೈಯಕ್ತಿಕ ಶ್ರೇಯಸ್ಸು ಸೇರಿದಂತೆ , ಲೋಕ ಕಲ್ಯಾಣಕ್ಕಾಗಿ ಕೃಪೆ ತೋರುವಂತೆ ದೇವರಲ್ಲಿ ಕೋರಿದರು. ಅಖಿಲ್ ಮೌಲಾನಾರವರು , ಹಾಗೂ ಆಫೀಜ್ ಮೌಲಾನಾ ಅನ್ವರ ಸಾಹೇಬ್ ರವರ ನೇತೃತ್ವದಲ್ಲಿ. ಎರೆಡು ಮುಸ್ಲಿಂ ಸಮುದಾಯಗಳಿಂದ , ಪರಸ್ಪರ ಪ್ರತ್ಯೇಕವಾಗಿ ಪ್ರತ್ಯೇಕ ಸಮಯದಲ್ಲಿ. ಹಾಗೂ ಪ್ರತ್ಯೇಕ ಸ್ಥಳಗಳಲ್ಲಿ ಸಾಮೂಹಿಕ ಪ್ರಾರ್ಥನೆ ಜರುಗಿತು. ಸಮಾಜದ ಹಿರಿಯರು ಹಾಗೂ ಮಾಜಿ ಸಚಿವರಾದ ಎನ್ ಎಮ್ ನಬಿಸಾಹೇಬ್ . ಕರ್ನಾಟಕ ಮುಸ್ಲಿಂ ಸಂಘದ ಮುಖಂಡರು ಹಾಗೂ ವಕೀಲರಾದ ಎಲ್ ಎಸ್ ಬಷೀರ್ ಅಹಮದ್ ಸೇರಿದಂತೆ ಅನೇಕ ಗಣ್ಯರು ಮುಖಂಡರು. ಮಕ್ಕಳು ಯುವಕರು ಹಿರಿಯರು ವೃದ್ಧರಾದಿಯಾಗಿ ಸಾವಿರಾರು ಮುಸ್ಲಿಂ ಭಾಂದವರು , ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ಡಿವೈ ಎಸ್ಪಿ ಮಲ್ಲೇಶ ದೊಡ್ಮನೆ ರವರ ನೇತೃತ್ವದಲ್ಲಿ , ಸಿಪಿಐ ಪ್ರಹ್ಲಾದ್ ಆರ್ ಚನ್ನಗಿರಿ. ಹಾಗೂ ಪಿಎಸ್ ಐ ಸಿ. ಪ್ರಕಾಶರವರು. ತಮ್ಮ ಸಿಬ್ಬಂದಿಯವರೊಡಗೂಡಿ , ಶಾಂತಿ ಸುವ್ಯವಸ್ಥೆ ಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದರು.

✍️ * ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ – 9008937428 / 8151937428*
