ಅಕ್ರಮ ಮಧ್ಯ ಮಾರಾಟ ತಡೆಹಿಡಿಯಲು ಅಬಕಾರಿ ಇಲಾಖೆಗೆ ಕರವೇ ನಾರಾಯಣಗೌಡ ಬಣ ಸಂಘಟನೆ ಒತ್ತಾಯ.

ಅಕ್ರಮ ಮಧ್ಯ ಮಾರಾಟ ತಡೆಹಿಡಿಯಲು ಅಬಕಾರಿ ಇಲಾಖೆಗೆ ಕರವೇ ನಾರಾಯಣಗೌಡ ಬಣ ಸಂಘಟನೆ ಒತ್ತಾಯ.

ಗಂಗಾವತಿ.ಮೇ28 ತಾಲೂಕಿನಾಧ್ಯಂತ ಅಕ್ರಮ ಮಧ್ಯ ಮಾರಾಟ ಹೆಗ್ಗಿಲ್ಲದೇ ನಡೆಯುತ್ತಿದ್ದು ಕೂಡಲೇ ಅಬಕಾರಿ ಇಲಾಖೆ ಅಕ್ರಮ ಮಧ್ಯ ಮಾರಾಟವನ್ನು ತಡೆಹಿಡಿದು, ಅಕ್ರಮ ಮಧ್ಯ ಮಾರಾಟಗಾರರ ಮೇಲೆ ಶಿಸ್ತು ಕ್ರಮ ಜರುಗಿಸಲು ಕರವೇ (ನಾರಾಯಣಗೌಡ ಬಣ) ಒತ್ತಾಯಿಸಿದೆ ಎಂದು ತಾಲೂಕ ಅಧ್ಯಕ್ಷರಾದ ಮಲ್ಲಿಕಾರ್ಜುನ ಗಿಣಿಮೋತಿ ತಿಳಿಸಿದರು.ಅವರು ಗಂಗಾವತಿ ತಾಲೂಕಿನಾಧ್ಯಂತ ಅಕ್ರಮ ಮಧ್ಯ ವ್ಯಾಪಾರವನ್ನು ತಡೆಹಿಡಿಯಲು ಒತ್ತಾಯಿಸಿ, ಗಂಗಾವತಿ ಅಬಕಾರಿ ನಿರೀಕ್ಷಕರಿಗೆ ಮನವಿ ಸಲ್ಲಿಸಿ ಮಾತನಾಡಿದರು. ನಮ್ಮ ಸಂಘಟನೆಯಿಂದ ಈಗಾಗಲೇ ಮೇ-16 ರಂದು ಅಬಕಾರಿ ಉಪ ಆಯುಕ್ತರು ಹಾಗೂ ಮೇ-18 ರಂದು ಕೊಪ್ಪಳ ವಲಯ ಅಬಕಾರಿ ನಿರೀಕ್ಷರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಸಿಎಲ್-2 ಸನ್ನದುದಾರರ ಎಲ್ಲಾ ಅಂಗಡಿಗಳಲ್ಲಿ ಕೌಂಟರ್ ನಿಂದ ಗ್ರಾಹಕರ ಟೇಬಲ್ ಗಳಿಗೆ ರಾಜಾರೋಷವಾಗಿ ಮದ್ಯ ಸರಬರಾಜು ಮಾಡುತ್ತಿದ್ದು, ಇದು ಕರ್ನಾಟಕ ಅಬಕಾರಿ ನಿಯಮಗಳು 1968ರ ನಿಯಮ 5(2)ರ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿದಂತಾಗಿದೆ. ಈ ಅಂಗಡಿಗಳು ಚಿಲ್ಲರೆ ಮಾರಾಟದ ಪರವಾನಿಗೆಯನ್ನು ದುರುಪಯೋಗಪಡಿಸಿಕೊಂಡು, ಅಬಕಾರಿ ಶುಲ್ಕವನ್ನು ಪಾವತಿಸದೇ ಕಾನೂನುಬದ್ಧ ಮಾನದಂಡಗಳನ್ನು ಅನುಸರಿಸದೇ ಯಾವುದೇ ಮದ್ಯದ ರೇಟ್ ಬೋರ್ಡ್ ಹಾಕದೇ ಸಿಎಲ್-9 ಬಾರ್ ಮತ್ತು ರೆಸ್ಟೋರೆಂಟ್ ಗಳಂತೆ ಅನಧಿಕೃತವಾಗಿ ವರ್ತಿಸುತ್ತಿವೆ. ಇದರಿಂದ ಜನವಸತಿ ಪ್ರದೇಶಗಳಲ್ಲಿನ ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ವಯೋಸಹಜ ಕಾಯಿಲೆ ಹೊಂದಿರುವವರಿಗೆ ಕಿರಿಕಿರಿ ಉಂಟುಮಾಡಿ ಅಶಾಂತಿಯ ವಾತಾವರಣ ಉಂಟಾಗುತ್ತಿದೆ ಎಂದು ಈಗಾಗಲೇ ಮೇ-18 ರಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕೊಪ್ಪಳ ಜಿಲ್ಲಾಧ್ಯಕ್ಷರಾದ ಶ್ರೀ ಬಿ. ಗಿರೀಶಾನಂದ ಜ್ಞಾನಸುಂದರ ನೇತೃತ್ವದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಮನವಿ ಸಲ್ಲಿಸಲಾಗಿದೆ. ಆದರೂ ಕೂಡಾ ಜಿಲ್ಲಾ ಮತ್ತು ತಾಲೂಕ ಕೇಂದ್ರ ಸ್ಥಾನದಿಂದ ಗ್ರಾಮೀಣ ಪ್ರದೇಶದಲ್ಲಿರುವ ಡಾಬಾಗಳು. ಪಾನ್ ಬೀಡಾ ಅಂಗಡಿಗಳು. ಸಣ್ಣ ಸಣ್ಣ ಕಿರಾಣಿ ಅಂಗಡಿಗಳಲ್ಲಿ ಕದ್ದು ಮುಚ್ಚಿ ಅಕ್ರಮ ಮದ್ಯ/ಬಿಯರ್/ವೈನ್ ವ್ಯಾಪಾರ ಮಾಡುತ್ತಿದ್ದು, ಅಬಕಾರಿ ಸತ್ಯಾಪನಾ ಪತ್ರ (ಇವಿಸಿ) ಪಡೆಯದೇ ಕರ್ನಾಟಕ ಅಬಕಾರಿ (ಮದ್ಯಪಾನೀಯಗಳ ಸ್ವಾಧೀನತೆ. ಸಾಗಾಣಿಕೆ. ಆಮದು ಮತ್ತು ರಫ್ತು) ನಿಯಮಗಳು, 1965ರ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಅನ್ವಯಿಸುವ ಅಬಕಾರಿ ರಫ್ತು ಸುಂಕವನ್ನು ಭರಿಸದೇ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿರುವುದನ್ನು ನಮ್ಮ ಕರವೇ ಬಲವಾಗಿ ಖಂಡಿಸುತ್ತದೆ ಎಂದರು.ಈ ಸಂದರ್ಭದಲ್ಲಿ ಕರವೇ (ನಾರಾಯಣಗೌಡ ಬಣ) ಸಂಘಟನೆಯ ತಾಲೂಕ ಉಪಾಧ್ಯಕ್ಷರಾದ ನಿಸಾರ್, ಸಾಮಾಜಿಕ ಜಾಲತಾಣ ಶಬ್ಬಿರ್ ಪಾಶಾ, ಬಸವರಾಜ ಮಲ್ಲಾಪುರ, ಕಾರ್ಯದರ್ಶಿಗಳಾದ ಪ್ರವೀಣಕುಮಾರ, ಸ್ವಾಮಿ ಹಣವಾಳ, ಸುನೀಲಕುಮಾರ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *