ಅ. 28ಕ್ಕೆ ನಾಯಕ ಸಮಾಜದ ಜಿಲ್ಲಾ ಯುವ ಪದಾಧಿಕಾರಿಗಳ ಆಯ್ಕೆ… ​

ಅ. 28ಕ್ಕೆ ನಾಯಕ ಸಮಾಜದ ಜಿಲ್ಲಾ ಯುವ ಪದಾಧಿಕಾರಿಗಳ ಆಯ್ಕೆ… ​

ಗಂಗಾವತಿ : ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ (ರಿ), ಕೊಪ್ಪಳ ಜಿಲ್ಲಾ ಯುವ ಘಟಕ ಹಾಗೂ ಜಿಲ್ಲೆಯ ಎಲ್ಲ ತಾಲೂಕ ಯುವ ಘಟಕ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ಆಗಸ್ಟ್ 28 (ಶುಕ್ರವಾರ) ರಂದು ಸಂಜೆ 05:00 ಗಂಟೆಗೆ ಕೊಪ್ಪಳದ ಪ್ರವಾಸಿ ಮಂದಿರದಲ್ಲಿ (ಐ.ಬಿ.) ಯಲ್ಲಿ ಆಯೋಜಿಸಲಾಗಿದೆ.​ಈ ಆಯ್ಕೆ ಸಭೆಯಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷರಾದ ಟಿ.ಆರ್. ತುಳಸಿರಾಮ್ ಅವರು ಹಾಗೂ ರಾಜ್ಯ ಕಾರ್ಯದರ್ಶಿ ಬೆಟ್ಟಪ್ಪ ಕಾಟಾಪುರ ಅವರು ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ.​ಸಮುದಾಯದ ಯುವಕರನ್ನು ಸಂಘಟಿಸುವ ಹಾಗೂ ಯುವ ಘಟಕವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಆಯ್ಕೆ ಸಭೆಯನ್ನು ಕರೆಯಲಾಗಿದೆ. ಯುವಜನತೆಗೆ ಸೂಕ್ತ ಮಾರ್ಗದರ್ಶನ ನೀಡಲು ವಾಲ್ಮೀಕಿ ಸಮುದಾಯದ ಹಿರಿಯರು, ಮಾರ್ಗದರ್ಶಕರು, ಉತ್ಸಾಹಿ ಯುವಕರು ಹಾಗೂ ಎಲ್ಲಾ ತಾಲೂಕುಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಅಮೂಲ್ಯ ಸಲಹೆ-ಸೂಚನೆಗಳನ್ನು ನೀಡಬೇಕೆಂದು ರಾಜ್ಯಾಧ್ಯಕ್ಷ ಟಿ. ಆರ್. ತುಳಸಿರಾಮ್ ತಿಳಿಸಿದ್ದಾರೆ

Leave a Reply

Your email address will not be published. Required fields are marked *