ಭಾರತ ಭಾಗ್ಯವಿಧಾತ ಬಾಬಾಸಾಹೇಬ ಅಂಬೇಡ್ಕರರ ಸಾoವಿಧಾನಿಕ ಮಾರ್ಗದಲ್ಲಿ ಸ್ವತಂತ್ರ ಭಾರತವನ್ನು ಮುನ್ನಡೆಸೋಣ- ಪ್ರೊ.ಕರಿಗೂಳಿ…

ಗಂಗಾವತಿ ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಹಾಗೂ ಘನತೆಯಿಂದ ಆಚರಿಸಲಾಯಿತು. ಗಾಂಧೀಜೀ ಹಾಗೂ ಬಾಬಾಸಾಹೇಬರ ಅಂಬೇಡ್ಕರರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ನಂತರ ಧ್ವಜಾರೋಹಣ ನೆರವೇರಿಸಲಾಯಿತು, ಧ್ವಜಾರೋಹಣ ಮಾಡಿ ಮಾತನಾಡಿದ ಪ್ರಾಂಶುಪಾಲರಾದ ಡಾ.ಕರಿಗೂಳಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿ ಮಡಿದ ಮಹನೀಯರ ತ್ಯಾಗ ಬಲಿದಾನಗಳ ಕುರಿತು ಹಾಗೂ ಹುತಾತ್ಮರಾದ ಅಸoಖ್ಯಾತ ವೀರ ಸೇನಾನಿಗಳ ಕುರಿತು ಮಾತನಾಡಿದರು, ಅವರ ತ್ಯಾಗವು ದೇಶಪ್ರೇಮಿಗಳಿಗೆ ಚಿರಕಾಲ ಆದರ್ಶ ಎಂದರು. ಭವ್ಯಭಾರತದ ಪ್ರಥಮ ಪ್ರಜೆಗಳಾದ ಮಾನ್ಯ ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದಂತೆ *ವಿದ್ಯಾರ್ಥಿಗಳೇ ನವಭಾರತದ ಭವಿಷ್ಯದ ನಿರ್ಮಾತೃಗಳು* ಎಂಬುದದನ್ನು ವಿದ್ಯಾರ್ಥಿಗಳೆಲ್ಲರೂ ಜವಾಬ್ದಾರಿಯುತವಾಗಿ ಸ್ವೀಕರಿಸಬೇಕು ಎಂದು ಕಿವಿಮಾತು ಹೇಳಿದರು,ಸ್ವತಂತ್ರ ಭಾರತವನ್ನು ಸಾoವಿಧಾನಿಕ ಮಾರ್ಗದಲ್ಲಿ ನಡೆಸಲು ಎಲ್ಲರೂ ಸನ್ನದ್ಧರಾಗಬೇಕೆಂದು ಕರೆನೀಡಿದರು.ಈ ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ವೀರೇಶ್, ಡಾ.ವಿರೂಪಾಕ್ಷ.ಕೆ, ರವಿಕುಮಾರ, ಡಾ.ಶಶಿಕುಮಾರ, ಅತಿಥಿ ಉಪನ್ಯಾಸಕರಾದ ದೇವರಾಜ್, ಈಶಪ್ಪ,ಆಡಳಿತ ಸಿಬ್ಬಂದಿಯಾದ ಜಬೀನಾ ಬೇಗಂ, ವಿನಾಯಕ ಹಾಗೂ ಸಹಾಯಕ ಸಿಬ್ಬಂದಿ ಉಪಸ್ಥಿತರಿದ್ದರು.

