ದಲಿತ ಯುವ ಮುಖಂಡ ಭೂಮಾನಂದ ಹತ್ಯೆ: ಡಾ// ಬಿ. ಆರ್.ಅಂಬೇಡ್ಕರ್ ದಲಿತ ಪ್ರಜಾ ಸಂಘದಿಂದ ರಾಜ್ಯಪಾಲರಿಗೆ ಮನವಿ..

ಗಂಗಾವತಿ. ಜು ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹ ದ್ದಿನಾಳ ಗ್ರಾಮದ ಮಾದಿಗ ಸಮಾಜದ ಯುವ ಮುಖಂಡ *ಭೂಮಾನಂದ ಕೊಲೆ ಅವರ ಹತ್ಯೆಯನ್ನು ಖಂಡಿಸಿ ಡಾ. ಬಿ.ಆರ್. ಅಂಬೇಡ್ಕರ್ ದಲಿತ ಪ್ರಜಾ ಸಂಘ (ರಿ) ರಾಜ್ಯ ಸಮಿತಿ ವತಿಯಿಂದ ಗುರುವಾರ ಗಂಗಾವತಿ ತಹಶೀಲ್ದಾರ್ ಕಚೇರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಸಂಘದ ರಾಜ್ಯ ಸಮಿತಿಯು ಸಲ್ಲಿಸಿದ ಮನವಿಯಲ್ಲಿ, ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ಆರೋಪಿಗಳು ಮತ್ತು ಅವರ ಬೆಂಬಲಿಗರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದೆ.ರಾಜ್ಯದಲ್ಲಿ ದಲಿತ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರ ಜೀವ ರಕ್ಷಣೆಗೆ ಸೂಕ್ತ ಪೊಲೀಸ್ ಭದ್ರತೆ ನೀಡಬೇಕು. ದಲಿತರ ಮೇಲೆ ನಡೆಯುವ ಯಾವುದೇ ರೀತಿಯ ದೌರ್ಜನ್ಯ, ಅನ್ಯಾಯ ಮತ್ತು ಹತ್ಯೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಸಾಮಾಜಿಕ ಹೋರಾಟಗಾರರಾಗಿ ಮತ್ತು ಸೂಕ್ಷ್ಮ ಸಮುದಾಯಗಳ ಧ್ವನಿಯಾಗಿ ಕೆಲಸ ಮಾಡುವವರ ಮೇಲೆ ನಡೆಯುತ್ತಿರುವ ದಾಳಿಗಳನ್ನು ಸಂಘ ತೀವ್ರವಾಗಿ ಖಂಡಿಸಿದೆ. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಹುಲುಗಪ್ಪ ಕೊಜ್ಜಿ ದೇವರಾಜ್ ಕುಂಟೋಜಿ ವಕೀಲರು ಮಹದೇವ ಶರಣಪ್ಪ ಸಿದ್ದಾಪುರ ದೇವದಾಸ್ ನಾಗರಾಜ್ ನೀಲಪ್ಪ ಡಣಾಪುರ್ ಉಳಿದಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.–

