ವಿವಿಧ ಇಲಾಖೆ ಸಹಯೋಗದಲ್ಲಿ : ರಸ್ತೆ ಸುರಕ್ಷತಾ ಅಭಿಯಾನದ ಅಂಗವಾಗಿ ಕಣ್ಣಿನ ತಪಾಸಣಾ ಶಿಬಿರ,,

ಗಂಗಾವತಿ : 23 ವಾಹನ ಚಾಲಕರು ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ವಾಹನ ಚಾಲನೆಯಲ್ಲಿ ಜಾಗೃತಿ ವಹಿಸುವುದು ಅವಶ್ಯವಾಗಿದೆ ಎಂದು ಗಂಗಾವತಿ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಹೇಳಿದರು.

ಅವರು ನಗರ ಠಾಣೆಯಲ್ಲಿ ಗುರುವಾರದಂದು ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಹಾಗೂ ಸಾರಿಗೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ರಸ್ತೆ ಸುರಕ್ಷತೆ ಅಭಿಯಾನದ ಅಂಗವಾಗಿ ಏರ್ಪಡಿಸಿದ ಆಟೋ ಚಾಲಕರ ಮತ್ತು ಇತರೆ ವಾಹನ ಚಾಲಕರಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರ ನೆರವೇರಿಸಿ ಮಾತನಾಡಿ ಹಣ ನೀಡಿದರೇ ಇಂದು ಜಗತ್ತಿನಲ್ಲಿ ದೊರಕದ ವಸ್ತು ಯಾವುದು ಇಲ್ಲಾ, ಆದರೆ ಭಗವಂತ ನೀಡಿದ ಈ ಶರೀರವನ್ನು ಹಣ ಕೊಟ್ಟು ಕೊಃಡುಕೊಳ್ಳಲು ಸಾಧ್ಯವಿಲ್ಲಾ, ಭಗವಂತನ ಸೃಷ್ಠಿಯನ್ನು ಕಾಪಾಡಿಕೊಂಡು ಹೋಗಬೇಕಾದರೇ ವಾಹನ ಚಾಲನೆಯಲ್ಲಿ ಜಾಗೃತಿ ಮುಖ್ಯ ಎಂದು ವಾಹನ ಸವಾರರಿಗೆ ಹಾಗೂ ಚಾಲಕರಿಗೆ ಕಿವಿ ಮಾತು ಹೇಳಿದರು.ನಿಮ್ಮ ಅಮೂಲ್ಯವಾದ ದೇಹವನ್ನು ಸಂರಕ್ಷಣೆ ಮಾಡಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದ್ದು, ದ್ವೀ ಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಹಾಗೂ ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಬಾರದು. ಮತ್ತು ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ವಾಹನಗಳು ರಸ್ತೆಗೆ ಇಳಿಯುವ ಮುನ್ನ ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತ ಪಡಿಸಿಕೊಂಡು ವಾಹನ ಚಾಲನೆ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಪೊಲೀಸ್ ಠಾಣೆ ಪಿಐ ಪ್ರಕಾಶ ಮಾಳಿ, ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ರಂಗಪ್ಪ ದೊಡ್ಡಮನಿ, ಸಂಚಾರ ಪೊಲೀಸ್ ಠಾಣೆ ಪಿಎಸ್ಐ ಇಸ್ಮಾಯಿಲ್, ಶಾರಮ್ಮ, ಸೇರಿದಂತೆ, ವಕೀಲರು, ಸಾರಿಗೆ ಇಲಾಖೆ ಅಧಿಕಾರಿಗಳು ಇತರರು ಇದ್ದರು.

