ಕೂಡ್ಲಿಗಿ : ತ್ರಿವಿದ ದಾಸೋಹಿ ಲಿಂಗೈಕ್ಯ ಶ್ರೀ ಡಾ” ಶಿವಕುಮಾರ ಶ್ರೀಗಳಿಗೆ ” ಭಾರತ ರತ್ನ ” ಪ್ರಶಸ್ತಿ ನೀಡಬೇಕಿದೆ_ಡಾ॥ ಎನ್ ಟಿ ಶ್ರೀನಿವಾಸ್-

ವಿಜಯನಗರ ಜಿಲ್ಲೆ ಕೂಡ್ಲಿಗಿ : ಅಸಂಖ್ಯಾತ ವಿದ್ಯಾರ್ಥಿಗಳಿಗೆ , ಹಾಗೂ ಕೋಟ್ಯಾಂತರ ಜನರಿಗೆ ಅನ್ನ ಆಕ್ಷರ ಜ್ಞಾನಾಶ್ರಯ ದಾಸೋಹಿಗಳಾಗಿರುವ. ದಾಸೋಹಿಗಳಾದ ನಾಡಿನ ನಡೆದಾಡುವ ದೇವರಾದ , ಲಿಂಗೈಕ್ಯ ಶ್ರೀ ಡಾ” ಶಿವಕುಮಾರ ಸ್ವಾಮೀಜಿಗಳವರಿಗೆ. ಭಾರತ ಸರ್ಕಾರ ” ಭಾರತ ರತ್ನ ” ಪ್ರಶಸ್ತಿ ನೀಡಿ ಗೌರವಿಸಬೇಕಿದೆ ಎಂದು , ಕ್ಷೇತ್ರದ ಶಾಸಕರಾದ ಡಾ ॥ ಎನ್.ಟಿ.ಶ್ರೀನಿವಾಸ್ ರವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಜ 21ರಂದು ಪಟ್ಟಣದ ಮದಕರಿ ವೃತ್ತದಲ್ಲಿ , ಅಖಿಲ ಭಾರತ ವೀರಶೈವ ಲಿಂಗಾಯ್ತ ಮಹಾ ಸಭಾ ಕೂಡ್ಲಿಗಿ ಘಟಕದಿಂದ ಆಯೋಜಿಸಲಾಗಿದ್ದ. ಲಿಂಗೈಕ್ಯ ಡಾ ॥ ಶಿವಕುಮಾರ ಸ್ವಾಮೀಜಿಗಳ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ , ಸ್ವಾಮೀಜಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅನ್ನ ದಾಸೋಹಕ್ಕೆ ಚಾಲನೆ ನೀಡಿ ನಂತರ ನುಡಿ ನಮನ ಸಲ್ಲಿಸಿದರು. ಅನ್ನ ಅಕ್ಷರ ಜ್ಞಾನಾಶ್ರಯ ತ್ರಿವಿದ ದಾಸೋಹ ಸೇವೆಗಳಿಂದಲೇ ನಾಡಿಗೆ ಪ್ರಖ್ಯಾತಿಯಾಗಿರುವ , ತುಮಕೂರು ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀ ಡಾ ॥ ಶಿವಕುಮಾರ ಸ್ವಾಮೀಜಿಯವರು ನಾಡಿನ ಹೆಮ್ಮೆಯಾಗಿದ್ದವರು. ಅವರು ನಾಡಿಗೆ ಸಲ್ಲಿಸಿದ ಅಗಣಿತ ಸೇವೆ , ಮುನುಕುಲಕ್ಕೆ ಆದರ್ಶಪ್ರಾಯವಾಗಿದೆ. ಅವರ ಸಾಮಾಜಿಕ ಕಳ ಕಳಿಯು ನಾಡಿಗೆ ದೇಶಕ್ಕೆ ಮಾತ್ರವಲ್ಲ , ಇಡೀ ಜಗತ್ತಿಗೇ ಮಾದರಿಯಾಗಿದೆ ಎಂದರು. ಎಲ್ಲಾ ಸಮುದಾಯಗಳ ಮಠ ಮಾನ್ಯಗಳು ಹಾಗೂ ಎಲ್ಲಾ ಆಧ್ಯಾತ್ಮ ಕೇಂದ್ರಗಳು , ಅವರ ಸಾಮಾಜಿಕ ಸೇವಾ ನಿಷ್ಠೆಯನ್ನು ಅನುಸರಿಸಬಹುದಾಗಿದೆ ಎಂದರು. ಶ್ರೀ ಡಾ ” ಶಿವಕುಮಾರ ಮಹಾಸ್ವಾಮಿಗಳ ಸಾಮಾಜಿಕ ಚಿಂತನೆಗಳನ್ನು , ಯುವ ತಲೆಮಾರಿಗೆ ತಿಳಿಸಬೇಕಿದೆ ಎಂದರು. ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀ ಬಸವಣ್ಣನವರ , “ಕಾಯಕವೇ ಕೈಲಾಸ” ಎಂಬ ತತ್ವದಂತೆ ಮುನ್ನಡೆದು. 7 ದಶಕಗಳಿಗಿಂತಲೂ ಹೆಚ್ಚು ಕಾಲ , ಎಲ್ಲ ವರ್ಗದ ಬಡವರಿಗೆ ಮಕ್ಕಳಿಗೆ ಅನ್ನ, ಅಕ್ಷರ, ಜ್ಞಾನ ದಾಸೋಹವನ್ನು ಕಲ್ಪಿಸಿಕೊಟ್ಟು. ಜಾತ್ಯಾತೀತ ಮನೋಭಾವದೊಂದಿಗೆ , ಸರ್ವಜನಾಂಗವರಿಗೆ ಪ್ರತಿ ದೀನ ದಲಿತರಿಗೆ ಸ್ವಾಮೀಜಿಗಳು ನೆರವಾಗಿದ್ದಾರೆ. ಹೀಗಾಗಿ ನಾವೆಲ್ಲರೂ ಅವರ ಹಾದಿಯಲ್ಲಿ ಸಾಗೋಣ , ಅವರ ಆದರ್ಶಗಳನ್ನು ರೂಡಿಸಿಕೊಳ್ಳೋಣ ಎಂದರು. ಪೂಜ್ಯರಿಗೆ ” ಭಾರತ ರತ್ನ ” ಪ್ರಶಸ್ತಿ ನೀಡಲು ಸರ್ಕಾರಕ್ಕೆ ಪತ್ರವನ್ನು , ಈ ಹಿಂದೆ ಕೆಲವು ಬಾರಿ ನೀಡಲಾಗಿದೆ. ಈ ಕುರಿತು ಭಾರತ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಪತ್ರ ನೀಡುವ ಮೂಲಕ , ತಾವು ಪುನಃ ಮನವಿ ಮಾಡುವುದಾಗಿ ಅವರು ತಿಳಿಸಿದರು. ಸಿದ್ಧಗಂಗಾ ಶ್ರೀ ಡಾ॥ ಶಿವಕುಮಾರ ಸ್ವಾಮೀಜಿಗಳು ಲಿಂಗೃೆಕ್ಯರಾದಾಗಿನಿಂದ , ಅವರ ತ್ರಿವಿಧ ದಾಸೋಹ ಸೇವೆಯನ್ನು ಸ್ಮರಿಸಲು. ನಾಡಿನಾಧ್ಯಾಂತ ವಿವಿದೆಡೆಗಳಲ್ಲಿ , ಸ್ಥಳೀಯ ವಿವಿದ ಸಂಘ ಸಂಸ್ಥೆಗಳಿಂದ. ಪ್ರತಿ ವರ್ಷವು ಜನವರಿ 21ರಂದು , ರಾಜ್ಯಾದ್ಯಂತ ‘ದಾಸೋಹ ದಿನ’ ಆಚರಿಸಲಾಗುತ್ತದೆ. ಅಂತೆಯೇ ಪಟ್ಟಣದಲ್ಲಿ , ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ವತಿಯಿಂದ. ಸ್ಮರಣೋತ್ಸವ ಹಾಗೂ ದಾಸೋಹ ದಿನವನ್ನು ಅ.ಭಾ.ವೀ.ಲಿಂ ಮಹಾ ಸಭಾದಿಂದ ಹಮ್ಮಿಕೊಂಡಿರುವುದು , ಅರ್ಥಪೂರ್ಣ ಕಾರ್ಯಕ್ರಮವಾಗಿ ಎಂದರು. ಅವರು ನೆರೆದಿದ್ದವರಿಗೆ ಪ್ರಸಾದ ಅನ್ನ ಸಂತರ್ಪಣೆ ಮಾಡುವ ಮೂಲಕ , ಅನ್ನ ದಾಸೋಹಕ್ಕೆ ಚಾಲನೆ ನೀಡಿದರು. ಮತ್ತು ಸ್ವತಃ ಅವರು , ಅವರ ಸಿಬ್ಬಂದಿಯರು ಪ್ರಸಾದ ವಿನಿಯೋಗ ಮಾಡಿದರು. *ಮಡದಿ ‘ ಗೀತಾ ‘ ರವರನ್ನು ಪ್ರೀತಿಯಿಂದ ” ಸಿದ್ಧಗಂಗಾ ” ಎಂದು ಅಭಿಮಾನದಿಂದ ಕರೆಯುವೆ- ಪ ಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ*- ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕರವರು ಮಾತನಾಡಿ , ನಾಡಿಗೆ ಪೂಜ್ಯ ಶ್ರೀಗಳ ಹಾಗೂ ಸಿದ್ಧಗಂಗಾ ಮಠದ ಕೊಡುಗೆ ಅಪಾರ. ಈ ಕಾರಣಕ್ಕೆ ತಾವು ಹಾಗೂ ತಮ್ಮ ಕುಟುಂಬವು ಸಿದ್ಧಗಂಗಾಮಠದ ಮೇಲೆ ಅಪಾರ ಭಕ್ತಿ ಹಾಗೂ ಗೌರವ ಹೊಂದಿರುವುದಾಗಿ ತಿಳಿಸಿದರು. ಪೂಜ್ಯ ಶ್ರೀಗಳು ಲಿಂಗೈಕ್ಯರಾದ ದಿನದಂದು ಇಡೀ ಕುಟುಂಬ ಕಣ್ಣೀರಾಗಿತ್ತು , ಅಂದೇ ಮಠದ ಮೇಲಿನ ಭಕ್ತಿ ಶ್ರದ್ಧೆ ನಿಷ್ಠೆ ಗೌರವ ಮತ್ತಷ್ಟು ಇಮ್ಮಡಿಸಿತ್ತು . ಆ ದಿನವೆಲ್ಲಾ ನಮ್ಮ ಮನೆಯಲ್ಲಿ ತುಮಕೂರಿನ ಸಿದ್ಧಗಂಗಾ ಮಠ ಹಾಗೂ ಶ್ರೀಗಳ ಸೇವೆಯ ಕುರಿತು , ನಮ್ಮಲ್ಲಿಯೇ ಪರಸ್ಪರ ವಿಚಾರ ವಿನಿಮಯ ಚರ್ಚೆ ಮಂಥನ ನಡೆದಿತ್ತು. ಈ ಸಂದರ್ಭದಲ್ಲಿ ನಾನೇ ಸ್ವಯಂ ಪ್ರೇರಣೆಯಿಂದಾಗಿ , ನನ್ನ ಶ್ರೀಮತಿಯವರಾದ ಗೀತಾರವರನ್ಹು ಪ್ರೀತಿಯಿಂದ ” ಸಿದ್ದಂಗಂಗಾ ” ಎಂದು ಗೌರವ ಹಾಗೂ ಪ್ರೀತಿಯಿಂದ ಸಂಭೋದಿಸಲು ಆರಂಭಿಸಿದೆನು . ಅಂದಿನಿಂದ ಈ ವರೆಗೂ ತಮ್ಮ ಮಡದಿಯನ್ನು ಹಾಗೆಯೇ ಪ್ರೀತಿ ಗೌರವದಿಂದ ಸಂಭೋದಿಸುತ್ತಿದ್ದು , ಈ ಮೂಲಕ ತಮ್ಮ ಮಡದಿಗೆ ” ಸಿದ್ಧಗಂಗಾ “ಎಂದು ಪ್ರೀತಿಯ ನಾಮಧೇಯ ಮಾಡೋ ಮೂಲಕ. ತುಮಕೂರಿನ ಸಿದ್ಧಗಂಗಾ ಮಠ ಹಾಗೂ ಶ್ರೀಗಳ ಸೇವೆಯನ್ನು , ಸದಾ ನೆನೆಯುವ ಸುಯೋಗ ದೊರಕಿದಂತಾಂಗಿದೆ ಎಂದರು ಅವರು ತಿಳಿಸಿದರು. ಹಲವು ವರ್ಷಗಳ ಹಿಂದೆ , ತಾವು ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರ ಮಾಲಿಕತ್ವದ , ತುಮಕೂರಿನಲ್ಲಿರುವ ಅಕ್ಷರ ಐ ಪೌಂಡೇಶನ್ ಆಸ್ಪತ್ರೆಯಲ್ಲಿ. ಶ್ರೀ ಶಿವಕುಮಾರ ಸ್ವಾಮೀಜಿಗಳನ್ನು ಆಹ್ವಾನಿಸಿ , ಅವರ ಪಾದ ಪೂಜೆ ಮಾಡಲಾಗಿತ್ತು ಈ ಸಂದರ್ಭದಲ್ಲಿ ತಾವು ಉಪಸ್ಥಿತರಿದ್ದು ಶ್ರೀಗಳ ಪಾದಸ್ಪರ್ಷ ಮಾಡಿ ನಮಸ್ಕರಿಸಿದ್ದು ಸ್ಮರಿಸಿಕೊಂಡರು. ಶ್ರೀಗಳ ಪಾದ ಸ್ಪರ್ಷದಿಂದಲೇ ತಮ್ಮ ಜೀವನ ಪಾವನವಾಗಿದೆ ಎಂದರೆ ತಪ್ಪಾಗಲಿಕಿಲ್ಲ ಎಂದು ನುಡಿಯೋ ಮೂಲಕ , ಕಾವಲಿ ಶಿವಪ್ಪರವರು ಶ್ರೀಗಳಿಗೆ ಭಕ್ತಿಪೂರ್ವಕ ನುಡಿನಮನ ಸಲ್ಲಿಸಿದರು. ಪ್ರೀತಿಯಿಂದ ಪ್ರೇರಣೆಯಿಂದಾಗಿ ಅಖಿಲ ಭಾರತ ವೀರಶೈವ ಲಿಂಗಾಯ್ತ ಮಹಾ ಸಭಾದ ತಾಲೂಕಾಧ್ಯಕ್ಷರಾದ ಸುನೀಲ್ ಗೌಡ, ಕಾರ್ಯದರ್ಶಿಗಳಾದ ಸ್ಪಂದನ ಸಂಸ್ಥೆಯ ಜಿ.ಎಸ್. ಗಿರೀಶ್, ಜಿಲ್ಲಾ ನಿರ್ದೇಶಕರಾದ ಬಣವಿಕಲ್ಲು ಕಾಮಶಟ್ಟ್ರು ನಾಗರಾಜ, ನಂದಿ ಬಸವರಾಜ, ಪಿ ಶಿವರಾಜ, ಹಿರಿಯನಾಗರೀಕರಾದ ವಿಭೂತಿ ವೀರಣ್ಣ , ಕಲಾವಿದ ಅಗಸಗಟ್ಟೆ ತಿಂದಪ್ಪ , ಕಟ್ಟೆ ಬಸಣ್ಣ, ಕೆ. ಎಂ. ವಿರೇಶ, ಮುಖಂಡರಾದ ಮರುಳುಸಿದ್ಧನಗೌಡ, ವಿರೇಶ ಅಂಗಡಿ, ಮೆಡಿಕಲ್ ಸ್ಟೋರ್ ಕಕ್ಕುಪ್ಪಿ ಪ್ರಶಾಂತ, ಶೇಖರಯ್ಯ, ಕಾಯಿಕೆಡ ಕೊಡದೀರಪ್ಪ , ಪ ಪಂ ಮಾಜಿ ಅಧ್ಯಕ್ಷರಾದ ಕಾವಲಿ ಶಿವಪ್ಪನಾಯಕ, ಪಟ್ಟಣ ಶೆಟ್ರು ರವಿಕುಮಾರ , ಜಿ.ಶಿವಣ್ಣ . ಶಾಸಕರ ಆಪ್ತರಾದ ಗೊಂಬಿ ಮರುಳಸಿದ್ದಪ್ಪ , ಯರಮ್ಮನಳ್ಳಿ ಉಮೇಶಪ್ಪ ಸೇರಿದಂತೆ. ಮಹಿಳಾ ಪ್ರಮುಖರಾದ ರೇಖಾ ಮಲ್ಲಿಕಾರ್ಜುನ, ಲಕ್ಷ್ಮೀ ದೇವಿ, ಚಂಪಾ ಚೌಹಾಣ್. ವಿವಿದ ಜನಪ್ರತಿನಿಧಿಗಳು , ವಿವಿದ ಸಮುದಾಯಗಳ ಮುಖಂಡರು , ಸಮಾಜದ ಪ್ರಮುಖರು , ಹಿರಿಯ ನಾಗರೀಕರು , ಗಣ್ಯರು ಉಪಸ್ಥಿತರಿದ್ದರು. ನೂರಾರು ಸಾರ್ವಜನಿಕರು ಹಾಗೂ ನಾಗರೀಕರು , ಅನ್ನ ಪ್ರಸಾದವನ್ನು ವಿನಿಯೋಗಿಸಿದರು.

✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ- 9008937428 / 8151937428*
