ಎಸ್ ಸಿ ಪಿ. ಟಿ ಎಸಪಿ ನಿಧಿಯಿಂದ 23,000 ಕೋಟಿ ಗ್ಯಾರೆಂಟಿ ಯೋಜನೆದುರ್ಬಳಕೆ. ಸಮಗ್ರ ತನಿಖೆಗೆ ದಲಿತ ಸೇನೆ ಆರೋಪ….

ಎಸ್ ಸಿ ಪಿ. ಟಿ ಎಸಪಿ ನಿಧಿಯಿಂದ 23,000 ಕೋಟಿ ಗ್ಯಾರೆಂಟಿ ಯೋಜನೆದುರ್ಬಳಕೆ. ಸಮಗ್ರ ತನಿಖೆಗೆ ದಲಿತ ಸೇನೆ ಆರೋಪ….

ಗಂಗಾವತಿ. ಕರ್ನಾಟಕ ರಾಜ್ಯ ಆಡಳಿತ ರೂ ಡ ಸರ್ಕಾರ ಹಾಗೂ ಹಾಗೂ ವಿರೋಧ ಪಕ್ಷದಲ್ಲಿರುವ ಬಿಜೆಪಿ ಶಾಸಕರುಗಳು ಎಸ್ ಸಿ ಪಿ ಹಾಕು ಟಿ ಎಸ್ ಪಿ ನಿಧಿಯಿಂದ 2025 26ನೆಯ ಅವಧಿಯಲ್ಲಿ 23,000 ಕೋಟಿ ಅನುದಾನವನ್ನು ಗ್ಯಾರೆಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಲಾಗಿದ್ದು ಈ ಕುರಿತು ಸಮಗ್ರ ತನಿಖೆ ಗೆ ರಾಜ್ಯಪಾಲರು ಮುಂದಾಗಬೇಕೆಂದು ದಲಿತ ಸೇನೆಯ ಜಿಲ್ಲಾಧ್ಯಕ್ಷ ಉಡುಚಪ್ಪ ಶ್ರೀರಾಮನಗರ ಹೇಳಿದರು. ಅವರು ಶನಿವಾರದಂದು ಪತ್ರಿಕಾ ಭವನದಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮಾಜಿ ಸಚಿವ ಹೆಚ್ಚಿಸಿ ಮಹಾದೇವಪ್ಪ ಹೇಳಿಕೆ ಯಂತೆ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಎಸ್ ಸಿ ಪಿ ಹಾಗೂ ಎಫ್ ಟಿ ಪಿ ಅಡಿಯಲ್ಲಿ 43000 ಕೋಟಿ ಅನುದಾನ ಹಂಚಿಕೆಯಾಗಿದೆ. 2025ರ ಅಂತ್ಯಕ್ಕೆ 8,459 ಕೋಟಿ ಬಿಡುಗಡೆ ಮಾಡಲಾಗಿದ್ದು ಜನಸಂಖ್ಯೆಗೆ ಅನುಗುಣವಾಗಿ ಶೇಕಡ 24 ರಷ್ಟು ಹಣವನ್ನು ಮೀಸಲಿ ಡಲಾಗಿದೆ ಇದನ್ನು ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಿಗೆ ಬಳಸಲಾಗುತ್ತಿದ್ದು ಅತ್ಯಂತ ಖಂಡನೀಯವಾಗಿದ್ದು ಹಂತ ಹಂತವಾಗಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದರು. ಸದರಿ ಯೋಜನೆಯ ಹಣವನ್ನು ಯಾವುದೇ ಕಾರಣಕ್ಕೂ ಇತರ ಯೋಜನೆಗಳಿಗೆ ಬಳಸುವಂತಿಲ್ಲ ಎಂಬ ಕಾನೂನು ಇದ್ದರೂ ಸಹ ಸರ್ಕಾರ ದು ರುಪಯೋಗಪಡಿಸಿಕೊಂಡಿರುವುದು ಇದಕ್ಕೆ ಸಂಬಂಧಿಸಿದಂತೆ ಆಡಳಿತ ಸರ್ಕಾರ ಹಾಗೂ ವಿರೋಧ ಪಕ್ಷದಲ್ಲಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಸಚಿವರು ಹಾಗೂ ಶಾಸಕರು ಕಣ್ಣು ಇದ್ದರೂ ಕುರುಡರಂತೆ ವರ್ತಿಸುತ್ತಿದ್ದಾರೆ ಇದು ನಮ್ಮ ದೊಡ್ಡ ದುರಂತ ವಾಗಿದೆ ದಲಿತ ಸೇನೆಯ ರಾಜ್ಯಾಧ್ಯಕ್ಷರ ಆದೇಶದ ಅನ್ವಯ ರಾಜ್ಯದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ್ ವಿರುಪಣ್ಣ ಸಂಗಾಪುರ್ ತಾಲೂಕ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು..

Leave a Reply

Your email address will not be published. Required fields are marked *