ಕಿಸ್ಕಿಂದ ಸೇರಿದಂತೆ ಶಕ್ತಿಪೀಠ ವಾದ ಹುಲಿಗಿ ಕ್ಷೇತ್ರದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಹಾಗೂ ಸ್ವಚ್ಛತೆಗೆ ಮುಂದಾಗುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ.

ಕಿಸ್ಕಿಂದ ಸೇರಿದಂತೆ ಶಕ್ತಿಪೀಠ ವಾದ ಹುಲಿಗಿ ಕ್ಷೇತ್ರದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಹಾಗೂ ಸ್ವಚ್ಛತೆಗೆ ಮುಂದಾಗುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ.

ಗಂಗಾವತಿ. ಐತಿಹಾಸಿಕ ಹಾಗೂ ಇತಿಹಾಸ ಪ್ರಸಿದ್ಧವಾದ ಕಿಷ್ಕಿಂದ ಪ್ರದೇಶ ಸೇರಿದಂತೆ ಶಕ್ತಿಪೀಠ ವಾದ ಹುಲಿಗಿ ಪುಣ್ಯಕ್ಷೇತ್ರದಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧಿಸಬೇಕು ಹಾಗೂ ಸ್ವಚ್ಛತೆ ಕಾಪಾಡಬೇಕೆಂದು ನಗರದ ಕೇಂದ್ರೀಯ ಮಹಾವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿನಿ ಡಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಈ ಕುರಿತು ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ ವಿದ್ಯಾರ್ಥಿ ಹುಲಿಗಿ ಶ್ರೀ ಕ್ಷೇತ್ರಕ್ಕೆ ದೇಶದ ನಾನಾ ಭಾಗಗಳಿಂದ ಅಪಾರ ಭಕ್ತಾದಿಗಳು ಆಗಮಿಸುತ್ತಿದ್ದಾರೆ ಅಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ ಗಬ್ಬು ನಾರುವ ತ್ಯಾಜ್ಯಗಳು ಕಂಡಲ್ಲಿ ಪ್ಲಾಸ್ಟಿಕ್ ಸೇರಿದಂತೆ ಹಸಿ ಕಸ ಒಣ ಕಸ ಇವುಗಳಿಂದ ನದಿ ಪಾತ್ರಕ್ಕೆ ಹೋಗುವ ಜನರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಹೀಗಾಗಿ ಕೊಪ್ಪಳ ಜಿಲ್ಲೆಯ ಹುಲಿಗಿ ಕ್ಷೇತ್ರದ ಬಗ್ಗೆ ಹೊರ ರಾಜ್ಯ ಹಾಗೂ ಬೇರೆ ಪ್ರದೇಶದಿಂದ ಆಗಮಿಸುವ ಜನರಿಗೆ ಜಿಲ್ಲೆಯ ಬಗ್ಗೆ ಅಸಡ್ಡೆ ಮನೋಭಾವನೆ ಬಾರದಂತೆ ಮುಂಜಾಗ್ರತ ಕ್ರಮಗಳನ್ನು ಅನುಸರಿಸಬೇಕೆಂದು ತಿಳಿಸಿದ ವಿದ್ಯಾರ್ಥಿನಿ ಕಿಷ್ಕಿಂದ ಅಂಜನಾದ್ರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಲ್ಲಿನತೆ ಹಾಗೂ ಪ್ಲಾಸ್ಟಿಕ್ ತ್ರಜ್ಯದಿಂದ ಸೇರಿದಂತೆ ವಾಹನ ಸಂಚಾರದಲ್ಲಿ ತೊಂದರೆ ಉಂಟಾಗುತ್ತಿದ್ದು ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಹಾಗೂ ಪ್ಲಾಸ್ಟಿಕ್ ನಿಷೇಧಕ್ಕೆ ಅಗತ್ಯ ಕ್ರಮಗಳನ್ನು ಅನುಸರಿಸಿ ಸ್ವಚ್ಛತೆ ಹಾಗೂ ಪವಿತ್ರತೆ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.. ಒಟ್ಟಾರೆ ವಿದ್ಯಾರ್ಥಿನಿಯ ಮನವಿಗೆ ಜಿಲ್ಲಾಡಳಿತ ಯಾವ ಕ್ರಮ ತೆಗೆದುಕೊಳ್ಳುತ್ತದೆ ಕಾದು ನೋಡಬೇಕಾಗಿದೆ…

Leave a Reply

Your email address will not be published. Required fields are marked *