ಸಂಕ್ರಮಣದ ದೋಷ ನಿವಾರಣೆಗಾಗಿ ಶಕ್ತಿ ದೇವತೆಗೆ ಕಬ್ಬುಗಳಿಂದ ಆರತಿ : ಭಾಗ್ಯ ಈಶ್ವರ ಶೆಟ್ಟಿ.

ಗಂಗಾವತಿ ; ಉತ್ತರಾಯಣ ಪರ್ವದ ಪುಣ್ಯ ಕಾಲದ ಮಕರ ಸಂಕ್ರಾಂತಿಯಂದು ಪುರುಷರು ಸೇರಿದಂತೆ ಹಲವರಿಗೆ ಲೋಪ ದೋಷಗಳು ಉಂಟಾಗಲಿದ್ದು ದೂಷ ನಿವಾರಣೆಗಾಗಿ, ಶಕ್ತಿ ದೇವತೆಗೆ ಕಬ್ಬು ಗಳ ಮೂಲಕ ಆರತಿಯನ್ನು ಬೆಳಗಿ ಕಬ್ಬಿನ ಹಾಲನ್ನು ದೇವಿಗೆ ಸಮರ್ಪಿಸಲಾಗುತ್ತದೆ ಎಂದು ವಾಸವಿ ಮಹಿಳಾ ಸಂಘದ ಅಧ್ಯಕ್ಷ ಭಾಗ್ಯ ಈಶ್ವರ ಶೆಟ್ಟಿ ಹೇಳಿದರು.ಅವರು ಇಲ್ಲಿನ ಆರ್ಯವೈಶ್ಯ ಸಮಾಜ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ ಕಬ್ಬು ಆರತಿ ಸಮರ್ಪಣೆಯ ಧಾರ್ಮಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಸಮಾಜ ಹಾಗೂ ಮಹಿಳಾ ಮಂಡಳಿಯವರ ಸಂಕಲ್ಪದಂತೆ ಅಧ್ಯಕ್ಷ ರೂಪರಾಣಿ ರಾಯಚೂರು ಅವರ ಉಪಸ್ಥಿತಿಯಲ್ಲಿ ಅತ್ಯಂತ ಶೀಘ್ರವಾಗಿ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ನಿರ್ಮಾಣಕ್ಕೆ ಪ್ರಾರ್ಥಿಸಿಕೊಳ್ಳಲಾಯಿತು ಎಂದು ತಿಳಿಸಿದರು.ದೇವಸ್ಥಾನದ ಅರ್ಚಕ ದಿಗಂಬರ್ ಭಟ್ ಜೋಶಿ ಅವರು ಶ್ರೀನಗರೇಶ್ವರ ಸೇರಿದಂತೆ ಶ್ರೀ ಪಾರ್ವತಿ ಪರಿವಾರ ದೇವರುಗಳಿಗೆ ವಿಶೇಷ ಅಲಂಕಾರವನ್ನು ನಡೆಸಿದರು.ಮಹಿಳಾ ಮಂಡಳಿಯ ಪದಾಧಿಕಾರಿಗಳು ಆರತಿಯನ್ನು ಬೆಳಗಿ ಸಂಕಲ್ಪವನ್ನು ಅನುಗ್ರಹಿಸುವಂತೆ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮಹಿಳಾ ಪದಾಧಿಕಾರಿಗಳು ಸಮಾಜದ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಿ ಪರಾಕಾಷ್ಠೆ ವ್ಯಕ್ತಪಡಿಸಿದರು.

