ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ,ಹಾಸ್ಟೆಲ್ ಬಲವರ್ಧನೆಗಾಗಿ…

ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ,
ಹಾಸ್ಟೆಲ್ ಬಲವರ್ಧನೆಗಾಗಿ…

ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ,ಹಾಸ್ಟೆಲ್ ಬಲವರ್ಧನೆಗಾಗಿ.

ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ ಎಫ್ ಐ) ರಾಜ್ಯ ಮಟ್ಟದ ಹಾಸ್ಟೆಲ್ ವಿದ್ಯಾರ್ಥಿಗಳ ಸಮಾವೇಶ ಮತ್ತುರಾಜ್ಯ ಮಟ್ಟದ ಶೈಕ್ಷಣಿಕ ಜಾಥಾ 13.10.2025 ರಂದು ಸಂಜೆ 8ಕ್ಕೆ ಗಂಗಾವತಿ ತಲುಪಿ ಹಾಸ್ಟೆಲ್‌ಗಳ ವಿದ್ಯಾರ್ಥಿಗಳ ಸಮಾವೇಶಗೊಂಡು ಜಾಗವನ್ನು ಸ್ವಾಗತಿಸಿದರು. ಮರುದಿನ 1510.2025 ರಂದುಕಲ್ಮಠ ಮಹಿಳಾ ಕಾಲೇಜ್ ಕಾಲೇಜಿನಿಂದ ಬಸ್ ನಿಲ್ದಾಣ ದವರೆಗೂ ನೂರಾರು ವಿದ್ಯಾರ್ಥಿಗಳ ಮೆರವಣಿಗೆ ಮೂಲಕ ನಗರದ ಶ್ರೀ ಕೃಷ್ಣ ದೇವರಾಯ ವೃತ್ತ ತಲುಪಿ ಸಮಾವೇಶ ಮಾಡಲಾಯಿತು. ಜಾಥಾದ ಉದ್ಘಾಟನೆಯನ್ನು ಪ್ರಗತಿಪರ ಹೋರಾಟ ಗಾರರದ ಭಾರದ್ವಜ ಹಾಗೂ ನಿರುಪಾಧಿ ಬೆನಕಲ್ ಅವರು ಉದ್ಘಾಟಿಸಿ ಇಂದು ವಿದ್ಯಾರ್ಥಿಗಳಿಗೆ ಕೋಮುದಾದ ವಿಷ ಬೀಜ ಬಿತ್ತಲಾಗುತ್ತಿದೆ.

ನಾವು ದೇಶದಲ್ಲಿ ಎಲ್ಲಾರು ಅಣ್ಣ ತಮ್ಮ, ಅಕ್ಕ ತಂಗಿ, ಚಿಕ್ಕಪ್ಪ ಚಿಕ್ಕಮ್ಮ ಎಂದು ಭಾವಿಸಿ ಬದುಕುವಾಗ ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳು ಕೋಮುಭಾವನೆಯನ್ನು ಸೃಷ್ಟಿ ಮಾಡುತ್ತಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳು ಗಮನ ಕೊಡಬಾ ರದು. ಭಾರತ‌ ಮಾತಕೀ ಜೈ ಎನ್ನುತ್ತೇವೆ ಅದೇ “ಇಂಕ್ವಿಲಾಬ್” ಎಂದಾಗ ಯಾರೂ ಮಾತಾಡದೆ ಮೌನವಾಗುತ್ತೇವೆ. ಯಾವ ಬ್ರಿಟಿಷ್‌ರು ಯಾವ ಘೋಷಣೆಗೆ ಬೆಚ್ಚಿಬೀಳುತ್ತದ್ದರರೊ ಅಂತಹಾ ಘೋಷಣೆ ಇವತ್ತು ನಮಗೆ ತಿಳಿದಿಲ್ಲ ಎಂದರೆ ನಮಗೆ ಸ್ವಾತಂತ್ರ್ಯ ಚಳುವಳಿಯ ಅರಿವಿಲ್ಲ ಎಂದಾಗುತ್ತದೆ. ಇಂತಹದ್ದನ್ನು SFI ಕಲಿಸಿ ವಿದ್ಯಾರ್ಥಿಗಳನ್ನು ಧೀರೋದಾತ್ತರ ಹೋರಾಟಕ್ಕೆ ಮುನ್ನುಗ್ಗುವಂತೆ ಮಾಡುತ್ತದೆ.

ನೀವೆಲ್ಲಾ SFI ಸೇರಿ ಸಮಾಜದ ನೋವನ್ನು ಅರಿಯಬೇಕು ಎಂದರು. ರಾಜ್ಯ ಉಪಾಧ್ಯಕ್ಷ ಗ್ಯಾನೇಶ್ ಕಡಗದ ಮಾತನಾಡಿ ದೇಶದ ಶಿಕ್ಷಣ ವ್ಯವಸ್ಥೆಯನ್ನು ಕಾರ್ಪೊರೇಟ್ ಕಂಪನಿಗಳ ಕೈಗೆ ಕೊಡಲೊರಟ ಶಿಕ್ಷಣ ವಿರೋಧಿಸಿ ಸರ್ಕಾರದ ವಿರುದ್ಧ ಈ ಶೈಕ್ಷಣಿಕ ಜಾಥ ನಡೆಯಲಿದೆ. ಹಾಸ್ಟೆಲ್‌ಗಳನ್ನು ಹೆಚ್ಚಿಸಬೇಕು ಮತ್ತು ಬಲಪಡಿಸಬೇಕು. ವಿದ್ಯಾರ್ಥಿಗಳ ಆಹಾರ ಬತ್ತೆಯನ್ನು 4500ರೂಗೆ ಹೆಚ್ಚಿಸಬೇಕು ಎಂದು ಜಾಥಾದ ಮಹತ್ವವನ್ನು ತಿಳಿಸಿದರು.ಗಣೇಶ್ ರಾಥೋಡ್ ಮಾತಾಡಿ ಇಂದು ಶೈಕ್ಷಣಿಕ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಇದರ ವಿರುದ್ಧ ವಿದ್ಯಾರ್ಥಿಗಳಾದ ನಾವು ಎಚ್ಚರಗೊಳ್ಳಬೇಕಿದೆ ಇಲ್ಲದಿದ್ದರೆ ನಮ್ಮನ್ನು ಗುಲಾಮರನ್ನಾಗಿ ಮಾಡುತ್ತಾರೆ. ಹಗಲು ದರೋಡೆ ಮಾಡುವವರ ಬಗ್ಗೆ ಎಚ್ಚರಿಕೆಯಿಂದರಬೇಕು ಎಂದರು.

Leave a Reply

Your email address will not be published. Required fields are marked *