ಸ್ನೇಹ ಸಂಸ್ಥೆಯಿಂದ ದೇವದಾಸಿ ಪದ್ಧತಿ ತಡೆಗಾಗಿ ಅರ್ಚಕರಿಗೆ ತರಬೇತಿಸಾಮಾಜಿಕ ಪಿಡುಗಗಳ ನಿವಾರಣೆಗೆ ಸಮಾಜ ಜಾಗೃತಿ ಅಗತ್ಯ: ನಾಗರಾಜ್ ಇಂಗಳಗಿ…

ಗಂಗಾವತಿ: ಬಾಲ್ಯ ವಿವಾಹ, ಪೋಕ್ಸೊ ಕಾಯ್ದೆ ಹಾಗು ದೇವದಾಸಿ ಪದ್ಧತಿ ಈ ಅನಿಷ್ಠ ಪದ್ಧತಿ ತೊಲಗಿಸಲು ಸರಕಾರ ಯಾವುದೇ ಯೋಜನೆ ತಂದರೂ, ಎಷ್ಟೇ ಸೌಲಬ್ಯ ನೀಡಿದರು ಸಮಾಜ ಜಾಗೃತಿ ಆಗದ ಹೊರತು ಸಂಪೂರ್ಣ ತಡೆಯಲು ಸಾಧ್ಯವಿಲ್ಲ ಈ ನಿಟ್ಟಿನಲ್ಲಿ ಸ್ನೇಹ ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕು ಅಧ್ಯಕ್ಷ ನಾಗರಾಜ್ ಇಂಗಳಗಿ ಹೇಳಿದರು.ಅವರು ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸ್ನೇಹ ಸಂಸ್ಥೆಯಿAದ ಹಮ್ಮಿಕೊಂಡಿದ್ದ ಅರ್ಚಕರಿಗೆ ಹಾಗು ಧಾರ್ಮಿಕ ಮುಖಂಡರಿಗೆ ಸಾಮಾಜಿಕ ಪಿಡುಗುಗಳ ತಡೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇವರ ಹೆಸರಲಿ ಭಯ ಇರಬೇಕು ಆದರೆ, ಅದನ್ನೆ ನೆಪ ಮಾಡಿಕೊಂಡು ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ಸುಲಿಗೆ ಮಾಡಬಾರದು ಎಂದು ಅರ್ಚಕರಿಗೆ ಕಿವಿಮಾತು ಹೇಳಿದರು.ಸಂಸ್ಥೆಯ ನಿರ್ದೇಶಕರಾದ ಟಿ.ರಾಮಾಂಜಿನೇಯ್ಯ ಮಾತನಾಡಿ, ಪೋಕ್ಸೊ ಕಾಯ್ದೆಯಲ್ಲಿ ಕೊಪ್ಪಳ ಜಿಲ್ಲೆ ನಂಬರ್ ಒನ್ ಸ್ಥಾನದಲ್ಲಿದ್ದು ಕಾಳಜಿಪೂರ್ವಕವಾಗಿ ನಾವೆಲ್ಲರು ತೊಲಗಿಸಲು ಶ್ರಮಿಸಬೇಕಿದೆ, ಅರ್ಚಕರ ಮಾತು ಗ್ರಾಮೀಣ ಭಾಗಗಳಲ್ಲಿ ಜನರು ಕೇಳುತ್ತಿದ್ದು ಈ ಮೂಲಕ ಅವರಿಗೆ ತಿಳಿಹೇಳಬೇಕಿದೆ. ಬಾಲ್ಯ ವಿವಾಹ ಎಂಗೇಜ್ ಮೆಂಟ್ ಮಾಡಿಕೊಂಡರೂ ಅಪರಾಧ ಪಾಲ್ಗೊಂಡವರೆಲ್ಲರಿಗು ಕಠಿಣ ಶಿಕ್ಷೆ ನೀಡಬಹುದಾಗಿದ್ದು ಕೊಪ್ಪಳ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೊಬ್ಬರು ಶಿಕ್ಷಗೆ ಗುರಿಯಾಗಿದ್ದಾರೆಂದು ತಿಳಿಹೇಳಿದರು. ಸಂಪನ್ಮೂಲ ವ್ಯಕ್ತಿಗಳಾಗಿ ನಾಗರಾಜ್ ಗುತ್ತೇದಾರ್ ವಕೀಲರು ವಿಸ್ತೃತ ಮಾಹಿತಿ ನೀಡಿದರು.ಕಸಾಪ ಗಂಗಾವತಿ ತಾಲೂಕು ಅಧ್ಯಕ್ಷ ರುದ್ರೇಶ್ ರ‍್ಹಾಳ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವೀಚಾರಕರಾದ ಶರಣಮ್ಮ, ಸ್ಹೇಹ ಸಂಸ್ಥೆಯ ಕೆ.ವಿ.ಜಯ ಹಾಗು ಪ್ರತಿಭಾ ಇತರರಿದ್ದರು.

