ಯುವಜನತೆಯೇ ದೇಶದ ಶಕ್ತಿ, ಕಲ್ಮಠ ಶ್ರೀಗಳು

ಗಂಗಾವತಿ: ಭಾರತಕ್ಕೆ ಸ್ವಾತಂತ್ರ್ಯ ದೊರೆತು 80 ವರ್ಷಗಳು ಕಳೆದಿವೆ .ಈ ಸುದೀರ್ಘ ಅವಧಿಯಲ್ಲಿ ಭಾರತ ದೇಶವು ವಿಜ್ಞಾನ ,ತಂತ್ರಜ್ಞಾನ, ಆರೋಗ್ಯ ,ಶಿಕ್ಷಣ, ಬಹ್ಯಾಕಾಶ ಸಂಶೋಧನೆ ಹಾಗೂ ರಕ್ಷಣಾ ಕ್ಷೇತ್ರ ಗಳಲ್ಲಿ ಅನನ್ಯ ಸಾಧನೆಯನ್ನು ಮಾಡಿ ಅಪಾರ ಪ್ರಗತಿಯನ್ನು ಸಾಧಿಸಿದೆ. ಆದರೂ ಪಾಶ್ಚಿಮಾತ್ಯ ರಾಷ್ಟ್ರಗಳಂತೆ ಎಲ್ಲಾ ರಂಗಗಳಲ್ಲಿ ಭಾರತವನ್ನು ಪ್ರಗತಿದಾಯಕವಾಗಿ ಕೊಂಡೊಯ್ಯಬೇಕಾಗಿದೆ. ಆ ಜವಾಬ್ದಾರಿ ಇಂದಿನ ಯುವ ಜನಾಂಗದ ಮೇಲೆ ಇದೆ. ಯುವಜನತೆ ಹೊಸ ಹೊಸ ಆಲೋಚನೆ, ಕ್ರಿಯಾಶೀಲತೆ, ಅನನ್ಯ ಆವಿಷ್ಕಾರಗಳಿಂದ ದೇಶದ ಪ್ರಗತಿಗೆ ಚೈತನ್ಯ ಶಕ್ತಿಯನ್ನು ತುಂಬಬೇಕಾಗಿದೆ. ಎಂದು ಶ್ರೀ ಕೊಟ್ಟೂರೇಶ್ವರ ವಿದ್ಯಾ ವರ್ಧಕ ಸಂಘದ ಅಧ್ಯಕ್ಷರಾದ ಡಾ. ಕೊಟ್ಟೂರು ಮಹಾಸ್ವಾಮಿಗಳು ಕರೆ ನೀಡಿದರು. ಅವರು ಇಂದು ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆದ 80ನೇ ಭಾರತ ಸ್ವಾತಂತ್ರ್ಯೋತ್ಸವದ ಸಮಾರಂಭದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಮುಂದುವರೆದು ಕಲ್ಯಾಣ ಕರ್ನಾಟಕದ ಹಳೆಯ ಸಂಸ್ಥೆಯಾಗಿರುವ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘ ಇದೀಗ ವಜ್ರ ಮಹೋತ್ಸವದ ಸಡಗರದಲ್ಲಿದೆ. ಇದೇ ಡಿಸೆಂಬರ್ 9,10 ಮತ್ತು 11 ರಂದು ವಜ್ರ ಮಹೋತ್ಸವವನ್ನು ಆಚರಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪತ್ರಿಕಾರಂಗದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ಸುದರ್ಶನ ವೈದ್ಯ,ಪ್ರಶಸ್ತಿ ಪರಸ್ಕೃತ ಪ್ರಸನ್ನ ದೇಸಾಯಿ,ಸುದ್ದಿಮೂಲ ಪತ್ರಿಕೆಯ ವೃಷಭೇಂದ್ರಸ್ವಾಮಿ , ಕನಸು ಚಾನಲ್ ನ ರಾಮಕೃಷ್ಣ ಮತ್ತು ವೆಂಕಟೇಶರವರನ್ನು ಸನ್ಮಾನಿಸಲಾಯಿತು.2025-26ನೇ ಸಾಲಿನಲ್ಲಿ ಸಂಸ್ಥೆಯ ಶಾಲಾ-ಕಾಲೇಜುಗಳಿಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ. ರವಿ ಚವ್ಹಾಣ್ ಪ್ರಸ್ತಾವಿಕವಾಗಿ ಮಾತನಾಡಿ ಸಂಸ್ಥೆ ನಡೆದು ಬಂದ ಹಾದಿಯನ್ನು ವಿವರಿಸಿದರು. ದೈಹಿಕ ನಿರ್ದೇಶಕರಾದ ಹೊನ್ನಪ್ಪ ಮಾಸ್ತಮ್ಮ ನವರ ನೇತೃತ್ವದಲ್ಲಿ ಸೇವಾದಳ, ಸ್ಕೌಟ್ಸ್ ಎನ್ಎಸ್ಎಸ್, ತಂಡಗಳಿಂದ ಧ್ವಜ ಕವಾಯತು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶರಣೇಗೌಡ ಮಾಲಿಪಾಟೀಲ್ ,ಕೋಶಾಧ್ಯಕ್ಷರಾದ ಸಿಂಗನಾಳ ಸುರೇಶ್, ನಿರ್ದೇಶಕರಾದ ಕಳಕನ ಗೌಡ ಪಾಟೀಲ್ , ರಾಚಯ್ಯಸ್ವಾಮಿ ಹುಚ್ಚೆಶ್ವರ ಮಠ, ಲಿಂಗಪ್ಪ ಕಮತಗಿ ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ ಹಾಗೂ ಎಲ್ಲಾ ಶಾಲಾ ಕಾಲೇಜುಗಳ ಪ್ರಾಚಾರ್ಯರು, ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು. ಶಿಕ್ಷಕರಾದ ಮುತ್ತನಗೌಡ ಮತ್ತು ರೇಣುಕಾ ನಿರ್ವಹಿಸಿದರು

