ಕೂಡ್ಲಿಗಿ(ಕಾಮಯ್ಯನಹಟ್ಟಿ ಗ್ರಾಮ) : ಕಾಫಿ ಸೀಮೆಯಲ್ಲಿ ಆನೆಗೆ ಮಹಿಳೆ ಬಲಿ , ನೆರವಾದ ಕೂಡ್ಲಿಗಿ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್-

ವಿಜಯನಗರ ಜಿಲ್ಲೆ ಕೂಡ್ಲಿಗಿ : ಉದ್ಯೋಗವನ್ನರಸಿ ತಾಲೂಕಿನವಲ್ಲೆಡೆಯ ಜನರು ಕಾಪೀ ಸೀಮೆಕಡೆ ಗುಳೇ ಹೋಗೋದು ತಾಲೂನಲ್ಲಿ ಸಾಮಾನ್ಯ. ಅಂತೆಯೇ , ತಾಲೂಕಿನ ಕಾಮಯ್ಯನಹಟ್ಟಿ ಗ್ರಾಮದ. ಸಣ್ಣ ನಾಗರಾಜ ಹಾಗೂ ಬಿ.ಬೋರಮ್ಮ ಎಂಬ ದಂಪತಿಗಳು , ತಮ್ಮ ಮಗನೋರ್ವನೊಂದಿಗೆ. ಕೆಲಸವನ್ನರಸಿ, ಚಿಕ್ಕಮಗಳೂರು ತಾಲೂಕಿನಲ್ಲಿರುವ. ಕಾಫೀ ಎಸ್ಟೇಟ್ ಗಳ ಕಡೆ , ಗುಳೇ ತೆರಳಿದ್ದರು. ಹುಣುಸೇಹಳ್ಳಿ ಸಮೀಪದ ಹ್ಯಾರಂಬಿ ಗ್ರಾಮದ ಬಳಿಯಲ್ಲಿರುವ, ನಾಗೇಶಗೌಡ ಎಂಬುವವರಿಗೆ ಸೇರಿದ ತೋಟದಲ್ಲಿ. ಬಿ.ಬೋರಮ್ಮ ಕೆಲಸ ಮಾಡುತ್ತಿದ್ದಾಗ , ಕಾಡಾನೆ ದಾಳಿ ಮಾಡಿದೆ. ಪರಿಣಾಮ ಬಿ.ಬೋರಮ್ಮ(45) , ಸ್ಥಳದಲ್ಲಿಯೇ ಅಸುನೀಗಿರುವ ಘಟನೆ. ಫೆ 22ರಂದು ಬೆಳಿಗ್ಗೆ ಜರುಗಿದ್ದು , ಕೆಲ ದಿನಗಳ ಹೊಂದೆಯಷ್ಟೇ ಕಾಡನೆ ದಾಳಿಗೆ , ಒರ್ವರು ಬಲಿಯಾಗಿರುವ ಘಟನೆ ಜರುಗಿತ್ತು. ಈಗ ಕೂಡ್ಲಿಗಿ ತಾಲೂಕಿ ಮಹಿಳೆ ಬಿ ಬೋರಮ್ಮ ಅಸುನೀಗಿದ್ದು , ವಾರದೊಳಗೆ ಇಬ್ಬರು ಕಾಡಾನೆ ದಾಳಿಗೆ ಬಲಿಯಾದಂತಾಗಿದೆ. ಇದರಿಂದಾಗಿ ಕುಫಿತಗೊಂಡಿರುವ ಕಾರ್ಮಿಕರು ಹಾಗೂ ಗ್ರಾಮಗಳ ಗ್ರಾಮಸ್ಥರು , ಸ್ಥಳೀಯ , ತಾಲೂಕು , ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯ ಶವ ವಿಟ್ಟು ಪ್ರತಿಭಟನೆ ನಡೆಸುವ ಮೂಲಕ , ಸ್ಥಳೀಯ ಆಡಳಿತದ ನಿರ್ಲಕ್ಷ್ಯವನ್ನು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುಂಡ ಕಾಡನೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ , ಮತ್ತು ಮೃತ ಮಹಿಳೆಯ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.*ನೊಂದ ಕುಟುಂಬದ ಕಣ್ಣೀರ ಒರೆಸಿದ – ಕೂಡ್ಲಿಗಿ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*- ಕೂಡ್ಲಿಗಿ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ಘಟನೆ ಮಾಹಿತಿ ತಿಳಿದೊಡನೆ. ತಮ್ಮ ಆಪ್ತ ಸಹಾಯಕರೊಡಗೂಡಿ , ಮೃತ ಮಹಿಳೆಯ ಕುಟುಂಬದ ಕಣ್ಣೀರು ಒರೆಸುವ ನಿಟ್ಟಿನಲ್ಲಿ ನೆರವಿಗೆ ಮುಂದಾಗಿದ್ದಾರೆ. ಮತ್ತು ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ.ರಾಜೇಗೌಡರವರನ್ನು. ದೂರವಾಣಿ ಮೂಲಕ ಸಂಪರ್ಕಿಸಿದ್ದು , ಮೃತ ಮಹಿಳೆಯ ಪಾರ್ಥೀವ ಶರೀರ ಸುರಕ್ತಿತವಾಗಿ. ಕ್ಷೇತ್ರಕ್ಕೆ ಕಳುಹಿಸಿಕೊಡುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಮೃತ ಬಿ.ಬೋರಮ್ಮ ಕುಟುಂಬಕ್ಕೆ ಸೂಕ್ತ ಪರಿಹಾರನ್ನು ಸರ್ಕಾರದಿಂದ ಒದಗಿಸುವಂತೆ ತಿಳಿಸಿದ್ದಾರೆ. ಮಾತ್ರವಲ್ಲ ಶಾಸಕರು ಘಟನಾ ಸ್ಥಳಕ್ಕೆ , ಆಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು ತಮ್ಮ ಆಪ್ತ ಸಹಾಯಕರಾದ ಜಾತಪ್ಪ ಎಂಬುವರನ್ನು ಕಳುಹಿಸಿದ್ದಾರೆ. ಮತ್ತು ಕ್ಷೇಮವಾಗಿ ಮೃತರ ಪಾರ್ಥೀವ ಶರೀರವನ್ನು , ಹಾಗೂ ಮೃತರ ಕುಟುಂಬ ಸದಸ್ಯರನ್ನು ಕರೆತರುವಂತೆ ಅಗತ್ಯ ಕ್ರಮ ಜರುಗಿಸಿದ್ದಾರೆ. ಶಾಸಕರ ಸಹಾಯಕರಾದ ಜಾತಪ್ಪರೊಂದಿಗೆ , ಮೃತ ಬೋರಮ್ಮರ ಇನ್ನೋರ್ವ ಮಗ ಘಟನಾ ಸ್ತಳಕ್ಕೆ ತೆರಳಿದ್ದಾನೆ. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ಆನೆ ದಾಳಿಗೊಳಗಾಗಿ ಮೃತ ಮಹಿಳೆಯ ನೊಂದ ಕುಟುಂಬಕ್ಕೆ ನೆರವು ನೀಡಿದ್ದಾರೆ.

ಈ ಮೂಲಕ ಶಾಸಕರು , ಮಾನವೀಯತೆ ಮೆರೆದಿದ್ದಾರೆ. ಇಷ್ಟು ಮಾತ್ರವಲ್ಲ , ಅವರು ಕ್ಷೇತ್ರದ ಜನರ ಕಣ್ಣೀರು ಒರೆಸುವಲ್ಲಿ ಹಗಲಿರುಳು ಸಿದ್ಧರಾಗಿರುತ್ತಾರೆ. ಅದಕ್ಕೆ ಕೂಡ್ಲಿಗಿ ಕ್ಷೆೆೇತ್ರದಲ್ಲಿ , ಅಸಂಖ್ಯಾತ ನಿದರ್ಶನಗಳು ಸಿಗುತ್ತವೆ. ದೀನ ದಲಿತರ ಅಶಕ್ತರ ಆಶಾಕಿರಣವಾಗಿದ್ದು , ಕ್ಷೇತ್ರದ ಹೃದಯ ಶ್ರೀಮಂತರಾಗಿದ್ದಾರೆ. ಬಡವರ ಕಾರ್ಮಿಕರ ನೊಂದವರ ಪಾಲಿನ , ಆಪ್ತ ರಕ್ಷಕರಾಗಿದ್ದಾರೆ ಆಪತ್ಭಾಂದವ ರಾಗಿದ್ದಾರೆ.*ಪುಂಡಾನೆ ಸೆರಿಹಿಡಿದ ಅರಣ್ಯ ಸಿಬ್ಬಂದಿ*- ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದ , ಅರಣ್ಯ ಇಲಾಖೆ ಘಟನಾ ಸ್ಥಳಕ್ಕಾಗಮಿಸಿ ಪುಂಡಾನೆ ಸೆರೆಗೆ ಕಾರ್ಯಚರಣೆ ನಡೆಸಿದ್ದಾರೆ. ತರಬೇತಿ ಹೊಂದಿ ಪಳಗಿರುವ 12 ಆನೆಗಳೊಂದಿಗೆ , ಜಿಲ್ಲಾ ಅರಣ್ಯ ಇಲಾಖಾಧಿಕಾರಿಗಳ ನಿರ್ಧೇಶನದಲ್ಲಿ. ಅನೇಕ ಜಿಲ್ಲಾ ಅರಣ್ಯ ಇಲಾಖಾ ಸಿಬ್ಬಂದಿಯವರು , ಹಾಗೂ ಹತ್ತಾರು ತಾಲೂಕು ಅರಣ್ಯ ಸಿಬ್ಬಂದಿಯವರು ಒಟ್ಟಾಗಿ ಪುಂಡಾನೆ ಸೆರೆಗೆ ಮುಂದಾಗಿದ್ದಾರೆ. ಬಿ.ಬೋರಮ್ಮಳನ್ನು ಬಲಿ ಪಡೆದಿದ್ದ ಪುಂಡ ಕಾಡನೆಯ , ಘಟನಾ ಸ್ಥಳದಿಂದ ಅನತಿ ದೂರದಲ್ಲಿ ಪತ್ತೆಯಾಗಿದ್ದು. ಅರವಳಿಕೆ ತಜ್ಞರಿಂದ ಅರವಳಿಕೆ ನೀಡಿ , ಹಾಗೂ ತರಬೇತಿ ಪಡೆದ ಅನೆಗಳ ಸಹಕಾರದೊಂದಿಗೆ. ಪುಂಡ ಕಾಡನೆಯನ್ನು ಸೆರೆ ಹಿಡಿಯುವಲ್ಲಿ , ಅರಣ್ಯ ಇಲಾಖೆ ಯಶಸ್ವಿಯಾಗಿದೆ.

✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ -9008937428 / 8151937428*

Leave a Reply

Your email address will not be published. Required fields are marked *