ನಮ್ಮ ಪರಂಪರೆಗಾಗಿ ಪೌರಾಣಿಕ ನಾಟಕ ಪ್ರದರ್ಶನ ಅಗತ್ಯ: ಶಾನಭೋಗರ ರಾಘಣ್ಣ…

ನಮ್ಮ ಪರಂಪರೆಗಾಗಿ ಪೌರಾಣಿಕ ನಾಟಕ ಪ್ರದರ್ಶನ ಅಗತ್ಯ: ಶಾನಭೋಗರ ರಾಘಣ್ಣ…
ನಮ್ಮ ಪರಂಪರೆಗಾಗಿ ಪೌರಾಣಿಕ ನಾಟಕ ಪ್ರದರ್ಶನ ಅಗತ್ಯ: ಶಾನಭೋಗರ ರಾಘಣ್ಣ ಗಂಗಾವತಿ: ಹೈಟೆಕ್ ಕಲಾ ಪ್ರದರ್ಶನಗಳ ನಡುವೆ ನಮ್ಮ ಪರಂಪಾರಿಕ ಕಲೆಗಳು ಮೂಲೆಗುಂಪು ಸೇರುತ್ತಿದ್ದು, ಗ್ರಾಮೀಣ ಪ್ರದೇಶದ ಕಲಾಭಿಮಾನಿಗಳ ಆಸಕ್ತಿಯಿಂದಾಗಿ ಇನ್ನು ಪೌರಾಣಿಕ ಕಲೆಗಳು ಜೀವಂತ ಉಳಿದಿದ್ದು, ಕಾಪಾಡಿಕೊಂಡು ಹೋಗುವ ಅಗತ್ಯತೆ ಇದೆ ಎಂದು ಶಾನಭೋಗರ ರಾಘಣ್ಣಸ್ವಾಮಿ ಹೇಳಿದರುಅವರು ಸಂಡೂರು ತಾ.ಗೆಣತಿಕಟ್ಟೆ ಶ್ರೀ ಮಾರುತೇಶ್ವರ ಜೋಡು ರಥೋತ್ಸವದ ಅಂಗವಾಗಿ ಸೂಲದಹಳ್ಳಿಯ ಶ್ರೀ ಕಂದಗಲ್ಲು ಹನುಮಂತರಾಯ ಕಲಾ ಬಳಗದ ನಾಡಿನ ಹೆಸರಾಂತ ಕಲಾವಿದರು ಅದ್ಭುತವಾಗಿ ಪ್ರದರ್ಶಿಸಿದ ರಕ್ತರಾತ್ರಿ ನಾಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲೊಂಡು ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಡಿಟಿಒ ನಿವೃತ್ತ ಅಧಿಕಾರಿ ವಿ.ಅಂಜಿನಪ್ಪ, ಚಿನ್ನಪ್ಪ ಬಿ.ಮುದ್ದಪ್ಪ, ವಿ.ರಾಮಾಂಜಿನಿ, ಬಿ.ಹಂಪಣ್ಣ, ಸಿ.ಹೆಚ್.ಉಮೇಶ್, ಎ.ಕೆ.ದುರುಗೇಶ್ ಹಾಗು ಎ.ಕೆ.ರ‍್ರಿಸ್ವಾಮಿ ಇದ್ದರು. ನಂತರ ನಾಡಿನ ಹಸರಾಂತ ನುರಿತ ಕಲಾವಿದರಿಂದ ರಕ್ತರಾತ್ರಿ ಅಮೋಘ ಪ್ರದರ್ಶನಗೊಂಡಿತು. ದುರ್ಯೋಧನ ಪಾತ್ರದಲ್ಲಿ ಟಿ.ನಾಗರಾಜ್ ಹಿರೇಕುಂಬಳಗುAಟೆ, ಶ್ರೀ ಕೃಷ್ಣ ಪಾತ್ರದಲ್ಲಿ ಚಿದಾನಂದಪ್ಪ ರಾರಾವಿ, ತಿಮ್ಮನಗೌಡ ಗೆಣಕಿಹಾಳ (ಅಶ್ವತ್ಥಾಮ), ನಾಗರಾಜ್ ಇಂಗಳಗಿ (ಶಕುನಿ), ಪಾರ್ವತೀಶ್ ಕುರುಗೋಡು (ನವಲಿಪಕ್ಕ), ಭೀಮಣ್ಣ ಕಂದಗಲ್ಲು (ಭೀಮ), ಎಂ.ಜಿ.ಶಿವಕುಮಾರ್ ಮಲೆಮಾಚಿಕೆರೆ, ಎಸ್.ಹೆಚ್.ಸಘಿವುಲ್ಲಾ ಹಿರೇಕುಂಬಳಗುAಟೆ (ಕರ್ಣ, ಗಂಧರ್ವ), ನಾಗನಗೌಡ ಬೆಣ್ಣೆಹಳ್ಳಿ (ಧರ್ಮರಾಯ), ಕನಕಪ್ಪ ಇಂದರಗಿ (ಶಂಕದತ್ತ), ಬಸವರಾಜ್ ಸ್ವಾಮಿ ಜವಳಗೇರಾ (ಕಲಿ ಹಾಗು ಗಂಧರ್ವ) ವೀಣಾ ಆದೋನಿ (ದ್ರೌಪದಿ), ಬಿ.ಜಯಶ್ರೀ ಪಾಟೀಲ್ (ಉತ್ತರೆ), ದುರುಗಮ್ಮ ಕೂಡ್ಲಿಗಿ (ಭಾನುಮತಿ), ಸಾವಿತ್ರಿ ದಾವಣಗೆರೆ (ಮದಹಂಸಿ), ಪಾತ್ರ ನಿರ್ವಹಿಸಿದರು. ವಿನಾಯಕ ಡ್ರಾಮ ಸೀನ್ಸ್ ಮುಂಡರಗಿ ಇವರ ಭವ್ಯ ರಂಗಸಜ್ಜಿಕೆಯಲ್ಲಿ, ಮುರಳಿ ಚಳ್ಳಿಕೇರೆ ಇವರ ಪ್ರಸಾದನದೊಂದಿಗೆ ಕಲಾವಿದರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

