ಕಂಪ್ಲಿ ಉತ್ಸವದ ಲಾಂಛನ ಬಿಡುಗಡೆಕಂಪ್ಲಿ ಉತ್ಸವ ನಮ್ಮೂರಿನ ಉತ್ಸವ ಒಗ್ಗಟ್ಟಾಗಿ ಆಚರಿಸೋಣ : ಶಾಸಕ ಜೆ. ಎನ್. ಗಣೇಶ…

ಕಂಪ್ಲಿ ಉತ್ಸವದ ಲಾಂಛನ ಬಿಡುಗಡೆಕಂಪ್ಲಿ ಉತ್ಸವ ನಮ್ಮೂರಿನ ಉತ್ಸವ ಒಗ್ಗಟ್ಟಾಗಿ ಆಚರಿಸೋಣ : ಶಾಸಕ ಜೆ. ಎನ್. ಗಣೇಶ…

ಬಳ್ಳಾರಿ/ ಕಂಪ್ಲಿ : ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಕಂಪ್ಲಿ ಉತ್ಸವದ ಪೂರ್ವ ಸಿದ್ಧತೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಲಹೆ- ಸೂಚನೆ ಸಭೆ ಹಾಗೂ ಉತ್ಸವದ ಲಾಂಛನ ಬಿಡುಗಡೆ ಕಾರ್ಯಕ್ರಮ ನಡೆಯಿತು.ವಿವಿಧ ವರ್ಗದ ಸಾರ್ವಜನಿಕರು, ಕಲಾವಿದರು ಹಾಗೂ ಮುಖಂಡರು ಸಭೆಯಲ್ಲಿ ಭಾಗವಹಿಸಿ ಉತ್ಸವವನ್ನು ಜನೋತ್ಸವವನ್ನಾಗಿ ರೂಪಿಸುವ ಕುರಿತು ಮಹತ್ವದ ಸಲಹೆಗಳನ್ನು ನೀಡಿದರು.ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಈ ಬಾರಿ ಕಂಪ್ಲಿ ಉತ್ಸವವನ್ನು ಹಿಂದಿನ ವರ್ಷಗಳಿಗಿಂತ ವಿಭಿನ್ನ ಹಾಗೂ ವೈವಿಧ್ಯಮಯವಾಗಿ ಆಚರಿಸಲು ನಿರ್ಧರಿಸಲಾಗಿದೆ. ಕಂಪ್ಲಿ ಉತ್ಸವ ನಮ್ಮೂರಿನ ಉತ್ಸವವಾಗಿದ್ದು, ಸರ್ವ ಸಮುದಾಯದವರು ಒಗ್ಗಟ್ಟಾಗಿ ಆಚರಿಸುವಂತೆ ಕರೆ ನೀಡಿದರು.ಪ್ರತಿ ವರ್ಷವೂ ಕಂಪ್ಲಿ ಉತ್ಸವವನ್ನು ಸರ್ಕಾರಿ ಮಟ್ಟದಲ್ಲಿ ಆಚರಿಸುವ ಉದ್ದೇಶದಿಂದ ಮುಖ್ಯಮಂತ್ರಿ ಅವರಿಗೆ ಒತ್ತಾಯಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಉತ್ಸವಕ್ಕೆ ಶಾಶ್ವತ ಸ್ವರೂಪ ನೀಡುವ ಪ್ರಯತ್ನ ನಡೆಯಲಿದೆ. ನೆಲ, ಜಲ, ಸಂಸ್ಕೃತಿ ಹಾಗೂ ಇತಿಹಾಸವನ್ನು ಪ್ರತಿಬಿಂಬಿಸುವ ಉತ್ಸವವನ್ನಾಗಿ ರೂಪಿಸಲಾಗುವುದು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಗ್ರಾಮೀಣ ಜನಪದ ಕಲೆಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಭರವಸೆ ನೀಡಿದರು.ಇದಕ್ಕೂ ಮುನ್ನ ಸಭೆಯಲ್ಲಿ ಪಾಲ್ಗೊಂಡ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಅನೇಕ ಸಲಹೆಗಳನ್ನುಮಂಡಿಸಿದರು. ಈ ಕಂಪ್ಲಿ ಉತ್ಸವವನ್ನು ಸಂಪೂರ್ಣ ಜನೋತ್ಸವವನ್ನಾಗಿ ರೂಪಿಸಬೇಕು. ಗ್ರಾಮೀಣ ಹಾಗೂ ಜನಪದ ಕಲೆಗಳು ಉಳಿಸಬೇಕು ಎಂದರು.ಕಂಪ್ಲಿ ಪಟ್ಟಣದಲ್ಲಿ ಶಾಸಕ ಜೆ.ಎನ್. ಗಣೇಶ್ ಕಂಪ್ಲಿ ಉತ್ಸವದ ಲಾಂಛನ ಬಿಡುಗಡೆಗೊಳಿಸಿದರು.ಕಲಾವಿದರಿಗೆ, ಗೌರಿಹಾಡುಗಾರರಿಗೆ, ಬಯಲಾಟ ಕಲಾವಿದರಿಗೆ ಹಾಗೂ ಎಲ್ಲ ಸಮುದಾಯದ ಕಲಾವಿದರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.ಕಂಪಿಲರಾಯ ಹಾಗೂ ಕುಮಾರರಾಮನ ಭಾವಚಿತ್ರಗಳ ಪ್ರದರ್ಶನ, ಕಂಪ್ಲಿಯ ಇತಿಹಾಸವನ್ನು ಬಿಂಬಿಸುವ ಪ್ರದರ್ಶನಗಳು, ಸ್ತಬ್ಧಚಿತ್ರಗಳ ಮೆರವಣಿಗೆ, ಧ್ವನಿ ಮಾಧ್ಯಮದ ಮೂಲಕ ಇತಿಹಾಸ ಪರಿಚಯಿಸುವ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದರು. ಹಿರಿಯ ಕಲಾವಿದರನ್ನು ಗೌರವಿಸುವುದು, ಮಕ್ಕಳಿಗಾಗಿ ವಿಶೇಷ ಉತ್ಸವ ಕಾರ್ಯಕ್ರಮಗಳನ್ನು ಆಯೋಜಿಸುವುದು, ಉತ್ಸವದ ಎರಡು ದಿನ ಶಾಲೆಗಳಿಗೆ ರಜೆ ನೀಡುವುದು ಸೇರಿದಂತೆ ಹಲವಾರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.ವೇದಿಕೆ ಪ್ರದೇಶಕ್ಕೆ ಸಾರ್ವಜನಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಟ್ರಾಫಿಕ್ ಜಾಮ್ ಆಗದಂತೆ ಸೂಕ್ತ ವ್ಯವಸ್ಥೆ ಮಾಡಬೇಕು. ಗ್ರಾಮೀಣ ಭಾಗಗಳಲ್ಲಿ ಉತ್ಸವದ ಪ್ರಚಾರ ಕೈಗೊಳ್ಳಬೇಕು.ರಾಜ್ಯ ಹಾಗೂ ರಾಷ್ಟ್ರಮಟ್ಟದ ಖ್ಯಾತ ಕಲಾವಿದರಿಗೆ ಅವಕಾಶ ನೀಡಬೇಕು. ಉತ್ಸವವನ್ನು ಪಕ್ಷಾತೀತವಾಗಿ ಆಚರಿಸಬೇಕು ಎಂದು ಸಭೆಯಲ್ಲಿ ಏಕಮತದಿಂದ ಸಲಹೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ಜೂಗಲ ಮಂಜುನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ, ಪುರಸಭೆ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ, ಪಂಚ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಮುಖಂಡರಾದ ಭಟ್ಟ ಪ್ರಸಾದ್, ಎ.ಸಿ. ದಾನಪ್ಪ, ಪಿ.ಬ್ರಹ್ಮಯ್ಯ, ಸಿ. ಆರ್. ಹನುಮಂತ, ಪಿ.ಮೂಕಯ್ಯಸ್ವಾಮಿ, ಜಿ.ರಾಮಣ್ಯ, ಕೆ.ಎಸ್. ಚಾಂದ್‌ಬಾಷ, ಅರವಿ ಬಸವನಗೌಡ, ಕೆ.ಎಂ. ಹೇಮಯ್ಯಸ್ವಾಮಿ,ಎಸ್. ಜಿ. ಚಿತ್ರಗಾರ, ವಸಂತರಾಜ ಕಹಳೆ, ಅಕ್ಕಿ ಜಿಲಾನ, ಗೋಪಾಲಪ್ಪ, ಸೈಯದ್ ಉಸ್ಮಾನ್, ಕರೆಕಲ್ ಮನೋಹರ್, ಬಿ. ರಮೇಶ, ಕೆ. ಮಸ್ತಾನ್‌ಲಿ, ಬಳೆ ಮಲ್ಲಿಕಾರ್ಜುನ, ಮನೋಜ್, ಜಂಗ ನಾಗರಾಜ, ಬಿ.ಅಂಬಣ್ಣ, ಎಂ.ಸಿ.ಮಾಯಪ್ಪ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಅನೇಕ ಗಣ್ಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *