ಆನೆಗೊಂದಿ ಉತ್ಸವಕ್ಕೆ ತಾರತಮ್ಯ ಮಾಡುವುದು ಸರಿಯಲ್ಲ ಇದು ಖಂಡನೀಯ ಕ.ರ.ವೇ. ಜಿಲ್ಲಾ ಅಧ್ಯಕ್ಷ ಪಂಪಣ್ಣ ನಾಯಕ……

ಗಂಗಾವತಿ.04ಆನೆಗೊಂದಿಯು ರಾಮಾಹಣದಲ್ಲಿ ಮಹಾಭಾರತದ ಕಿಷ್ಕಿಂಧ ಖಂಡದಲ್ಲಿ ಅತೀ ಶ್ರೇಷ್ಠ ರಾಮನ ಭಂಟನಾದ ಶ್ರೀ ಆಂಜನೇಯನು ಹುಟ್ಟಿದ ಜನ್ಮಸ್ಥಳವೆಂದೇ ವಿಶ್ವ ವಿಖ್ಯಾತ ಹೊಂದಿರುವ ಸ್ಥಳವಾಗಿದೆ. ವಿಜಯನಗರ ಅರಸರ ಕಾಲದಲ್ಲಿ ಹಂಪಿಯಲ್ಲಿ ಅದ್ದೂರಿ ಉತ್ಸವ ಆಚರಣೆಯಾಗುತ್ತಿದ್ದು. ಆದರೆ ಅರಸರ ಮೊದಲು ರಾಜಧಾನಿ ಆನೆಗೊಂದಿಯಾಗಿತ್ತು. ವಿಜಯನಗರ ಅರಸರ ಕಾಲದಲ್ಲಿ ಶ್ರೀಕೃಷ್ಣ ದೇವರಾಯನು ಆನೆಗೊಂದಿ ಸ್ಥಳಕ್ಕೆ ಬಹಳ ಪ್ರಾಮುಖ್ಯತೆ ಕೊಟ್ಟಿದ್ದರು ಅದನ್ನು ವಿನಗರದ ತೊಟ್ಟಿಲು ಎಂದು ಕರೆಯುವ ಆನೆಗೊಂದಿಯಲ್ಲಿ ಉತ್ಸವಕ್ಕೆ ಮೀನಾಮೇಷ ಎಣಿಸಲಾಗುತ್ತಿದೆ. ಆನೆಗೊಂದಿಗೂ ಹಂಪಿಗಿರುವಷ್ಟೇ ಪ್ರಾಮುಖ್ಯತೆಯಿದೆ. ವಿಜಯನಗರ ಅರಸರು ಹಂಪಿಯನ್ನು ರಾಜಧಾನಿಯನ್ನಾಗಿಸುವುದಕ್ಕೂ ಮುನ್ನ ಆನೆಗೊಂದಿಯು ಅವರ ಮೊದಲ ರಾಜಧಾನಿಯಾಗಿತ್ತು. ಇಂತಹ ಐತಿಹಾಸಿ ಉಳ್ಳ ಆನೆಗೊಂದಿಯನ್ನು ರಾಜಕೀಯ ದ್ವೇಶದಿಂದ ಉತ್ಸವವನ್ನು ಮಾಡದೇ ಇರುವುದು ಎಷ್ಟರ ಮೆಟ್ಟಿಗೆ ಸರಿ!. ಐತಿಹಾಸಿಕ ವಿಜಯನಗರದ ರಾಜ್ಯಧಾನಿಯಾದ ಆನೆಗೊಂದಿಯ ಉತ್ಸವವನ್ನು ಈ ಹಿಂದೆ ಆಳಿದ ರಾಜಕೀಯ ನಾಯರಾದವರು ಈ ರೀತಿಯಾಗಿ ಉತ್ಸವವನ್ನು ನಡೆಸಿಕೊಂಡು ಬಂದಿರುವ ವಾಡಿಕೆ ಇದೆ. 1998ರಲ್ಲಿ ಹಂಪಿ ಉತ್ಸವದಂತೆಯೇ ಆನೆಗೊಂದಿಯ ಉತ್ಸವವೂ ನಡೆಯಬೇಕು, ಆನೆಗೊಂದಿಯ ಮಹತ್ವದ ಹೊಸ ತಲೆಮಾರಿನವರಿಗೆ ತಿಳಿಯಬೇಕು ಎಂಬ ಆಶಯದಲ್ಲಿ ಹಂಪಿ ಉತ್ಸವದೊಂದಿಗೆ ಆನೆಗೊಂದಿ ಉತ್ಸವವನ್ನೂ ಏಕಕಾಲದಲ್ಲಿ ಆಚರಿಸಲಾಗುತ್ತಿತ್ತು. ಆದರೀಗ, ಆನೆಗೊಂದಿ ಉತ್ಸವ ನಡೆಯುತ್ತಿಲ್ಲ. ಆದರೆ, ಹಂಪಿಯಲ್ಲಿ ಉತ್ಸವ ನಡೆಯುತ್ತಿದೆ. ಹಂಪಿಯಲ್ಲಿ ಉತ್ಸವ ಆಚರಿಸುವಾಗ ತುಂಗಭದ್ರಾ ದಡದ ಇನ್ನೊಂದು ಭಾಗದವರು ನಮ್ಮಲ್ಲಿಯೂ ಉತ್ಸವ ಯಾವಾಗ ಎಂದು ಕಣ್ಣು ಕಣ್ಣು ಬಿಟ್ಟುಕೊಂಡು ನೋಡುವಂತಾಗಿದೆ. ಹಂಪಿ ಉತ್ಸವದಂತೆ ಈ ಉತ್ಸವವನ್ನು ಪ್ರತಿ ವರ್ಷ ಆಚರಿಸಬೇಕೆಂದು ನಮ್ಮ ಸಂಘಟನೆಯ ಆಶಯವಾಗಿದೆ. 1998ರಲ್ಲಿ ಹಂಪಿ ಉತ್ಸವದ ಜೊತೆಗೆ ಜಂಟಿಯಾಗಿ ಆನೆಗೊಂದಿ ಉತ್ಸವ ಆರಂಭವಾಯ್ತು. ಉತ್ಸವಕ್ಕೆ ಹಂಪಿಯಲ್ಲಿ ಚಾಲನೆ ಸಿಕ್ಕರೆ, ಆನೆಗೊಂದಿಯಲ್ಲಿ ಉತ್ಸವ ಸಮಾರೋಪಗೊಂಡಿತ್ತು. ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ ಪ್ರಕಾಶ್ ಚಾಲನೆ ನೀಡಿದ್ದರು. 1998 ರಲ್ಲಿ ಹಂಪಿ ಉತ್ಸವದ ಜೊತೆಗೆ ಜಂಟಿಯಾಗಿ ಆನೆಗೊಂದಿ ಉತ್ಸವ ಆರಂಭವಾಯ್ತು. ಉತ್ಸವಕ್ಕೆ ಹಂಪಿಯಲ್ಲಿ ಚಾಲನೆ ಸಿಕ್ಕರೆ, ಆನೆಗೊಂದಿಯಲ್ಲಿ ಉತ್ಸವ ಸಮಾರೋಪಗೊಂಡಿತ್ತು. ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ ಪ್ರಕಾಶ್ ಚಾಲನೆ ನೀಡಿದ್ದರು. 1999 ರಲ್ಲಿ ಅಂದಿನ ಸಚಿವ ಎಂ.ವೈ.ಘೋರ್ಪಡೆ ಹಂಪಿ- ಆನೆಗೊಂದಿ ಉತ್ಸವಕ್ಕೆ ಚಾಲನೆ ನೀಡಿದ್ದರು. 2011 ರಲ್ಲಿ ಸಿಎಂ ಆಗಿದ್ದ ಬಿ.ಎಸ್ ಯಡಿಯೂರಪ್ಪ ಆನೆಗೊಂದಿ ಉತ್ಸವಕ್ಕೆ ಚಾಲನೆ ನೀಡಿದ್ದರು. 2012 ರಲ್ಲಿ ನಡೆದ ಆನೆಗೊಂದಿ ಉತ್ಸವವನ್ನು ಸ್ಥಳೀಯ ಜನಪ್ರತಿನಿಧಿಗಳು ಸರಳವಾಗಿ ನಡೆಸಿದ್ದರು. 2014ರಲ್ಲಿ ನಡೆದ ಆನೆಗೊಂದಿ ಉತ್ಸವಕ್ಕೆ ಅಂದಿನ ಸಚಿವರಾಗಿದ್ದ ಶಿವರಾಜ ತಂಗಡಗಿ ಚಾಲನೆ ನೀಡಿದ್ದರು. 2023-24 ನೇ ಸಾಲಿನಲ್ಲಿಯೂ ಇದೆ ಸಚಿವರಾದ ಶಿವರಾಜ ತಂಗಡಗಿಯವರು ಆನೆಗೊಂದಿ ಉತ್ಸವಕ್ಕೆ ಪ್ರೋತ್ಸಾಹ ನೀಡಿದ್ದರೆ. ಆದರೆ ಹೋದ ವರ್ಷದ ಉತ್ಸವಲ್ಲಿ ಪಾಲ್ಲಗೊಂಡ ಕಲಾವಿಧರಿಗೆ ಮತ್ತು ದುಡಿದ ಕಾರ್ಮಿರಿಗೆ ಇನ್ನೂ ಸಹ ಸರಿಯಾದ ಹಣ ಬಿಡುಗಡೆ ಮಾಡಿರುವುದಿಲ್ಲ. ಕಲಾವಿಧರಿಗೆ ಮತ್ತು ಕಾರ್ಮಿಕರ ಹೊಟ್ಟೆಯ ಮೇಲೆ ಒಡೆದಂತಾಗಿರುತ್ತದೆ. ಮತ್ತು ಆನೆಗುಂದಿ ವೈಭವದ ಇತಿಹಾಸವನ್ನು ತೆಗೆದು ನೋಡಿದರೆ ಇಲ್ಲಿ ಹನುಮ ಹುಟ್ಟಿದ ಸ್ಥಳವಿದೆ, ಶಬರಿ ಗುಹೇಯೂ ಇದೆ, ರಾಮ,ಲಕ್ಷ್ಮಣ, ಹನುಮಂತನು ಮೊದಲ ಬೇಟಿಕೊಟ್ಟ ಸ್ಥಳವಿದೆ, ಶಿವ-ಪಾರ್ವತಿಯವರು ಕಲ್ಯಾಣವನ್ನು ಮಾಡಿಕೊಂಡಿರುವ ಪಂಪಾ ಸರೋವವಿದೆ, ವಾಲಿ ಕಿಷ್ಕಿಂದ ರಾಜವಾಳಿದ ಸ್ಥಳವಾಗಿ ರಾಜ್ಯಧಾನಿಯಾಗಿದೆ, ವಾಲಿ ಪರ್ವತವಿದೆ, ತಾರಾ ಪರ್ವತವಿದೆ, ನವ ಬೃಂದಾವನವಿದೆ ಮತ್ತು ಶ್ರೀಕೃಷ್ಣ ದೇವರಾಯರ ಸಮಾಧಿಯು ಸಹ ಆನೆಗುಂದಿಯಲ್ಲಿಯೇ ಇದೆ ಹಾಗೂ ಬೆಂಗಳೂರಿನ ಕೆಂಪೇಗೌಡ ರಾಜನನ್ನು ಬಂಧಿಸಿದ ಬಂಧಿಖಾನೆಯು ಆನೆಗುಂದಿಯಲ್ಲಿದೆ, ಮೂಲ ಮೈಸೂರು ಉತ್ಸವದ ಪ್ರರಣೆಯು ಇಲ್ಲಿನ ಆನೆಗೊಂದಿಯ ಉತ್ಸವವೇ ಕಾರಣ, ಅಲ್ಲಿನ ಅಂಬಾರಿಯು ಇಲ್ಲಿನ ಗಂಡುಗಲಿ ಕುಮಾರರಾಮನ ತಂದೆಯವರಾದ ಕಂಪ್ಲಿರಾಯರು ಕಾಲದಲ್ಲಿ ನಿರ್ಮಾಣಗೊಂಡಿರುವುದಂತಹದ್ದು ಅಂಬಾರಿಯೂ ಸಹ ಆನೆಗುಂದಿಯ ಸ್ಥಳದ್ದಾಗಿದೆ ಹೆಚ್ಚಾಗಿ ಗಂಡುಗಲಿ ಕುಮಾರಾಮ ವಿಜಯನಗರ ಸಾಮ್ರಾಜ್ಯ ಮೂಲ ಪುರುಷ ಆತನು ಸುತ್ತಮುತ್ತಲು ಆಳಿದ ಸ್ಥಳವಿದೆ ಇಷ್ಟೇಲ್ಲಾ ಐತಿಹಾಸ ಸ್ಥಳವಾಗಿರು ಆನೆಗುಂದಿ ಉತ್ಸವವನ್ನು ಕಡೆಗಣಿಸುತ್ತಿರುವುದು ಎಷ್ಟು ಸರಿ. ಈಗಾಗಲೇ ಹಂಪಿ ಉತ್ಸವ ಮತ್ತು ಕನಕಗಿರಿ ಉತ್ಸವದ ಪೂರ್ವಸಿದ್ಧತೆಯು ತುಂಬಾ ಅದ್ದೂರಿ ನಡೆಸುತ್ತಿದ್ದು, ಇದರ ಜೊತೆಯಲ್ಲಿ ಆನೆಗೊಂದಿ ಉತ್ಸವವನ್ನು ಕಡೆಗಾಣಿಸುತ್ತಿರುವುದು ಎಷ್ಟರ ಸರಿ? ಈ ರೀತಿಯಾಗಿ ತಾರತಮ್ಯ ಮಾಡದೇ ಮಾನ್ಯ ಮುಖ್ಯಮಂತ್ರಿಗಳು ಮತ್ತು ಕೊಪ್ಪಳ ಉಸ್ತುವಾರಿ ಮಂತ್ರಿಗಳು ಆದಷ್ಟು ಬೇಗನೇ ಈ ಎರಡು ಉತ್ಸವಗಳ ಜೊತೆಯಲ್ಲಿ ಆನಗೊಂದಿ ಉತ್ಸವಕ್ಕೂ ಸಹ ಮನ್ನಣೆ ನೀಡಬೇಕೆಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ. ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಗಾಲಿ ಜನಾರ್ಧರೆಡ್ಡಿಯವರು ಆನೆಗೊಂದಿ ಉತ್ಸವವನ್ನು ಮಾಡಬೇಕು ಎಂಬ ಆಶಯದಲ್ಲಿದ್ದರೆ ಕೆಲವೊಂದು ರಾಜಕೀಯ ವ್ಯಕ್ತಿಗಳು ಅದನ್ನು ಮಾಡುವದಕ್ಕೆ ಅಡ್ಡಗಾಲು ಹಾಕಿರುವುದು ಎಷ್ಟರಮೆಟ್ಟಿಗೆ ಸರಿ, ಮತ್ತು ಬೇರೆ ಪಕ್ಷದಲ್ಲಿ ಇದ್ದಾರೆ ಎಂಬ ಒಂದೇ ಕಾರಣಕ್ಕೆ ಆನೆಗೊಂದಿ ಉತ್ಸವಕ್ಕೆ ತಾರತಮ್ಯ ಮಾಡುವುದು ಎಷ್ಟು ಸರಿ? ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ಶೆಟ್ಟಿ ಬಣ) ಕೊಪ್ಪಳ ಜಿಲ್ಲಾಧ್ಯಕ್ಷರಾದ ಪಂಪಣ್ಣ ನಾಯಕ ಇವರು ತೀವ್ರವಾಗಿ ಖಂಡಿಸಿದ್ದಾರೆ.
