ಕೆಪಿಎಸ್ ಶಾಲಾ ಕ್ರೀಡಾಂಗಣದಲ್ಲಿ 77 ನೇ ಗಣರಾಜ್ಯೋತ್ಸವ ಆಚರಣೆ ಗೌರವದಿಂದ ಬಾಳಲು ಸಂವಿಧಾನವೇ ರಕ್ಷಾಕವಚ : ತಹಶೀಲ್ದಾರ್ ವಿಶ್ವನಾಥ್ ಮುರುಡಿ…

ಕನಕಗಿರಿ: ನಮ್ಮ ದೇಶ ಸ್ವಾತಂತ್ರ್ಯ ಹೊಂದಿ ಇಂದು ಸುಸೂತ್ರವಾಗಿ ನಡೆಯಲು ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅಪಾರವಾದುದ್ದು ಎಂದು ತಾಲೂಕು ಆಡಳಿತ ಅಧಿಕಾರಿ ವಿಶ್ವನಾಥ್ ಮುರುಡಿ ಹೇಳಿದರು ಮತ್ತು ಮಕ್ಕಳಲ್ಲಿ ದೇಶಭಕ್ತಿಯನ್ನು ಹಾಗೂ ದೇಶದ ಮೇಲೆ ಗೌರವ ಹಾಗೂ ನಮ್ಮ ದೇಶದ ಇತಿಹಾಸದ ಪುಟಗಳನ್ನು ತಿಳಿಸಬೇಕಾದ ಕರ್ತವ್ಯ ಶಿಕ್ಷಕರಲ್ಲಿ ಅತಿ ಹೆಚ್ಚು ಇರುತ್ತದೆ ಎಂದು ತಿಳಿಸಿದರು. .ಕೆಪಿಎಸ್ ಶಾಲಾ ಮೈದಾನದ ಅವರಣದಲ್ಲಿ 77 ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು. 1950 ಜನವರಿ 26 ರಂದು ನಮ್ಮ ಸಂವಿಧಾನ ಜಾರಿಗೆ ಬಂದ ದಿನವಾಗಿದೆ. ನಮ್ಮ ಸಂವಿಧಾನವು ಜಗತ್ತಿನಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ. ಈ ನಮ್ಮ ಸಂವಿಧಾನದ ರಚನೆಗೆ ಒಟ್ಟು 2 ವರ್ಷ 11 ತಿಂಗಳು, 18 ದಿನ ಬೇಕಾಯಿತು. ಇದು ನಮಗೆ ಪ್ರಮುಖವಾಗಿ ಸಮಾನತೆ, ಭ್ರಾತೃತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಪ್ರತಿಯೊಬ್ಬ ಭಾರತೀಯನೂ ಗೌರವದಿಂದ ಬಾಳಲು ಸಂವಿಧಾನವೇ ರಕ್ಷಾಕವಚ. ಸಂವಿಧಾನದ ಮೂಲಕ ದೇಶದಲ್ಲಿ ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರತಿಯೊಬ್ಬರೂ ಈ ಶುಭ ದಿನದಂದು, ಸಂವಿಧಾನದ ನೈಜ ಆಶಯಗಳನ್ನು ಅರಿಯೋಣ ಎಂದು ತಿಳಿಸಿದರು.ನಂತರ ತಾಲೂಕು ಪಟ್ಟಣ ಪಂಚಾಯಿತಿಯ ಅಧ್ಯಕ್ಷರು ಶ್ರೀಮತಿ ತನುಶ್ರೀ ಟಿ ಜೆ ರಾಮಚಂದ್ರ ಮಾತನಾಡಿ, ಸಂವಿಧಾನ- ನಮ್ಮ ರಾಷ್ಟ್ರದ ಸರ್ವೋಚ್ಛ ಕಾನೂನು. ಅದಕ್ಕೆ ಎಲ್ಲರೂ ಗೌರವಿಸಬೇಕು, ಅದರ ನಿಯಮಗಳನ್ನು ಪಾಲಿಸಬೇಕು. ನಮ್ಮ ಸಂವಿಧಾನವು ರಷ್ಯಾ, ಬ್ರಿಟನ್, ಅಮೆರಿಕಾ, ಇತರೆ ದೇಶಗಳ ಸಂವಿಧಾನಗಳ ಅಂಶಗಳನ್ನು ಹೊಂದಿರುವ ಬೃಹತ್ ಸಂವಿಧಾನವಾಗಿದೆ. ಇದರ ಜಾರಿಗೆ ಮಹತ್ವದ ಕೊಡುಗೆ ನೀಡಿದವರು ಡಾ ಬಿ.ಆರ್.ಅಂಬೇಡ್ಕರ್ ರವರು ಎಂದು ಸ್ಮರಿಸಿದರು.ತಾಲೂಕು ಕ್ರೀಡಾಂಗಣದಲ್ಲಿ ದೇಶಭಕ್ತಿ ಗೀತೆಗಳು ಹಾಡುತ್ತ ಮಕ್ಕಳಲ್ಲಿ ನೃತ್ಯ ಸ್ಪರ್ಧೆ ಮತ್ತು ಎಲ್ಲಾ ಸ್ಕೂಲ್ ಮಕ್ಕಳಿಂದ ಪರೇಡ್ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿತ್ತು .ಈ ವೇಳೆ ತಾಲೂಕ್ ಆಡಳಿತ ಅಧಿಕಾರಿ ವಿಶ್ವನಾಥ್ ಮುರುಡಿ ಪಿ ಐ ಎಂ ಡಿ ಫೈಸಲ್ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಲಕ್ಷ್ಮಣ್ ಕಟ್ಟಿಮನಿ ಹಾಗೂ ತಾಲೂಕ್ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ ರಾಜಶೇಖರ್ ಸಿಡಿಪಿಯೋ ವಿರೂಪಾಕ್ಷಯ್ಯ ಸ್ವಾಮಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ತನುಶ್ರೀ ಟಿ ಜೆ ಉಪಾಧ್ಯಕ್ಷ ಕಂಠೀರಂಗ ನಾಯಕ್ ಮತ್ತು ಸರ್ವ ಸದಸ್ಯರು ಹಾಗೂ ಶಾಲೆಯ ಶಿಕ್ಷಕರು ಸಿಬ್ಬಂದಿಗಳು ಮತ್ತು ಊರಿನ ಗುರು ಹಿರಿಯರು ಪಾಲ್ಗೊಂಡಿದ್ದರು .

ರಮೇಶ್ ಈಳಿಗೇರ್ ವಾಲ್ಮೀಕಿ ಅಸ್ತ್ರ ನ್ಯೂಸ್ ಕನಕಗಿರಿ ತಾಲೂಕಿನ ವರದಿಗಾರ – 9035332032
