ಎರಡನೇ ಕೃಷಿ ಕ್ರಾಂತಿಗೆ ಮುನ್ನುಡಿ ಬರೆಯಲಿರುವ ಗ್ರೀನ್ ಹೈಡ್ರೋಜನ್ ಉತ್ಪಾದನೆ- ಭಾಲಚಂದ್ರ ಜಾಬಶೆಟ್ಟಿ…

ಎರಡನೇ ಕೃಷಿ ಕ್ರಾಂತಿಗೆ ಮುನ್ನುಡಿ ಬರೆಯಲಿರುವ ಗ್ರೀನ್ ಹೈಡ್ರೋಜನ್ ಉತ್ಪಾದನೆ- ಭಾಲಚಂದ್ರ ಜಾಬಶೆಟ್ಟಿ…

ರಾಮದುರ್ಗದ ಸ್ಟೇಟ್ ಜೂನಿಯರ್ ಕಾಲೇಜ ಹಾಗೂ ಸಿ.ಡಿ. ಹಲ್ಯಾಳ ಪ್ರೌಢಶಾಲೆಗಳ ಎನ್.ಸಿ.ಸಿ. ಕೆಡೆಟ್ ಗಳಿಗಾಗಿ ಎಸ್.ಎಸ್.ಸಿ.ಡಿ ಚಟುವಟಿಕೆಗಳಡಿಯಲ್ಲಿ ಆಯೋಜಿಸಲಾಗಿದ್ದ ಎನರ್ಜಿ ಎಫಿಸಿಯೆನ್ಸಿ ಇಜ್ ಎನರ್ಜಿ ಕನ್ಸರ್ವೇಶನ್ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿ ಗಳಾಗಿ ಮಾತನಾಡುತ್ತಿದ್ದರು.ಸೋಲಾರ ವಿದ್ಯುಚ್ಛಕ್ತಿ ಬಳಸಿ ಉತ್ಪಾದಿಸಬಹುದಾದ ಗ್ರೀನ್ ಹೈಡ್ರೋಜನ್ ಮೂಲಕ ಗ್ರೀನ ಅಮೋನಿಯಾ ಹಾಗೂ ಅದರಿಂದ ಗ್ರೀನ್ ಯುರಿಯಾ ಉತ್ಪಾದನೆ ಮಾಡುವ ಕನಸು ಅತೀ ಶೀಘ್ರದಲ್ಲಿ ನನಸಾಗಲಿದ್ದು ಅದರಿಂದ ಎರಡನೇ ಕೃಷಿ ಕ್ರಾಂತಿಗೆ ನಾಂದಿಯಾಗಲಿದೆಯೆಂದು ಖ್ಯಾತ ಪರಿಸರವಾದಿ ಭಾಲಚಂದ್ರ ಜಾಬಶೆಟ್ಟಿಯವರು ರಾಷ್ಟ್ರೀಯ ಗ್ರೀನ ಹೈಡ್ರೋಜನ್ ಮಿಶನ್ ಪ್ರಾಯೋಜಿತ ಇಂಧನ ಕ್ಷಮತೆ ಹೆಚ್ಚಿಸುವ ತಂತ್ರಜ್ಞಾನವನ್ನು ಕ್ಷೇತ್ರಮಟ್ಟದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸುವ ತಾಂತ್ರಿಕ ಕ್ರಮಗಳ ಕುರಿತು ವಿಷಯ ಮಂಡಿಸುವ ಸಂದರ್ಭದಲ್ಲಿ ಈ ರೀತಿ ಅಭಿಪ್ರಾಯ ಪಟ್ಟರು.

ಸಾರಿಗೆ ಕ್ಷೇತ್ರದಲ್ಲಿ ಪಳೆಯುಳಿಕೆ ಇಂಧನಗಳಿಗೆ ಪರ್ಯಾಯವಾಗಿ ಗ್ರೀನ್ ಹೈಡ್ರೋಜನ್ ಬಳಸಿ ಇಂಗಾಲದ ಹೆಜ್ಜೆಗಳನ್ನು ಕಡಿತಗೊಳಿಸಲು ಸಾಧ್ಯವೆಂದೂ ಸಹ ಅಭಿಪ್ರಾಯಪಟ್ಟರುಸೌರ ವಿದ್ಯುಚ್ಛಕ್ತಿ ಉತ್ಪಾದನಾ ತಂತ್ರಜ್ಞಾನಗಳ ಕ್ಷಮತೆ ಹೆಚ್ಚಿಸುವ ಇತ್ತೀಚಿನ ಸಂಶೋಧನೆ ಕುರಿತು ಸಹ ಸಮಗ್ರ ಮಾಹಿತಿ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕ ಎಸ್.ಜಿ. ಗಣಾಚಾರಿಯವರು ಮಾತನಾಡಿ ಗ್ರೀನ ಹೈಡ್ರೋಜನ್ ಬಳಸಿ ಪರೀಕ್ಷಾರ್ಥ ರೈಲು ಓಡಿಸಿರುವುದೊಂದು ಮೈಲುಗಲ್ಲಾಗಿದೆಯೆಂದರು.ಭಾಲಚಂದ್ರ ಜಾಬಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಬೂದೇಶ್ವರ, ಸಿ.ಟಿ.ಓ. ಮಂಜುನಾಥ ಕುಲಕರ್ಣಿ, ಸಿ.ಡಿ.ಹಲ್ಯಾಳ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಜೋಗಳೆ ಹಾಗೂ ಸಿ.ಟಿ.ಓ.ಹಿರೇಮಠ ಮ್ಯಾಡಮ್, ಹಾಗೂ ಎನ್.ಸಿ.ಸಿ ಅಧಿಕಾರಿಗಳಾದ ಪೃಥ್ವಿಸಿಂಗ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *