ಶ್ರೀ ಕನ್ನಿಕಾ ಪರಮೇಶ್ವರಿ ಭವ್ಯ ಮೆರವಣಿಗೆ. ನಾಡಿನ ಸಾಂಸ್ಕೃತಿಕ ಅನಾವರಣ ಮೆರವಣಿಗೆಯ ಉದ್ದಕ್ಕೂ ಜೈ ವಾಸವಿ ಉದ್ಘೋಷ. ಭಕ್ತಿ ಭಾವ ಮೂಡಿಸಿದ ಶ್ರೀ ವಾಸವಿ ಆರತಿ.

ಗಂಗಾವತಿ. ನಗರದ ಆರ್ಯವೈಶ್ಯ ಸಮಾಜ. ಶ್ರೀ ವಾಸವಿ ಮಹಿಳಾ ಮಂಡಳಿ. ವಾಸವಿ ಯುವಜನ ಸಂಘ ಇವರ ನೇತೃತ್ವದಲ್ಲಿ ರವಿವಾರದಂದು ಜರುಗಿದ ಶ್ರೀ ಕನ್ನಿಕಾ ಪರಮೇಶ್ವರಿ ಜಯಂತೋತ್ಸವದ ಪ್ರಯುಕ್ತ ಸಂಜೆ ಜರುಗಿದ ಶ್ರೀ ವಾಸವಿ ಮಾತೆಯ ಭವ್ಯ ಮೆರವಣಿಗೆ ನಾಡಿನ ಸಾಂಸ್ಕೃತಿಕ ಅನಾವರಣಕ್ಕೆ ಸಾಕ್ಷಿಯಾಗಿತ್ತು. ಸಕಲ ವಾದ್ಯ ವೈಭವ ಬೆಂಗಳೂರಿನ ನೆಲ್ದಾವ್ ಕಲಾ ಕೇಂದ್ರದ ನವ ಶಕ್ತಿ ದೇವತೆಗಳ ವೈಭವದ ನೃತ್ಯ ನೆರೆದ ಜನಸ್ತೋಮವನ್ನು ಆಕರ್ಷಿಸುವಲ್ಲಿ ಸಫಲತೆ ಹೊಂದಿದ್ದು. ಈ ಸಂದರ್ಭದಲ್ಲಿ ಮೆರವಣಿಗೆಯ ಉದ್ದಕ್ಕೂ ಜೈ ವಾಸವಿ ಸಮಾಜ ಬಾಂಧವರ ಉದ್ಘಾಷ ಬಾನೆತ್ತರಕ್ಕೆ ತಲುಪುವಂತೆ ಭಾಸವಾಯಿತು. ಬಳಿಕ ಗಾಂಧಿ ವೃತ್ತದಲ್ಲಿ ಕಾವ್ಯ ಕುಂಜ. ಅರಗಿಣಿ ಹಾಡಿಗೆ ಗಾಂಧಿ ಪ್ರತಿಮೆ ಬಳಿ ದೇವಿಯ ಚಿತ್ರವನ್ನು ಬಿಡಿಸಿದ ಕಲಾವಿದ ಶ್ರೀಮತಿಸಿಎಂ ರಾಧಿಕಾ ಅವರ ಕುಂಚ ಆಕರ್ಷಣೆ ವಾಗಿ ಮೂಡಿಬಂದಿತು. ಸಮಾಜದ ಅಧ್ಯಕ್ಷ ರೂಪಾರಾಣಿ ಲಕ್ಷ್ಮಣ್ ರಾಯಚೂರು ಅವರ ಉತ್ಸಾಹ ಕ್ರಿಯಾಶೀಲತೆಯಿಂದಾಗಿ ಸಮಾಜದ ಮಹಿಳೆಯರು ದಾರಿ ಉದ್ದಕ್ಕೂ ಸೊಗಸಾದ ಹೆಜ್ಜೆಯನ್ನು ಹಾಕುವುದರ ಮೂಲಕ ತಮ್ಮ ಕ್ರಿಯಾಶೀಲತೆಯನ್ನು ವ್ಯಕ್ತಪಡಿಸಿದರು. ಬಳಿಕ ವಾಸವಿ ಆರತಿ ಧಾರ್ಮಿಕ ಪೂಜಾ ಕಾರ್ಯಕ್ರಮವನ್ನು ದೇವಸ್ಥಾನದ ಪ್ರಧಾನ ಅರ್ಚಕ ದಿಗಂಬರ್ ಭಟ್ ಜೋಶಿ. ಹಾಗೂ ಋತಿ ಜ್ಜ ರ್ ತಂಡದವರು ಸಾಂಗತವಾಗಿ ನಡೆಸಿಕೊಟ್ಟರು. ಒಟ್ಟಾರೆ ಕಳೆದ ವರ್ಷದ ಮಾದರಿಯಲ್ಲಿ ಈ ವರ್ಷ ಶ್ರೀ ಕನ್ನಿಕಾ ಪರಮೇಶ್ವರಿ ಜಯಂತೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವಲ್ಲಿ ಗಂಗಾವತಿ ಆರ್ಯವೈಶ್ಯ ಸಮಾಜ ಆಸ್ತಿಕ ಬಾಂಧವರಲ್ಲಿ ಶ್ರದ್ಧೆ ಭಕ್ತಿ ಮೂಡಿಸುವಲ್ಲಿ ಸಫಲತೆಗೊಳಿಸಿದರು…ಬಾಕ್ಸ್.. ಭಾರತದ ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು.. ಮಾಜಿ ಶಾಸಕ ಪರಣ್ಣ ಮು ನವಳ್ಳಿ . ವಾಸವಿ ಆರತಿ ಸಮಾರಂಭಕ್ಕೆ ಆಗಮಿಸಿದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ಭಾರತದ ಭವ್ಯ ಪರಂಪರೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಜರುಗಬೇಕು. ವ್ಯಕ್ತಿ ಸನ್ಮಾರ್ಗದಲ್ಲಿ ನಡೆಯಲು ಧಾರ್ಮಿಕ ಆಚರಣೆಗಳು ಅತ.

