ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಹಬ್ಬದ ಅಂಗವಾಗಿ 15ನೇ ವರ್ಷದ ಅನ್ನಸಂತರ್ಪಣೆ ಕಾರ್ಯಕ್ಕೆ ಚಾಲನೆ,,,,,,,

ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಹಬ್ಬದ ಅಂಗವಾಗಿ 15ನೇ ವರ್ಷದ ಅನ್ನಸಂತರ್ಪಣೆ ಕಾರ್ಯಕ್ಕೆ ಚಾಲನೆ,,,,,,,

ಗಂಗಾವತಿಯ ಹೃದಯ ಭಾಗದಲ್ಲಿರುವ ಕುರುಹಿನ ಶೆಟ್ಟಿ ಸಮಾಜದ ಮುಖಂಡರಾಗಿರುವ ಶ್ರೀ ಐಲಿ ನಾರಾಯಣಪ್ಪ ಅವರ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವರ 15ನೇ ವರ್ಷದ ಪೂಜಾ ಕಾರ್ಯಕ್ರಮ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ಮತ್ತು ವೈಭವದಿಂದ ನಡೆಯಿತು,,,, ಕುರುಹೀನ ಶೆಟ್ಟಿ ಸಮಾಜದ ಶ್ರೀ ನೀಲಕಂಠೇಶ್ವರ ದೇವಸ್ಥಾನ ದಲ್ಲಿ ನಡೆದ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಪೂಜಾ ಕಾರ್ಯಕ್ರಮವನ್ನು ಗುರುಗಳಾದ ಶ್ರೀ ತಾತಯ್ಯ ಸ್ವಾಮಿ ಗುರುಗಳು ನೆರವೇರಿಸಿದರು,,,,, ಕಳೆದ 15 ವರ್ಷಗಳಿಂದ ನಗರಸಭೆಯ ಮಾಜಿ ಅಧ್ಯಕ್ಷರಾಗಿರುವ ಶ್ರೀ ಐಲಿ ನಾರಾಯಣಪ್ಪ ನೇತೃತ್ವದಲ್ಲಿಮತ್ತು ಕುರುಹಿನ ಶೆಟ್ಟಿ ಸಮಾಜ ಬಾಂಧವರ ಸಹಯೋಗದಲ್ಲಿ ನಡೆಯುತ್ತಿರುವ ಪೂಜಾ ಕಾರ್ಯಕ್ರಮ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ಕೆ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ನಾಗಪ್ಪ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯರಾಗಿರುವ ಸನ್ಮಾನ್ಯ ಶ್ರೀ ಎಚ್ ಆರ್ ಶ್ರೀನಾಥ್ ಅವರು ಚಾಲನೆ ನೀಡಿದರು,,,,, ಮಕರ ಸಂಕ್ರಮಣ ಹಬ್ಬದ ದಿನದಂದು ನಡೆದ ಶ್ರೀ ಅಯ್ಯಪ್ಪ ಸ್ವಾಮಿ ಪೂಜಾ ಕಾರ್ಯಕ್ರಮ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಕುರುಹಿನ ಸಮಾಜದ ಯಜಮಾನರಾಗಿರುವ ಶ್ರೀ ಏಳುಬಾವಿ ಕುಬೇರಪ್ಪ ಶ್ರೀ ತಟ್ಟಿ ನಾಗಪ್ಪ ಶ್ರೀ ಶಾವಿ ತಿಪ್ಪಣ್ಣನವರು ಶ್ರೀ ಕುರುಗೋಡು ಬಸವರಾಜ್ ಶ್ರೀ ಮಾಂತ ಗೊಂಡ ರವೀಂದ್ರನಾಥ ನಾಗಪ್ಪ ಶ್ರೀ ಮಾಂತಗೊಂಡ ಸರ್ವೇಶ್ ಮಲ್ಲಿಕಾರ್ಜುನ ನಾಗಪ್ಪ ಕಾರ್ಯದರ್ಶಿಗಳಾದ ಶ್ರೀ ಸಿರಿವಾರ ಲಕ್ಷ್ಮಣಪ್ಪ ನಗರಸಭೆಯ ಮಾಜಿ ಸದಸ್ಯರಾದ ಐಲಿ ಚಂದ್ರಪ್ಪನವರು ಪ್ರಮುಖರಾದ ಐಲಿ ಮಾರುತಿ ಐಲಿ ಬಸವರಾಜ್ ಸಿರವಾರ ವಿರೂಪಾಕ್ಷ ಪ್ಪ ವಾಸ್ತು ತಜ್ಞರಾಗಿರುವ ಡಾಕ್ಟರ್ ಮಂಜುನಾಥ ಕುರುಗೋಡ ಹಾಗೂ ಕುರುಹಿನಶೆಟ್ಟಿ ಸಮಾಜದ ಮಹಿಳಾ ಮಂಡಳದ ಗೌರವಾಧ್ಯಕ್ಷರಾಗಿರುವ ಶ್ರೀಮತಿ ಸರೋಜಮ್ಮ ಮಲ್ಲಿಕಾರ್ಜುನ ನಾಗಪ್ಪ ಅವರುಗಳು ಸೇರಿದಂತೆ ಗಣ್ಯಮಾನ್ಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *