ಭತ್ತಕ್ಕೆ ಬೆಂಬಲ ಬೆಲೆ. ಬೆಳೆ ನಷ್ಟ ಪರಿಹಾರ ಹಾಗೂ ಬೇಸಿಗೆ ಬೆಳೆಗೆ ನೀರು ಬಿಡುಗಡೆಗೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ಪ್ರತಿಭಟನೆ…

ಭತ್ತಕ್ಕೆ ಬೆಂಬಲ ಬೆಲೆ. ಬೆಳೆ ನಷ್ಟ ಪರಿಹಾರ ಹಾಗೂ ಬೇಸಿಗೆ ಬೆಳೆಗೆ ನೀರು ಬಿಡುಗಡೆಗೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ಪ್ರತಿಭಟನೆ…

ಗಂಗಾವತಿ.. ರೈತರು ಬೆಳೆದ ಬತ್ತದ ಬೆಳೆಗೆ ಬೆಂಬಲ ಬೆಲೆ . ಅಕಾಲಿಕ ಮಳೆಯಿಂದ ಹೇಳಿ ನಷ್ಟ ಉಂಟಾಗಿದ್ದು ನಷ್ಟ ಪರಿಹಾರ ಹಾಗೂ ಬೇಸಿಗೆ ಬೆಳೆಗೆ ಸಮರ್ಪಕವಾಗಿ ನಿರ್ಹರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ತಾಲೂಕ ಸಮಿತಿಯಲ್ಲಿ ನೇತೃತ್ವದಲ್ಲಿ ಮಂಗಳವಾರದಂದು ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಬಲುಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಏ ಹುಲುಗಪ್ಪ ಮಾತನಾಡಿ ಸಾಲ ಮಾಡಿ ಭತ್ತ ಬೆಳೆದ ರೈತರಿಗೆ ಅಕಾಲಿಕ ಮಳೆಯಿಂದಾಗಿ ಬೆಳೆ ಸಂಪೂರ್ಣ ನಷ್ಟ ಬಂದಿದ್ದು ಈ ಹಿನ್ನೆಲೆಯಲ್ಲಿ ಸರಕಾರ ತಕ್ಷಣವೇ ಪರಿಹಾರ ಕಲ್ಪಿಸಬೇಕು. ಜೊತೆಗೆ ಸರ್ಕಾರದಿಂದ ನಿಗದಿಪಡಿಸಲಾದ ಭ ತ್ತಕ್ಕೆ 3500 ಬೆಂಬಲ ಬೆಲೆ ನಿಗದಿಪಡಿಸಬೇಕು ಜೊತೆಗೆ ಭತ್ತದ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು. ರೈತರು ಬೆಳೆದ ಬೆಳೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬೆಳೆ ವಿಮೆ ಹಣವನ್ನು ಸರ್ಕಾರ ಬರಿಸಬೇಕು ಇವುಗಳ ಜೊತೆಗೆ ಬೇಸಿಗೆ ಬೆಳೆಗೆ ನೀರು ಹರಿಸುವುದರ ಮೂಲಕ ರೈತರ ಬದುಕಿಗೆ ಆಸರೆ ಆಗಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕ್ ಅಧ್ಯಕ್ಷ ಮಂಜುನಾಥ್. ಕಾರ್ಯದರ್ಶಿ ಶೇಕಮ್ಮ ಎ ಎಲ್ ತಿಮ್ಮಣ್ಣ ಹಂಪಸದುರ್ಗ ನೀಲಪ್ಪ ತಾಹಿರಾ ಬೇಗಂ ಸುಬ್ಬರಾವ್ ಹನುಮೇಶ ಗಂಗಮ್ಮ ಶ್ರೀನಿವಾಸ ಕೇಶಪ್ಪ ಸ ಣ್ಣಪ್ಪ. ಮತ್ತಿತರರು ಸಂಘಟನೆಯ ಸದಸ್ಯರು ಹಾಗೂ ರೈತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *