ಸಂಕ್ರಾಂತಿ ನಧಿ ಸ್ನಾನಕ್ಕೆ ಲಿಟಲ್ ಹಾರ್ಟ್ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಜಾಗೃತಿ. ಕಡ್ಲೆ ಹಿಟ್ಟಿನ ಪಾಕೆಟ್ ವಿತರಣೆ…. ಜಗನ್ನಾಥ್ ಆಲಂಪಲ್ಲಿ

ಪ್ರತಿ ವರ್ಷವೂ ಸಂಕ್ರಾಂತಿ ಹಬ್ಬದ ದಿನದಂದು ಸಾಕಷ್ಟು ಕುಟುಂಬದವರು *ಸಾಮಾನ್ಯವಾಗಿ ಪವಿತ್ರ ಸ್ನಾನಕ್ಕಾಗಿ ನದಿಗೆ ಹೋಗುತ್ತಾರೆ *.ನಾವೆಲ್ಲಾ ಗಮನಿಸಿದಂತೆ ಎಲ್ಲರೂ ನದಿಯಲ್ಲಿ ಸ್ನಾನ ಮಾಡುವಾಗ *ಶಾಂಪೂ, ಸೋಪ್* ಉಪಯೋಗಿಸಿ ಸ್ನಾನ ಮಾಡುತ್ತಿರುವುದರಿಂದ ವಿಷ ಸ್ನಾನವನ್ನು ಅವರುಗಳು ಮಾಡುವುದಲ್ಲದೇ *ನದಿಯನ್ನು ಸಹ ವಿಷಪೂರಿತವನ್ನಾಗಿ ಮಾಡುತ್ತಿದ್ದಾರೆ *. ಆದ್ದರಿಂದ ಅವರುಗಳು ವಿಷಮುಕ್ತ ಸ್ನಾನವನ್ನು ಮಾಡಿ ನದಿಯನ್ನು ಸಹ ಕಾಪಾಡಿಕೊಳ್ಳಬೇಕೆಂಬ ಉದ್ದೇಶದಿಂದ *ಕಿಷ್ಕಿಂದ ಯುವ ಚಾರಣ ಬಳಗ ಗಂಗಾವತಿ, ವರದಶ್ರೀ ಫೌಂಡೇಶನ್ ಹುಬ್ಬಳ್ಳಿ, ಶ್ರೀರಂಗ ದೇವರಾಲು ಫೌಂಡೇಶನ್ ಗಂಗಾವತಿ ಇವರುಗಳೆಲ್ಲ ನಮ್ಮ ನದಿ ರಕ್ಷಣೆ ಮಾಡುವ ಸಲುವಾಗಿ ಕಂಕಣ ಬದ್ಧರಾಗಿದ್ದು

ನಮ್ಮ ಲಿಟಲ್ ಹಾರ್ಟ್ ಸ್ಕೂಲ್ ಸಹಯೋಗದಲ್ಲಿ ಈ ದಿನ ಮಕ್ಕಳೊಂದಿಗೆ ಪಾಲಕರಿಗೆ ಕಡ್ಲೆಹಿಟ್ಟಿನ ಪಾಕೆಟ್ ಗಳನ್ನು ಕಳಿಸಿರುತ್ತಾರೆ. ಆದ್ದರಿಂದ ಮಕ್ಕಳು ಮತ್ತು ಪಾಲಕರೆಲ್ಲ ಈ ಬಾರಿ ಪವಿತ್ರ ನದಿ ಸ್ನಾನವನ್ನು ಈ ಕಡೆಹಿಟ್ಟನ್ನು ಉಪಯೋಗಿಸಿ ಸ್ನಾನ ಮಾಡಬೇಕಾಗಿ ವಿನಂತಿಸಿ ಕೊಂಡಿರುತ್ತಾರೆ. *ಪಾಲಕರು ದಯವಿಟ್ಟು ಯಾವುದೇ ಕಾರಣಕ್ಕೂ ಶಾಂಪು, ಸೋಪ್ ಉಪಯೋಗಿಸತಕ್ಕದ್ದಲ್ಲ ಎಂದು ಜಾಗೃತಿ ಮೂಡಿಸುವುದರ ಜೊತೆಗೆ ಮನೆಯಲ್ಲಿ ಬಹಳ ಜನವಿದ್ದಲ್ಲಿ ಮನೆಯಿಂದಲೇ ಕಡ್ಲೆಹಿಟ್ಟು ತೆಗೆದುಕೊಂಡು ಹೋಗಿ ಸ್ನಾನ ಮಾಡಬೇಕಾಗಿ ವಿನಂತಿಸಿಕೊಂಡಿರುತ್ತಾರೆ.

ಸಾಮಾಜಿಕ ಕಳಕಳಿಯಿಂದ ಮಲೀನವಾಗುತ್ತಿರುವ ನದಿಯನ್ನು ಸಂವರಕ್ಷಿಸಲು ಪ್ರಯತ್ನಿಸುತ್ತಿರುವ ಕಿಷ್ಕಿಂದ ಯುವಚರಣ ಬಳಗ ಗಂಗಾವತಿ, ವರದಶ್ರೀ ಫೌಂಡೇಶನ್ ಹುಬ್ಬಳ್ಳಿ ಹಾಗೂ ಶ್ರೀರಂಗದವರಾಯಲು ಫೌಂಡೇಶನ್ ಗಂಗಾವತಿ ಇವರಿಗೆ ಲಿಟ್ಲ್ ಹಾರ್ಟ್ ಸ್ಕೂಲ್ ನ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ ಹಾಗೂ ಮುಖ್ಯೋಪಾಧ್ಯಾಯ ಶ್ರೀಮತಿ ಪ್ರಿಯಾಕುಮಾರಿ ಅವರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ. ಈ ಸಂಧರ್ಭದಲ್ಲಿ ಚಾರಣ ಬಳಗದ ಅರ್ಜುನ್, ಪವನ್ ಕುಮಾರ್ ಗುಂಡೂರ್ ಹಾಗೂ ಚಾರಣ ಬಳಗದ ಎಲ್ಲಾ ಸದಸ್ಯರು ಶಾಲೆಯ ಶಿಕ್ಷಕ/ಕಿಯರು ಉಪಸ್ಥಿತರಿದರು.

