ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಇಲಿಯಾಸ್ ಖಾದ್ರಿ ಹೇಳಿಕೆ`ಅನ್ಸಾರಿ, ತಮ್ಮ ಸ್ವಂತ ನಿವೇಶನ ಮಾರಿ ಮಸೀದಿಗೆ ಹಣ ನೀಡಿದ್ದಾರೆ’….

ಗಂಗಾವತಿ:ಕೇವಲ ಕೊಪ್ಪಳ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯ ಕಂಡ ಅತ್ಯಂತ ಸಭ್ಯ, ಪ್ರಮಾಣಿಕ ಅಪರೂಪದ ರಾಜಕಾರಣಿಗಳಲ್ಲಿ ಮಾಜಿಸಚಿವ ಇಕ್ಬಾಲ್ ಅನ್ಸಾರಿ ಒಬ್ಬರಾಗಿದ್ದು, ಅವರ ಮೇಲೆ ವಿನಃ ಕಾರಣ ವಕ್ಫ್ ಆಸ್ತಿ ಕಬಳಿಕೆ ಸರಿಯಲ್ಲ ಎಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಇಲಿಯಾಸ್ ಖಾದ್ರಿ ಹೇಳಿದ್ದಾರೆ.ನಗರದಲ್ಲಿ ವಕ್ಫ್ ಆಸ್ತಿಯನ್ನು ಮಾಜಿಸಚಿವ ಇಕ್ಬಾಲ್ ಅನ್ಸಾರಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆಲಂ ಪಾಷಾ ಎಂಬ ವ್ಯಕ್ತಿ, ಆರೋಪಿಸಿದ ಹಿನ್ನೆಲೆ ಈ ಈ ಬಗ್ಗೆ ಮಾತನಾಡಿದ ಇಲಿಯಾಸ್ ಖಾದ್ರಿ, ಅನ್ಸಾರಿ ಅವರ ವ್ಯಕ್ತಿ ಏನು ಎಂಬುವುದು ಇಡೀ ಕೊಪ್ಪಳ ಜಿಲ್ಲೆಯ ಜನರಿಗೆ ಗೊತ್ತಿದೆ.ಈ ಹಿಂದೆ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಇಕ್ಬಾಲ್ ಅನ್ಸಾರಿ ಅವರಿಗೆ ಸಕರ್ಾರದ ಶಿಫಾರಸ್ಸಿನ ಹಿನ್ನೆಲೆ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಮಂಜೂರಾಗಿತ್ತು. ಆದರೆ ತಮ್ಮ ಸ್ವಂತ ನಿವೇಶನ ಮಾರಿ ಮಸೀದಿ ನಿಮರ್ಾಣಕ್ಕೆ ಹಣ ನೀಡುವ ಮೂಲಕ ತಮ್ಮ ಉದಾರತೆ ತೋರಿದ್ದಾರೆ.ಇಂತಹ ವ್ಯಕ್ತಿ ಸರಕಾರದ ಮತ್ತು ಸಮುದಾಯದ ಆಸ್ತಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆಲಂ ಪಾಷಾ ಹೇಳುತ್ತಿರುವುದು ಸತ್ಯಕ್ಕೆ ದೂರವಾದ ಮಾತು. ಇದಕ್ಕೆ ಸಂಬಂಧಿಸಿದಂತೆ ಏನಾದರೂ ದಾಖಲೆ ಇದ್ದರೆ ಆಲಂಪಾಷಾ ಮಾಧ್ಯಮದ ಮುಂದೆ ಬರಲಿ, ದಾಖಲೆ ಬಿಡುಗಡೆ ಮಾಡಲಿ.ಅದು ಬಿಟ್ಟು ಕೇವಲ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇಕ್ಬಾಲ್ ಅನ್ಸಾರಿ ದೂರದೃಷ್ಟಿ ಇರುವ ನಾಯಕ. ತಮ್ಮ ಅಧಿಕಾರದ ಅವಧಿಯಲ್ಲಿ ಇಡೀ ರಾಜ್ಯದ ಜನ ಗಂಗಾವತಿಯತ್ತ ತಿರುಗಿ ನೋಡುವಂತೆ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ.

ಈಗಲೂ ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಸಕರ್ಾರದ ಬಹುತೇಕ ಸಚಿವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅನ್ಸಾರಿ, ಈಗ ಅಥವಾ ತಮ್ಮ ಅಧಿಕಾರದ ಅವಧಿಯಲ್ಲಾಗಲಿ ಯಾವುದೇ ಅಕ್ರಮ ಮಾಡಿಲ್ಲ. ಭ್ರಷ್ಟಾಚಾರ, ವಗರ್ಾವಣೆ ದಂಧೆ, ಅಕ್ರಮ ವ್ಯವಹಾರದಿಂದ ಯಾವಾಗಲೂ ಅನ್ಸಾರಿ ಬಹುದೂರ ಸರಿದು ನಿಲ್ಲುವ ವ್ಯಕ್ತಿ.ಜನಾನುರಾಗಿ ನಾಯಕ. ಸದಾ ಜನರ ಹಿತ ಬಯಿಸಿದ ವ್ಯಕ್ತಿ. ಇಂತಹ ಮೇರು ವ್ಯಕ್ತಿತ್ವ ಹೊಂದಿರುವ ಅನ್ಸಾರಿಯಂತ ನಾಯಕನ ಬಗ್ಗೆ ಅಲ್ಲದ ಹೇಳಿಕೆ ನೀಡುತ್ತಿರುವ ಅಲಂಪಾಷ, ತಮ್ಮ ಆರೋಪಕ್ಕೆ ದಾಖಲೆ ನೀಡಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ ಎಂದು ಇಲಿಯಾಸ್ ಖಾದ್ರಿ ಗುಡುಗಿದ್ದಾರೆ.

ಗಂಗಾವತಿಯ ಜಾಮೀಯಾ ಮಸೀದಿಗೆ ಸಂಬಂಧಿಸಿದ ಆಸ್ತಿಯನ್ನು ಅನ್ಸಾರಿ ತಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಆಲಂಪಾಷಾ ಆರೋಪಿಸಿದ್ದಾರೆ. ಆದರೆ ಎಲ್ಲಾ ದಾಖಲೆಗಳು ಮಸೀದಿಯ ಹೆಸರಲ್ಲೆ ಇವೆ. ಈ ಬಗ್ಗೆ ಯಾವುದೇ ವ್ಯಕ್ತಿ, ಯಾವುದೇ ಕ್ಷಣಕ್ಕೆ ಬಂದು ಮಸೀದಿಯ ಆಡಳಿತ ಮಂಡಳಿಯನ್ನು ಸಂಪಕರ್ಿಸಿ ಮಾಹಿತಿ ಪಡೆಯಬಹುದು ಎಂದು ಖಾದ್ರಿ ತಿಳಿಸಿದ್ದಾರೆ.

