ಪತ್ರಕರ್ತರು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಸರಕಾರದ ಕಣ್ಣು ತೆರೆಸಬೇಕು:ಕೆ.ನಿಂಗಜ್ಜ *ಕರ್ನಾಟಕ ಮಾಧ್ಯಮ ಅಕಾಡೆಮಿಯ ವಿವಿಧ ದತ್ತಿ ಪಡೆದ ಪತ್ರಕರ್ತ ಎಸ್.ಎಂ.ಪಟೇಲ್, ವೈ.ನಾಗರಾಜ ಅವರಿಗೆ ಸನ್ಮಾನ..

ಪತ್ರಕರ್ತರು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಸರಕಾರದ ಕಣ್ಣು ತೆರೆಸಬೇಕು:ಕೆ.ನಿಂಗಜ್ಜ *ಕರ್ನಾಟಕ ಮಾಧ್ಯಮ ಅಕಾಡೆಮಿಯ ವಿವಿಧ ದತ್ತಿ ಪಡೆದ ಪತ್ರಕರ್ತ ಎಸ್.ಎಂ.ಪಟೇಲ್, ವೈ.ನಾಗರಾಜ ಅವರಿಗೆ ಸನ್ಮಾನ..

ಗಂಗಾವತಿ: ಪ್ರಜಾಪ್ರಭುತ್ವದ ನಾಲ್ಕನೇಯ ಅಂಗವೆಂದು ಜನರು ನಂಬಿರುವ ಪತ್ರಿಕೋದ್ಯಮ ಹಾಗೂ ಪತ್ರಕರ್ತರು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ವರದಿ, ಲೇಖನ ಬರೆಯುವ ಮೂಲಕ ಜನರಿಗೆ ಸ್ಪಂದಿಸಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ ಹಾಗೂ ಹಿರಿಯ ಪತ್ರಕರ್ತರ ಕೆ.ನಿಂಗಜ್ಜ ಹೇಳಿದರು. ಅವರು ಕಿಷ್ಕಿಂಧವಾಣಿ ದಿನಪತ್ರಿಕೆಯ ಕಾರ್ಯಾಲಯದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಆಂದೋಲ ಪತ್ರಿಕೆ ಪ್ರಶಸ್ತಿಗೆ ಆಯ್ಕೆಯಾದ ಸುವರ್ಣಗಿರಿ ದಿನ ಪತ್ರಿಕೆ ಸಂಪಾದಕ ಎಸ್.ಪಟೇಲ್ ಹಾಗೂ ಬಹಿಷ್ಕಾರ ಕುರಿತು ವಿಶೇಷ ವರದಿ ಮಾಡಿದ ಪತ್ರಕರ್ತ ವೈ. ನಾಗರಾಜ ಅವರನ್ನು ಗಂಗಾವತಿ ಗೆಳೆಯರ ಬಳಗದ ಪರವಾಗಿ ಸನ್ಮಾನಿಸಿ ಮಾತನಾಡಿದರು. ಗಂಗಾವತಿಯಲ್ಲಿ 48 ವರ್ಷಗಳ ಹಿಂದೆ ದಿವಂಗತ ಶೇಖ್ ದೌಲತ್ ಅವರು ಸುವರ್ಣಗಿರಿ ಮಾಸಿಕ ಪತ್ರಿಕೆ ಆರಂಭಿಸಿ ಹಲವು ವರದಿಗಳ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ನಂತರ ಅವರ ಸಹೋದರ ಶೇಕ್ ಮಹೆಬೂಬ ಪಟೇಲ್ ಅವರು ಸುವರ್ಣಗಿರಿ ಪತ್ರಿಕೆಯನ್ನು ಕಳೆದ 25 ವರ್ಷಗಳಿಂದ ದಿನ ಪತ್ರಿಕೆಯನ್ನಾಗಿ ಬದಲಾಯಿಸಿ ಸಮಸ್ಯೆಗಳ ಮೇಲೆ ಪರಿಣಾಮಕಾರಿ ವರದಿ ಮಾಡುವ ಮೂಲಕ ಗಮನ ಸೆಳೆದಿದ್ದು ಪ್ರಸ್ತುತ ಕರ್ನಾಟಕ ಮಾಧ್ಯಮ ಅಕಾಡೆಮಿಯ ಆಂದೋಲ ಪತ್ರಿಕೆಯ ದತ್ತಿ ಪ್ರಶಸ್ತಿ ಮೂಲಕ ರಾಜ್ಯದಲ್ಲಿ ಸುವರ್ಣಗಿರಿ ಪತ್ರಿಕೆ ಹೆಸರಾಗಿದೆ. ಚಿಲಕಮುಕ್ಕಿ ಗ್ರಾಮದಲ್ಲಿ ಪ್ರೇಮ ವಿವಾಹದ ಸಂಬಂಧ 8 ವರ್ಷ ಬಹಿಷ್ಕಾರಕ್ಕೆ ಒಳಗಾಗಿದ್ದ ಕುಟುಂಬಗಳ ಕುರಿತು ಪತ್ರಕರ್ತ ವೈ.ನಾಗರಾಜ ಅವರು ವಿಸೃತ ವರದಿ ಮಾಡಿ ಸರಕಾರದ ಗಮನ ಸೆಳೆಯುವ ಜತೆಗೆ ಸಮಸ್ಯೆ ಪರಿಹಾರಕ್ಕೆ ಕೆಲಸ ಮಾಡಿದ್ದನ್ನು ಪರಿಗಣಿಸಿ ಪ್ರಜಾಸಂದೇಶ ದತ್ತಿ ಪ್ರಶಸ್ತಿ ಕೊಡಲಾಗಿದೆ. ಕುಷ್ಟಗಿಯ ಹಿರಿಯ ಪತ್ರಕರ್ತ ಮಂಜುನಾಥ ಮಹಾಲಿಂಗಪೂರ ಇವರು ಕಳೆದ 32 ವರ್ಷಗಳಿಂದ ಪತ್ರಕರ್ತರಾಗಿ ಕೃಷಿ, ಪರಿಸರ ಸೇರಿ ಸಮಗ್ರ ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಸರಕಾರ ಗಮನ ಸೆಳೆಯುವ ವರದಿಯ ಹಿನ್ನೆಲೆಯಲ್ಲಿ ಜೀವಮಾನದ ಸಾಧನೆಯ ವಾರ್ಷಿಕ ಮಾಧ್ಯಮ ಅಕಾಆಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.  ಇಂತಹ ನೂರಾರು ಪತ್ರಕರ್ತರು ಕಲ್ಯಾಣ ಮತ್ತು ಉತ್ತರ ಕರ್ನಾಟಕದಲ್ಲಿದ್ದು ಮುಂಬರುವ ವರ್ಷಗಳಲ್ಲಿ ಅವರನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ ಎಂದರು. ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಎಸ್.ಎಂ.ಪಟೇಲ್, ವೈ.ನಾಗರಾಜ ಮಾತನಾಡಿ, ಪ್ರಶಸ್ತಿಯಿಂದ ಇನ್ನಷ್ಟು ಸಾಮಾಜಿಕ ಜವಾಬ್ದಾರಿ ಹೆಚ್ಚಾಗಿದೆ. ಸರಕಾರ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರಿಗೆ ಅಭಿನಂದನೆಗಳು ಎಂದರು. ಹಿರಿಯ ಪತ್ರಕರ್ತ ವೈ.ಸುದರ್ಶನ್, ದಶರಥ,ತಾಯಪ್ಪ ಮರ್ಚೆಡ್, ಗಂಗಾವತಿ ಗೆಳೆಯರ ಬಳಗದ ಜಿ.ಅಶೋಕಗೌಡ, ಪರಶುರಾಮ ಇಟಗಿ, ಕುಮಾರಪ್ಪ ಸಿಂಗನಾಳ, ನೀಲಕಂಠಪ್ಪ ಮೆಟ್ರಿ ಸೇರಿ ಅನೇಕರಿದ್ದರು. 

Leave a Reply

Your email address will not be published. Required fields are marked *