ಪ್ರಸಕ್ತ ಸಾಲಿನ ಕಾಮಗಾರಿಗಳು ಅದೇ ವರ್ಷದಲ್ಲಿ ಪೂರ್ಣಗೊಳ್ಳಲಿವಡ್ಡರಹಟ್ಟಿ ಪಿಡಿಓ ಸುರೇಶ ಚಲವಾದಿ ಸೂಚನೆ…

ಪ್ರಸಕ್ತ ಸಾಲಿನ ಕಾಮಗಾರಿಗಳು ಅದೇ ವರ್ಷದಲ್ಲಿ ಪೂರ್ಣಗೊಳ್ಳಲಿವಡ್ಡರಹಟ್ಟಿ ಪಿಡಿಓ ಸುರೇಶ ಚಲವಾದಿ ಸೂಚನೆ…

ವಡ್ಡರಹಟ್ಟಿ ಗ್ರಾಪಂನಲ್ಲಿಸಾಮಾಜಿಕ ಪರಿಶೋಧನಾ ಗ್ರಾಮಸಭೆ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಪಂ ಆವರಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಹಾಗೂ ಗ್ರಾಪಂ 15 ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮಸಭೆ ಗುರುವಾರ ಜರುಗಿತು. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಅವರು ಮಾತನಾಡಿ, 2024-25 ನೇ ಸಾಲಿನಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳು ಹಾಗೂ 15ನೇ ಹಣಕಾಸು ಯೋಜನೆಯಡಿ ಹಲವಾರು ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ನರೇಗಾ ಯೋಜನೆಯಲ್ಲಿ 2024-25 ನೇ ಸಾಲಿನಲ್ಲಿ 293 ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದ್ದು, ಹಾಗೂ ಸದರಿ ಕಾಮಗಾರಿಗಳಿಗೆ ಕೂಲಿ ಮೊತ್ತವನ್ನು ಪಾವತಿಸಲಾಗಿದೆ. ವಡ್ಡರಹಟ್ಟಿ ವ್ಯಾಪ್ತಿಯಲ್ಲಿ ಸೃಜನೆಗಗೊಂಡ ವೈಯಕ್ತಿಕ ಕಾಮಗಾರಿಗಳು, ಶಾಲಾ ಕಾಮಗಾರಿಗಳು, ಸಸಿ ರಸ್ತೆ, ಚರಂಡಿ ಕಾಮಗಾರಿಗಳ ಆಸ್ತಿಗಳನ್ನು ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ಆಯಾ ವರ್ಷದ ಕ್ರಿಯಾಯೋಜನೆಯ ಕಾಮಗಾರಿಗಳನ್ನು ಅದೇ ವರ್ಷ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.ಸಾರ್ವಜನಿಕರು ಇನ್ನೂ ಹೆಚ್ಚಾಗಿ ವೈಯಕ್ತಿಕ ಕಾಮಗಾರಿಗಳನ್ನು ನೀಡಬೇಕಾಗಿ ಕೋರಿದರು.ಸಾಮಾಜಿಕ ಸಂಯೋಜಕರಾದ ವೀರನಗೌಡ ಪಾಟೀಲ್ ಅವರು ಮಾತನಾಡಿ, 2024-25 ನೇ ಸಾಲಿನಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಹಣ ಪಾವತಿ ಬಗ್ಗೆ ಗ್ರಾಮಸಭೆಯಲ್ಲಿ ಮಂಡಿಸಿದರು.ಗ್ರಾಮಸ್ಥರ ಸಮ್ಮುಖದಲ್ಲಿ 2024-25 ನೇ ಸಾಲಿನಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳು ಹಾಗು 15ನೇ ಹಣಕಾಸು ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿಗಳ ಬಗ್ಗೆ ಚರ್ಚಿಸಲಾಯಿತು.ಈ ವೇಳೆ, ಗ್ರಾಪಂ ಉಪಾಧ್ಯಕ್ಷರಾದ ಟಿ.ಗೌಸ್ ಸಾಬ್ , ಸದಸ್ಯರಾದ ಹೊನ್ನುರಬಿ ಮದರಸಾಬ್, ಪೀರಮಹಮ್ಮದ್, ಸಂಗಪ್ಪ ಆರಾಳ, ಶಾಂತಮ್ಮ ಅಯ್ಯಪ್ಪ, ಭರತ್ ಕುಮಾರ್, ಹನುಮಂತಿ ಭೀಮಣ್ಣ, ಲಕ್ಷ್ಮವ್ವ ಹನುಮಂತಪ್ಪ, ಹುಲಿಗೆಮ್ಮವೀರಭದ್ರಪ್ಪ, ಕಾರ್ಯದರ್ಶಿಗಳಾದ ಈಶಪ್ಪ, ಟಿಎಇ ಉದಯಕುಮಾರ್, ವಿಜಯಕುಮಾರ್ ಸಿರಿಗೇರಿ, ನರೇಗಾ ಗ್ರಾಪಂ ಸಿಬ್ಬಂದಿಗಳು, ಕಾಯಕಬಂಧುಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಇದ್ದರು.

Leave a Reply

Your email address will not be published. Required fields are marked *