ಶಾಸಕ ರೆಡ್ಡಿ ನಿವಾಸಕ್ಕೆ ಮಹಿಳೆಯರ ನಿಯೋಗಶೂಟೌಟ್: ಮುಂದಿನ ಪೀಳಿಗೆಗೆ ತಪ್ಪು ಸಂದೇಶ’ ಆಗಲೂರು ಕರೆ.

ಗಂಗಾವತಿ ಡಿ.7: ಬಳ್ಳಾರಿಯಶೂಟೌಟ್ ಪ್ರಕರಣದಲ್ಲಿ ಯಾರೇ ತಪ್ಪಪಿತಸ್ಥರಿದ್ದರೂ ರಾಜ್ಯ ಸರ್ಕಾರ ಈ ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಯ ಮಹಿಳಾ ನಾಯಕಿ ಭಾರತಿ ಆಗಲೂರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಗಂಗಾವತಿ ಜನಪ್ರಿಯ ಶಾಸಕ ಗಾಲಿ ಜನಾ ರ್ದನರೆಡ್ಡಿ ಅವರ ಬಳ್ಳಾರಿ ನಿವಾಸದ ಮುಂದೆ ಜ.1ರಂದು ನಡೆದ ಶೂಟೌಟ್ ಪ್ರಕರಣದಹಿನ್ನೆಲೆ ಬುಧವಾರ ಗಂಗಾ ವತಿಯಿಂದ ತೆರಳಿದ್ದ ಮಹಿಳಾ ನಿಯೋಗವು, ಶಾಸಕರನ್ನು ಭೇಟಿಯಾಗಿ ಮಾನಸಿಕ ಸ್ಥೈರ್ಯ ತುಂಬಿದರು. ಬಳಿಕ ಮಾತನಾಡಿ ಭಾರತಿ ಎ. ಇಂತಹ ಶೂಟೌಟ್ ಪ್ರಕರಣ ಗಳನ್ನು ಸರ್ಕಾರ ಗಂಭಿರ ಪರಿಗಣಿಸಿ ಹತ್ತಿಕ್ಕದೇ ಹೋದಲ್ಲಿ ಮುಂದಿನ ಯುವ ಪೀಳಿಗೆಗೆ ಸ್ವತಃ ನಾವೇ ತಪ್ಪು ಸಂದೇಶ ರವಾನಿಸಿದಂತಾ ಗುತ್ತದೆ. ಅಲ್ಲದೇ ಯುವ ಸಮುದಾಯ ದಾರಿ ತಪ್ಪಲು ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟು ಹೋಗುತ್ತದೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಜನರಿಂದ ಆಯ್ಕೆಯಾಗಿ ಹೋದ ಪ್ರತಿನಿಧಿಗಳೇ ಇಂತಹ ದಾಂಧಲೆಯಲ್ಲಿ ಭಾಗಿಯಾದರೆ ಜನರ ರಕ್ಷಣೆ ಹೇಗೆಸಾಧ್ಯ ಎಂದು ಪ್ರಶ್ನಿಸಿದ ಭಾರತಿ ಎ. ಈ ಘಟನೆಯ ಆರೋಪಿ ಶಾಸಕ ಭರತ್ ರೆಡ್ಡಿಯನ್ನು ಬಂಧಿಸಿ, ಶಾಸಕತ್ವ ರದ್ದುಗೊಳಿಸುವಂತೆ ಒತ್ತಾಯಿಸಿದದರು. ಈ ಸಂದರ್ಭದಲ್ಲಿ ಗಂಗಾವತಿ ಯಿಂದ ತೆರಳಿದ ನಿ ಯೋಗದಲ್ಲಿ ಲಲಿತಾ ಬೀಮೇಶ ಛಲವಾದಿ, ಮಾಲಾ ನಾಯ್ಕ್, ಶ್ರೀರಾಮ ಸಹೋದರಿ ಭಾಗ್ಯಮ್ಮ ಸೇರಿದಂತೆ ಇತರರಿದ್ದರು.
