ಕೂಡ್ಲಿಗಿ : ಜ 15 ರ ” 2026 ಚಿನ್ನ ಹಗರಿ ಉತ್ಸವ ” -ಯಶಸ್ವಿಗಳಿಸುವಂತೆ ಮ್ಯಾಸ ಬ್ಯಾಡ ನಾಯಕರ ಕರೆ

ಕೂಡ್ಲಿಗಿ : ಜ 15 ರ ” 2026 ಚಿನ್ನ ಹಗರಿ ಉತ್ಸವ ” -ಯಶಸ್ವಿಗಳಿಸುವಂತೆ ಮ್ಯಾಸ ಬ್ಯಾಡ ನಾಯಕರ ಕರೆ

ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ , ಮ್ಯಾಸ ಬೇಡ ನಾಯಕ ಸಮುದಾಯದ ಮುಖಂಡರ ನೇತೃತ್ವದಲ್ಲಿ. ಚಿನ್ನಹಗರಿ ಊತ್ಸವ 2026ರ ಪೂರ್ವ ಭಾವಿ ಸಭೆ , ಹಾಗೂ ಚಿನ್ನ ಹಗರಿ ಉತ್ಸವದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕರಾದ , ತಿಪ್ಪೇಸ್ವಾಮಿ ರವರು ಮಾತನಾಡಿದರು , ಮ್ಯಾಸ ಬೇಡ (ಮ್ಯಾಸ ನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ (ರಿ)ವತಿಯಿಂದ. 2026ರ ಜನವರಿ 15 ಗುರುವಾರದಂದು. ಬೆಳಗ್ಗೆ 8:00 ಗಂಟೆಯಿಂದ , ಸಾಯಂಕಾಲ 6:00 ಗಂಟೆಯವರೆಗೆ ಉತ್ಸವ ಕಾರ್ಯಕ್ರಮ ಜರುಗಲಿದೆ ಎಂದರು. ವಿಜಯನಗರ ಜಿಲ್ಲೆ ಕೂಡ್ಲಿ ಗಿ ತಾಲೂಕು , ಪೂಜಾರಹಳ್ಳಿ ಪಂಚಾಯ್ತಿವ್ಯಾಪ್ತಿ ಯ ತಿಪ್ಪೇಹಳ್ಳಿ (ಹೊನ್ನಿನ ಹಳ್ಳಿ) ಹತ್ತಿರ ಚಿನ್ನಹಗರಿ ನದಿ ಹರಿಯುತ್ತಿದ್ದು.ಪ್ರತಿವರ್ಷದಂತೆ ಈ ವರ್ಷವೂ ಕೂಡ , ಮ್ಯಾಸನಾಯಕ ಬುಡುಕಟ್ಟು ಜನರ ಸಾಂಸ್ಕೃತಿಕ ಸಂಭ್ರಮದ ಭಾಗವಾಗಿ ಉತ್ಸವ ಜರುಗಲಿದ್ದು.“ಆದಿವಾಸಿ ಮ್ಯಾ ಸ ನಾಯಕರ ಚಿನ್ನ ಹಗರಿ ಉತ್ಸವ-2026” ವನ್ನು ಹಮ್ಲಿಕೊಳ್ಳಲಾಗಿದ್ದು. ಸದರಿ ಕಾರ್ಯಕ್ರಮನ್ನು ಮ್ಯಾಸ ಬೇಡ (ಮ್ಯಾ ಸನಾಯಕ) ಬುಡಕಟ್ಟು ಸಂಸ್ಕೃತಿಸಂರಕ್ಷಣಾ ಸಮ್ಮತಿ(ರಿ) , ಮತ್ತು ಚಿನ್ನ ಹಗರಿ ಪ್ರಕಾಶನ ಹಾಗೂ ಶ್ರೀ ಗಾದ್ರಿಪಾಲನಾಯಕದೇವಸ್ಥಾನ ಅಭಿವೃದ್ಧಿ ಸಮ್ಮತಿ(ರಿ). ಸಹಯೋಗದಲ್ಲಿ ಆಚರಿಸಲಾಗಿತ್ತದೆ ಎಂದರು. ಕೂಡ್ಲಿಗಿ ಪಟ್ಟಣ ಸೆರಿದಂತೆ ತಾಲೂಕು ನೆರೆ ಹೊರೆ ತಾಲೂಕುಗಳ , ವಿಜಯನಗರ ಜಿಲ್ಲೆ ಸೇರಿದಂತೆ ನಾಡಿನ ಎಲ್ಲಾ ಜಿಲ್ಲೆಗಳ ಸಮಸ್ತ ಮ್ಯಾಸ ಬೇಡ ಸಮುದಾಯವರು. 2026ರ ಜನವರಿ 15ರಂದು ಜರುಗಲಿರುವ , ಚಿನ್ನ ಹಗರಿ ಉತ್ಸವದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಅವರು ಕೋರಿದರು. ಮುಖಂಡರಾದ ಪಾಪ್ಯಾ, ಪ್ರಸಾದ್ , ಸಿ ಎಸ್ ಜೋಗೇಶ , ರಾಜಣ್ಣ , ಲಕ್ಷ್ಮೀಸಾಗರ, ಡಾ ॥ ಅನ್ನಪೂರ್ಣಮ್ಮ, ದೇವರ ಎತ್ತುಗಳ ಪೂಜಾರಿಗಳು ಕಿಲಾರಿಗಳು ,ಸಿ.ಬಿ, ನಾಗವೇಣಿ, ಜಿ. ರಾಧಾ, ನಾಗವೇಣಿ ಮತ್ತಿಕ್ಕಟ್ಟೆ ನಾಗೇಶ, ಕಾರ್ತಿಕಟ್ಟೆ ಡಾ॥ ಸಿದ್ದೇಶ, ವೀರಣ್ಣ, ಬನ್ನಿ ಭರಮಪ್ಪ, ಮರಬನಹಳ್ಳಿ ಕರಿಯಪ್ಪ , ಸರ್ವೇರ್ ರಾಘವೇಂದ್ರ,ರಾಘವೇಂದ್ರ , ಹಾಗೂ ಬೋರಯ್ಯ ಬಿ.ಎಾಂ.ಹನ್ನಮಂತಪ್ಪ, ಮೂಗಪ್ಪ , ಬಸವರಾಜ , ರವಿಕುಮ್ಯರ, ಓಬಳೇಶ, ಕುಬೇರ, ಬಸವರಾಜ , ನಗರಾಜಪ್ಪ , ಚಂದರಪ್ಪ ಎ.ಹೆಚ್. ಪಂಪಾಪತಿ, ರವಿಕುಮಾರ ಸೇರಿದಂತೆ ಇತರರು ಇದ್ದರು.

✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428..

Leave a Reply

Your email address will not be published. Required fields are marked *