ನನ್ನ ದೇಹ ನನ್ನ ಹಕ್ಕು ಮತ್ತು ‘ಪೋಕ್ಸೋ ಕಾಯ್ದೆ’ ಜಾಗೃತಿ ಕಾರ್ಯಕ್ರಮ ವಿದ್ಯಾರ್ಥಿಗಳು ಕಾನೂನಿನ ಬಗ್ಗೆ – ತಿಳಿದುಕೊಳ್ಳೋಣ: ಪಿಐ ಪ್ರಕಾಶ ಮಾಳಿ.

ಗಂಗಾವತಿ : 26 ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಹೆಚ್ಚುತ್ತಿರುವ ಲೈಂಗಿಕ ಕಿರುಕುಳ, ದೌರ್ಜನ್ಯಗಳನ್ನು ತಡೆಗಟ್ಟಲು ಮತ್ತು ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮೂಡಿಸಲು ಸರಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ನಗರ ಪೊಲೀಸ್ ಠಾಣೆ ಪಿಐ ಪ್ರಕಾಶ ಮಾಳಿ ಹೇಳಿದರು ನಗರದ ಸಂಕಲ್ಪ ಕಾಲೇಜಿನಲ್ಲಿ ಹಾಗೂ ಪೊಲೀಸ್ ಇಲಾಖೆಯ ಜಂಟಿ ಆಶ್ರಯದಲ್ಲಿ ನಡೆದ ‘ನನ್ನ ದೇಹ ನನ್ನ ಹಕ್ಕು’ ಹಾಗೂ ‘ಪೋಕ್ಸೋ ಕಾಯ್ದೆ’ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ,ಮಕ್ಕಳ ರಕ್ಷಣೆಗಾಗಿ ಸರಕಾರವು ಅತ್ಯಂತ ಕಠಿಣವಾದ ಪೋಕ್ಸೋ ಕಾಯ್ದೆಯನ್ನು ಜಾರಿಗೆ ತಂದಿದೆ ಅಪರಾಧ ತಡೆ ಮಾಸಾಚರಣೆ ವಿದ್ಯಾರ್ಥಿಗಳು ತಮ್ಮ ಮೇಲಾಗುವ ಕಿರುಕುಳದ ವಿರುದ್ಧ ಧ್ವನಿ ಎತ್ತಬೇಕು ಮತ್ತು ಅಪರಿಚಿತರ ಬಗ್ಗೆ ಎಚ್ಚರದಿಂದಿರಬೇಕು ಎಂದು ಕಿವಿಮಾತು ಹೇಳಿದರು.ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯು ನನ್ನ ದೇಹ ನನ್ನ ಹಕ್ಕು ಎಂಬ ಅರಿವನ್ನು ಬಳಸಿಕೊಳ್ಳಬೇಕು ಮೊಬೈಲ್ ಫೋನ್ ಗಳು ಅತಿಯಾದ ಮತ್ತು ಅಸಮರ್ಪಕ ಬೆಳಕಿನಿಂದ ಅನೇಕ ದುಷ್ಪರಿಣಾಮಗಳು ಎದುರಾಗುತ್ತಿದ್ದು ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯತ್ತ ಗಮನಹರಿಸಬೇಕು ಎಂದು ಜಾಗೃತಿ ಮೂಡಿಸಿದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಭೋದಕ ಸಿಬ್ಬಂದಿಗಳು ಹಾಗೂ ಸಂಕಲ್ಪ ಕಾಲೇಜು ಸಿಬ್ಬಂದಿಗಳು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

