ಕ್ರಿಸ್ ಮಸ್ ಅಂಗವಾಗಿ ಕಳೆದ 23 ವರ್ಷಗಳಿಂದ ಬಟ್ಟೆ ಮತ್ತು ಬೆಡ್ ಸಿಟ್ ಹಣ್ಣು ಸೇವೆ: ಸಂಸ್ಥೆಯ ಮುಖ್ಯಸ್ಥ ಜೀವಪ್ರಕಾಶ ವಲ್ಲಿ ..

ಗಂಗಾವತಿ: ಕ್ರಿಸ್ ಮಸ್ ಅಂಗವಾಗಿ ಬೆಥಸ್ಟಾ ಎಟರ್ನಲ್ ಚಾರಿಟೇಬಲ್ ಟ್ರಸ್ಟ್ ವಿದ್ಯಾನಗರದ ಮುಖ್ಯ ಕಚೇರಿಯಲ್ಲಿ ಸುಮಾರು 300 ಜನರಿಗಿಂತ ಅಧಿಕ ವಯೋವೃದ್ಧರಿಗೆ ಮತ್ತು ಅಂಗವಿಕಲರಿಗೆ ವಿಧವೆಯರಿಗೆ ಸೇರಿದಂತೆ ಇನ್ನೂ ಅನೇಕ ಜನರಿಗೆ ಬೆಡ್ ಶೀಟ್ ಸೀರೆ ಬಟ್ಟೆ ಯಂತಹ ಉಪಯೋಗಿಸುವ ವಸ್ತುಗಳನ್ನು ವಿತರಣೆ ಮಾಡಲಾಯಿತು.

ವಿತರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೊಳ್ಳಾ ಈಶ್ವರ ಪ್ರಸಾದ ಹೈಕೋರ್ಟ್ ವಕೀಲರು ಹೈದರಾಬಾದ ರವರು ಭಾಗವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ವೀರಯ್ಯಸ್ವಾಮಿ ಹೆಡ್ ಮಾಸ್ಟರ್ ಪೊದುಟೂರು (ಆಂಧ್ರ ಪ್ರದೇಶ). ಭಾಗವಹಿಸಿದ್ದರು. ಅತಿಥಿಯಾಗಿ ತೊಟ್ಟ ಆನಂದ ಹೊಸಪೇಟೆ. ಆರ್ ಡಿ ರಾಜು ಹೊಸಪೇಟೆ ಭಾಗವಹಿಸಿದ್ದರು. ಸಾನಿಧ್ಯವನ್ನು ಟ್ರಸ್ಟಿನ ಮುಖ್ಯಸ್ಥರಾದ ಜೀವಪ್ರಕಾಶ ವಲ್ಲಿ ಮತ್ತು ವಿ ಜ್ಯೋತಿ. ಸತೀಶ. ವಿ.ಲೀಡಿಯಾ ವಹಿಸಿದ್ದರು. ಟ್ರಸ್ಟಿನ ಮುಖ್ಯಸ್ಥ ಜೀವಪ್ರಕಾಶ ವಲ್ಲಿ ಮಾತನಾಡಿ ಕಳೆದ 23 ವರ್ಷಗಳಿಂದ ಬಡವರಿಗೆ ವಯೋವೃದ್ದರಿಗೆ ವಿಕಲಚೇತನರಿಗೆ ವಿಧವೆಯರಿಗೆ ಬಟ್ಟೆಗಳನ್ನು ಮತ್ತು ಬೆಡ್ ಶೀಟ್ ಗಳನ್ನು ವಿತರಣೆ ಮಾಡುತ್ತಾ ಬಂದಿದ್ದೇವೆ. ಅದೇ ರೀತಿಯಾಗಿ ಈ ವರ್ಷವೂ ಸಹ ಕ್ರಿಸ್ ಮಸ್ ಹಬ್ಬದ ಅಂಗವಾಗಿ ವಿದ್ಯಾನಗರದಲ್ಲಿ ಮತ್ತು ದಾಸನಾಳದಲ್ಲಿರುವ ಅಂದ ಮಕ್ಕಳ ಪಾಠಶಾಲೆಗೆ ತೆರಳಿ ಹಣ್ಣು ಮತ್ತು ಹಂಪಲಗಳನ್ನು ಹಂಚಿ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು ಕೋರಿ. ನಂತರ ಸಿಂಧನೂರು ತಾಲೂಕಿನ ಸತ್ಯವತಿ ಕ್ಯಾಂಪ್ ಗ್ರಾಮಕ್ಕೆ ತೆರಳಿ ಅಲ್ಲಿರುವಂತ ಕಡು ಬಡತನದಲ್ಲಿರುವ ವಯೋವೃದ್ದರಿಗೆ ವಿಕಲಚೇತನರಿಗೆ ವಿಧವೆಯರಿಗೆ ಸುಮಾರು 250 ಜನರಿಗೆ ಬಟ್ಟೆ ಮತ್ತು ಬೆಡ್ ಶೀಟ್ ಇತರ ಸಾಮಗ್ರಿಗಳನ್ನು ವಿತರಣೆ ಮಾಡಿ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು ಕೋರಿ ನಂತರ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಿ ಆ ಭಗವಂತ ಎಲ್ಲರಿಗೂ ಆರೋಗ್ಯ ಆಯಸ್ಸು ಕರುಣಿಸೆಲೆಂದು ಪ್ರಾರ್ಥಿಸಿ ಮಹಾಪ್ರಸಾದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದವು. ನಮ್ಮ ಸಂಸ್ಥೆಗೆ ಸಹಕರಿಸಿದ ಎಲ್ಲಾ ಗಣ್ಯರಿಗೂ ಮತ್ತು ನಿರಂತರ ಸೇವೆಯನ್ನು ಕಲ್ಪಿಸಿ ಮುಂದುವರಿಸಲು ಅನುಕೂಲ ಮಾಡಿಕೊಟ್ಟಂತ ಸ್ನೇಹಿತರಿಗೂ ಬಂಧುಗಳಿಗೆ ಭಗವಂತ ಎಲ್ಲರಿಗೂ ಆಶೀರ್ವದಿಸಲಿ ಎಂದು ಮಾಧ್ಯಮದವರೊಂದಿಗೆ ಮಾತನಾಡಿದರು .ಈ ಸಂದರ್ಭದಲ್ಲಿ ಗುಂಟೂರು ವಂದನಂ. ಗೆದುಲೂರು ಬಾಲಯ್ಯ ಸ್ವಾಮಿ. ಪೋದುಟೂರು ಜಗನ್ ಮೋಹನ್.ಗುಂಟೂರು ರವಿ. ಮಂಜುನಾಥ ವಿದ್ಯಾನಗರ ಸೇರಿದಂತೆ ವಿದ್ಯಾನಗರದ ಮತ್ತು ದಾಸನಾಳ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು ಸೇರಿದಂತೆ ಹಿರಿಯರು ಮುಖಂಡರು ಭಾಗವಹಿಸಿದ್ದರು.

