ಮಹಾನ್ ಕಿಡ್ಸ್ ಶಾಲೆಯಲ್ಲಿ ಗಣಿತ ದಿನಾಚರಣೆ ದೈನಂದಿನ ಬದುಕಿಗೆ ಗಣಿತ ಪೂರಕ: ಸವಿತಾ ನೇತ್ರಾಜ್ ಗುರುವಿನ್ ಮಠ.

ಗಂಗಾವತಿ: ಪ್ರತಿಯೊಬ್ಬರ ದೈನಂದಿನ ಬದುಕಿಗೆ ಗಣಿತ ಅತ್ಯಂತ ಮಹತ್ವ ಆಗಿದೆ ಎಂದು ಮಹಾನ್ ಕಿಡ್ಸ್ ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಸವಿತಾ ನೇತ್ರಾಜ್ ಗುರುವಿನ್ ಮಠ ಹೇಳಿದರು.ಅವರು ಸೋಮವಾರದಂದು ಭಾರತದ ಪ್ರಖ್ಯಾತ ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಅವರ ಹುಟ್ಟಿದ ದಿನವನ್ನು ದೇಶಾದ್ಯಂತ ಗಣಿತ ದಿನಾಚರಣೆ ಯಾಗಿ ಆಚರಿಸಲಾಗುತ್ತಿದ್ದು ಹಿನ್ನೆಲೆಶಾಲೆಯಲ್ಲಿ ಗಣಿತ ಹಬ್ಬ ಆಚರಣೆ ವಿದ್ಯಾರ್ಥಿಗಳಿಂದ ತಯಾರಿಸಲಾದ ವಸ್ತು ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡಿದರು.ವಿದ್ಯಾರ್ಥಿ ದೆಸೆಯಲ್ಲಿ ವ್ಯಾಪಾರ ವ್ಯವಹಾರ ಕೂಡಿಸುವುದು ಕಳೆಯುವುದು ಸೇರಿದಂತೆ ಪ್ರತಿಯೊಂದು ಹಂತದಲ್ಲಿ ಸಂಖ್ಯಾಶಾಸ್ತ್ರದ ಅವಿಭಾಜ್ಯ ಅಂಗವೆಂದು ಹೆಸರಾದ ಗಣಿತವನ್ನು ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.ಸಂಸ್ಥೆಯ ಕಾರ್ಯದರ್ಶಿ ನೇತ್ರಾಜ್ ಗುರುವಿನ ಮಠ ಮಾತನಾಡಿ ವಿದ್ಯಾರ್ಥಿಗಳಿಂದ ಸಮಯದ ಅರಿವು ಮೂಡಿಸಲು ಸೆಕೆಂಡ್ ನಿಮಿಷ ಸೇರಿದಂತೆ ಮೀಟರು. ಸೆಂಟಿಮೀಟರ್. ಕಿಲೋಮೀಟರ್. ಕೋನಮಾಪಕ.ಜಾಮಿಟ್ರಿ ಸರ್ಕಲ್ ಗಡಿಯಾರ ವಿವಿಧ ದೇಶಗಳ ಕರೆನ್ಸಿಗಳ ಮಾದರಿಗಳನ್ನು ತಯಾರಿಸುವುದರ ಮೂಲಕ ಆಗಮಿಸುವ ಪಾಲಕರಿಗೆ ಹಾಗೂ ಮಹನೀಯರಿಗೆ ಅವುಗಳ ಕುರಿತು ಸಮಗ್ರ ಮಾಹಿತಿ ನೀಡುವ ಕ್ರಮವನ್ನು ಗಣಿತ ಶಿಕ್ಷಕರ ಸಹಾಯದಿಂದ ವಸ್ತು ಪ್ರದರ್ಶನವನ್ನು ಮಾದರಿಯನ್ನಾಗಿ ತಿಳಿ ಹೇಳುವ ಕಾರ್ಯ ನಡೆಸಲಾಗಿದೆ ಎಂದು ಹೇಳಿದರು. ಇದಕ್ಕೂ ಪೂರ್ವದಲ್ಲಿ ಶ್ರೀನಿವಾಸ ರಾಮಾನುಜನ್ ಅವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಒಂದನೇ ತರಗತಿಯಿಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿಗಳು ಮಾದರಿಯನ್ನು ತಯಾರಿಸಿಕೊಂಡು ವಿವರಣೆ ನೀಡಿದ್ದು ವಿಶೇಷವಾಗಿತ್ತು.ವಿದ್ಯಾರ್ಥಿಗಳ ಪಾಲಕರು ಹಿತೈಷಿಗಳು ಗಣಿತ ದಿನಾಚರಣೆಯ ಹಬ್ಬವನ್ನು ವೀಕ್ಷಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಗಣಿತ ತಜ್ಞರಾದ ಆರ್ಯಭಟ ಬ್ರಹ್ಮಗುಪ್ತ ಶ್ರೀನಿವಾಸ ರಾಮಾನುಜನ್ ಸೇರಿದಂತೆ ಮಹಾನ್ ಗಣಿತ ತಜ್ಞರ ವಿದ್ಯಾರ್ಥಿಗಳ ವೇಷ ಭೂಷಣ ಆಕರ್ಷಕವಾಗಿ ಕಂಡುಬಂದಿತು. ಒಟ್ಟಾರೆ ಒಂದು ಅರ್ಥಪೂರ್ಣವಾದ ಕಾರ್ಯಕ್ರಮ ಆಯೋಜಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಔಚಿತ್ಯ ಪೂರ್ಣವಾದ ಕಾರ್ಯ ಎಂದು ಪಾಲಕರು ತಿಳಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಪೂರ್ಣಿಮಾ, ಕುಮುದಿನಿ, ಚಂಪರಾಣೆ, ಸಿದ್ದೇಶ.ರೇಣುಕಾ ಪ್ರಸಾದ.ಸಹನಾ. ಗೌರಿ.ಸೌಮ್ಯ.ದೀಪ.ಶಾಂತಿ.ಶಿವಲೀಲಾ. ಸಲೀನಾ.ಕ್ರೇಜಿ.ಶಬಾನ.ಅಶ್ವಿನಿ.ಪ್ರಶಾಂತ.ಅಖಿಲ.ಮುಬೀನ ಅಮೃತ. ಮಂಜುನಾಥ.ಈರಯ್ಯ ಶ್ರೀದೇವಿ ಸೇರಿದಂತೆ ಪಾಲಕರು ಉಪಸ್ಥಿತರಿದ್ದರು.

