ಎಲ್ಲಂದರಲ್ಲಿ ರಿಪೇರಿಯಾಗಿ ನಿಲ್ಲುವ ತಹಸೀಲ್ದಾರ್ ವಾಹನ!

ತಾಲೂಕಿನ ಆಡಳಿತ ನೋಡಿಕೊಳ್ಳುವ ಅಧಿಕಾರಿಗಿಲ್ಲ ಹೊಸ ವಾಹನ..
ಪದೇ ಪದೇ ಕೆಟ್ಟು ಹೋಗುತ್ತಿರುವ 8 ವರ್ಷದ ಟಾಟಾ ಜೀಪ್.ಕಳೆದೆರಡು ತಿಂಗಳಿಂದ ಬಾಡಿಗೆ ವಾಹನದಲ್ಲಿ ಸಂಚಾರ,ಸರಕಾರಕ್ಕೆ ಹೊರೆ!

ಗಂಗಾವತಿ: ತಾಲೂಕಿನ ಇಡೀ ಆಡಳಿತ ಮತ್ತು 32 ಇಲಾಖೆಗಳ ಕಾರ್ಯಕಲಾಪಗಳನ್ನು ನೋಡಿಕೊಳ್ಳುವ ತಾಲೂಕು ದಂಡಾಧಕಾರಿಗಳ ವಾಹನ ಎಲ್ಲೆಂದರಲ್ಲಿ ಕೆಟ್ಟ ನಿಲುವ ಮೂಲಕ ತಹಸೀಲ್ದಾರ್ ಅವರ ಕಾರ್ಯಚಟುವಡಿಗಳಿಗೆ ಅಡ್ಡಿಯಾಗಿದ್ದು ಕಳೆದ ಎರಡು ತಿಂಗಳಿಂದ ಬಾಡಿಗೆ ವಾಹನದಲ್ಲಿ ಸಂಚಾರ ಮಾಡಿ ಸರಕಾರಕ್ಕೆ ಆರ್ಥಿಕ ಹೊರೆಯುಂಟು ಮಾಡಲಾಗುತ್ತಿದೆ.ಇಲ್ಲಿಯ ತಹಸಿಲ್ದಾರ್ ಅವರಿಗೆ ಟಾಟಾ ಜೀಪ್ ಅನ್ನು 2017ನೇ ಇಸ್ವಿಯಲ್ಲಿ ಸರ್ಕಾರ ಮಂಜೂರು ಮಾಡಿದ್ದು. ಕಳೆದ ಒಂದು ವರ್ಷದಿಂದ ಈ ವಾಹನವು ಪದೇ ಪದೇ ರಿಪೇರಿ ಆಗಿ ತಹಸೀಲ್ದಾರರು ತಾಲೂಕಿನ ವಿವಿಧ ಸ್ಥಳಗಳಿಗೆ ಕೆಲಸ ಕಾರ್ಯಗಳಿಗಾಗಿ ತೆರೆದ ಸಂದರ್ಭದಲ್ಲಿ ಕೆಟ್ಟು ನಿಲ್ಲುತ್ತಿದ್ದು ತಾಸಿಲ್ದಾರ್ ಅವರು ಬೇರೆ ವಾಹನದಲ್ಲಿ ಅಥವಾ ಬೈಕ್ ನಲ್ಲಿ ತಾಲೂಕ ಮುಖ್ಯ ಕೇಂದ್ರಕ್ಕೆ ಬರುವ ಸ್ಥಿತಿ ಉಂಟಾಗಿದೆ ಕಳೆದ ಎರಡು ತಿಂಗಳಿಂದ ಬಾಡಿಗೆ ವಾಹನದಲ್ಲಿ ಸಭೆ ಸಮಾರಂಭಗಳು ಮತ್ತು ಕಂದಾಯ ಇಲಾಖೆಯ ಕೆಲಸ ಕಾರ್ಯಗಳಿಗೆ ಓಡಾಡುತ್ತಿದ್ದು ಕಳೆದ ಒಂದು ವಾರದಿಂದ ವಾಹನದ ಟೈಯರ್ ಮತ್ತು ಇತರೆಗಳನ್ನು ಹಾಕಿಸಿಕೊಂಡು ಸಂಚಾರ ಮಾಡುತ್ತಿದ್ದಾರೆ ಆದರೆ ಸೋಮವಾರ ರಾತ್ರಿ ಕಾರ್ಯನಿಮಿತ್ತ ಹೋಗಿ ಬರುವ ಸಂದರ್ಭದಲ್ಲಿ ಆನೆಗುಂದಿ ರಸ್ತೆಯಲ್ಲಿ ವಾಹನ ಕೆಟ್ಟು ಪುನಹ ನಿಂತಿದ್ದು ಇದರಿಂದ ತಹಸೀಲ್ದಾರ್ ಅವರು ಮತ್ತೆ ಬಾಡಿಗೆ ವಾಹನದಲ್ಲಿ ಓಡಾಡುವ ಸ್ಥಿತಿ ಉಂಟಾಗಿದೆ. ತಹಸಿಲ್ದಾರ್ ಅವರು ಇಡೀ ಕಂದಾಯ ಇಲಾಖೆ ಮತ್ತು ತಾಲೂಕಿನ 32 ಇಲಾಖೆಗಳ ಮೇಲುಸ್ತುವರಂತೆ ಕಾರ್ಯನಿರ್ವಹಿಸಬೇಕಾಗಿದೆ ಜೊತೆಗೆ ಹಬ್ಬ ಹರಿದಿನ ರಾಷ್ಟ್ರೀಯ ಹಬ್ಬಗಳನ್ನು ತಹಸೀಲ್ದಾರ್ ಅವರ ನೇತೃತ್ವದಲ್ಲಿ ಮಾಡಬೇಕಿದೆ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಮಹತ್ವದ ಕಾರ್ಯ ತಾಲೂಕ ದಂಡಾಧಿಕಾರಿಯಾಗಿ ತಹಸೀಲ್ದಾರ್ ಮಾಡಬೇಕಾಗುತ್ತದೆ ಮತ್ತು ಜಿಲ್ಲಾಮಟ್ಟದಲ್ಲಿ ನಡೆಯುವ ಸಭೆ ಸಮಾರಂಭಗಳಿಗೆ ಹೋಗಿ ಬರಲು ವಾಹನ ಅತ್ಯಗತ್ಯವಾಗಿದ್ದು 2017ರಲ್ಲಿ ಗಂಗಾವತಿಯ ತಹಸಿಲ್ದಾರ್ ಅವರಿಗೆ ಟಾಟಾ ಜೀಪ್ ಅನ್ನು ಸರಕಾರ ಮಂಜೂರು ಮಾಡಿತ್ತು ಪ್ರಸ್ತುತ ಟಾಟಾ ಜೀಪ್ ೧.೩೦.ಲಕ್ಷ ಕಿ.ಮೀ.ಓಡಾಟ ನಡೆಸಿದ್ದುಅದು ಈಗ ಗುಜರಿ ಸೇರುವ ವ್ಯವಸ್ಥೆ ಆಗಿರುವುದರಿಂದ ಪುನಹ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಥವಾ ಇತರೆ ಅನುದಾನದಲ್ಲಿ ಹೊಸ ವಾಹನದ ವ್ಯವಸ್ಥೆಯನ್ನು ಮಾಡುವುದು ಅಗತ್ಯವಾಗಿದೆ. ಕಳೆದ ಎರಡು ತಿಂಗಳ ಹಿಂದೆಕೊಪ್ಪಳ ವಿಶ್ವವಿದ್ಯಾಲಯದ ಉಪಕುಲಪತಿಗಳು, ಪೊಲೀಸ್ ಇಲಾಖೆಯ ಪಿಐ,ಸಿಪಿಐ ಮತ್ತು ಶಿಕ್ಷಣ ಇಲಾಖೆ ಬಿಇಒ ಗಳು ಸೇರಿ ಇತರೆ ಕೆಲವು ಇಲಾಖೆಯ ತಾಲೂಕ ಮಟ್ಟದ ಅಧಿಕಾರಿಗಳಿಗೆ ಕೆ ಕೆ ಆರ್ ಡಿ ಬಿ ಅನುದಾನದಲ್ಲಿ ಹೊಸ ಬುಲೇರೋ ವಾಹನವನ್ನು ಕೊಡಿಸಲಾಗಿದ್ದು ಅದರಂತೆ ತಹಸೀಲ್ದಾರ್ ಅವರಿಗೂ ಸಹ ಹೊಸ ವಾಹನ ಕೊಡಿಸುವುದು ಅಗತ್ಯವಾಗಿದೆ.ಕೋಟ್.ನಮ್ಮ ಕಚೇರಿಯ ವಾಹನವು ಪದೇ ಪದೇ ದುರಸ್ತಿಯಾಗುತ್ತಿದ್ದು ಈ ಕುರಿತು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿ ಪತ್ರವನ್ನು ನೀಡಲಾಗಿದೆ. ಸದ್ಯ ಇರುವ ಟಾಟಾ ಸ್ವಲ್ಪ ಪ್ರಮಾಣದಲ್ಲಿ ರಿಪೇರಿ ಆಗಿರುವುದರಿಂದ ಅದನ್ನು ದುರಸ್ತಿ ಮಾಡಿಕೊಂಡು ಪುನಹ ಬಡಿಸಲಾಗುತ್ತದೆ. ಟಾಟಾ ಜೀಪ್ ೧.೩೦.ಲಕ್ಷ ಕಿಮೀ ಓಡಿದ್ದು ಸರ್ಕಾರ ಹೊಸ ವಾಹನ ಕೊಡುವ ತನಕ ಟಾಟಾ ಜೀಪ್ ನಲ್ಲಿ ಕಾರ್ಯ ಮಾಡಲಾಗುತ್ತದೆ.-ಯು.ನಾಗರಾಜ ತಹಸೀಲ್ದಾರ್

