ಅಚಲ ವಿಶ್ವಾಸ ಮತ್ತು ಶ್ರದ್ಧೆಯಿಂದ ನಾಗಾರಾಧನೆಯನ್ನು ಮಾಡಿದಲ್ಲಿ ಸಕಲ ಮನೋಭಿಷ್ಟರ್ಥಗಳು ಕೈಗೂಡುತ್ತವೆ : ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳು

ಅಚಲ ವಿಶ್ವಾಸ ಮತ್ತು ಶ್ರದ್ಧೆಯಿಂದ ನಾಗಾರಾಧನೆಯನ್ನು ಮಾಡಿದಲ್ಲಿ ಸಕಲ ಮನೋಭಿಷ್ಟರ್ಥಗಳು ಕೈಗೂಡುತ್ತವೆ : ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳು

ಕಂಪ್ಲಿ: ಅಚಲ ವಿಶ್ವಾಸ ಮತ್ತು ಶ್ರದ್ಧೆಯಿಂದ (ಸುಬ್ರಮಣ್ಯ)ಸ್ಕಂದ) ಚಂಪಾಷಷ್ಠಿ ನಿಮಿತ್ತ ನಾಗಾರಾಧನೆಯನ್ನು ಕೈಗೊಂಡಲ್ಲಿ ಸಕಲ ಮನೋಭಿಷ್ಟಾರ್ಥಗಳು ಕೈಗೂಡುತ್ತವೆ ಎಂದು ಸತ್ಯನಾರಾಯಣ ಪೇಟಯ ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳು ಹೇಳಿದರು.ಅವರು ಪಟ್ಟಣದ ಸತ್ಯನಾರಾಯಣ ಪೇಟೆಯ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಬುಧವಾರ ಜರುಗಿದ ಸುಬ್ರಮಣ್ಯ ಷಷ್ಠಿ ಪೂಜಾ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿ, ಸ್ಕಂದ ಷಷ್ಟಿ ನಿಮಿತ್ತ ಬ್ರಹ್ಮಚಾರಿ ಪೂಜೆ ಮತ್ತು ನಾಗ ಪೂಜೆಯನ್ನು ನೆರವೇರಿಸಿದಲ್ಲಿ ಆರೋಗ್ಯ, ನೆಮ್ಮದಿಯ ದಾಂಪತ್ಯ ಜೀವನ, ವಿವಾಹ ಸಂಬಂಧಗಳು ಸುಖ ಸಂತೋಷಗಳೊಂದಿಗೆ ಸತ್ಸಂಕಲ್ಪಗಳು ನೆರವೇರುತ್ತವೆ ಎಂದರು.ಪುರಾಣ ಉಕ್ತಿಗಳನ್ನು ಕಡೆಗಣಿಸಬಾರದು. ಬ್ರಹ್ಮಚಾರಿ(ವಟು) ಗೆ ವಸ್ತ್ರದಾನ, ಹಾಲು, ನಾಗಬಿಂಬವನ್ನು ದಾನ ಮಾಡಿದರೆ ಸರ್ವರೋಗ, ಕಷ್ಟ ಪರಿಹಾರ, ಸತ್ ಬುದ್ದಿ ಸತ್ ಜ್ಞಾನ, ಸಂಪತ್ತು ದೊರಕಲಿದೆ. ದೃಢ ವಿಶ್ವಾಸ, ಏಕಾಗ್ರತೆಯ ಅಚಲ ನಂಬಿಕೆಯಿಂದ ಮಾತ್ರ ಸಂಕಲ್ಪ ಮಾಡಿಕೊಳ್ಳಬಹುದಾಗಿದೆ. ಸುಬ್ರಮಣ್ಯ ಸ್ವಾಮಿ ಆರಾದನೆಯಿಂದ ಸರ್ವರೋಗ ಪರಿಹಾರ ಮಾಡಿಕೊಳ್ಳಬಹುದು,ಪಾರಂಪರಿಕ ಆಚಾರ,ವಿಚಾರ, ಸಂಸ್ಕಾರಗಳನ್ನುಅರಿತು ಅರ್ಥೈಸಿಕೊಂಡು ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ತಿಳಿಸಿದರು.ಬ್ರಹ್ಮಚಾರಿ ಪೂಜೆ, ನಾಗದೇವತಾ ಆರಾದನೆ, ರುದ್ರಾಭಿಷೇಕ, ಪುರುಷಸೂಕ್ತ, ಸುಬ್ರಮಣ್ಯ ಸ್ವಾಮಿಗೆ ಪಂಪಚಾಮೃತ ಅಭಿಷೇಕ, ಅಷ್ಟೋತ್ತರ ಶತನಾಮಾವಳಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದವು. ಕಾರ್ಯಕ್ರಮದಲ್ಲಿ ಪಟ್ಟಣವೂ ಸೇರಿದಂತೆ ವಿವಿಧ ಗ್ರಾಮಗಳ ಸಕಲ ಸದ್ಭಕ್ತರು ಮತ್ತು ದೇವಸ್ಥಾನದ ಪದಾಧಿಕಾರಿಗಳು ಶ್ರದ್ಧಾ ಭಕ್ತಿಯಂದ ಭಾಗವಹಿಸಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *