ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗೆ ನರೇಗಾ ಸಹಕಾರಿ ವಡ್ಡರಹಟ್ಟಿ ಪಂಚಾಯತ ಅಭಿವೃದ್ದಿ ಅಧಿಕಾರಿ ಸುರೇಶ ಚಲವಾದಿ ಹೇಳಿಕೆ 2026-27ನೇ ಸಾಲಿನ ನರೇಗಾ ಕ್ರಿಯಾ ಯೋಜನೆಯ ಗ್ರಾಮಸಭೆ..

ಗಂಗಾವತಿ: ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗೆ ನರೇಗಾ ಯೋಜನೆ ವರದಾನವಾಗಿದೆ ಎಂದು ವಡ್ಡರಹಟ್ಟಿ ಪಂಚಾಯತ ಅಭಿವೃದ್ದಿ ಅಧಿಕಾರಿ ಸುರೇಶ ಚಲವಾದಿ ಹೇಳಿದರು.ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತ್ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ 2026-27ನೇ ಸಾಲಿನ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಕ್ರಿಯಾ ಯೋಜನೆ ಸಿದ್ದಪಡಿಸುವಿಕೆ ಕುರಿತ ಗ್ರಾಮಸಭೆಯಲ್ಲಿ ಮಾತನಾಡಿದರು.ಈಗಾಗಲೇ ಮನೆ-ಮನೆ ಭೇಟಿ ಮೂಲಕ ರೈತರು, ಗ್ರಾಮಸ್ಥರಿಂದ ಕಾಮಗಾರಿಗಳ ಬೇಡಿಕೆಯನ್ನು ಪಡೆಯಲಾಗಿದೆ. ವಾರ್ಡಸಭೆ ಮೂಲಕ ವಾರ್ಡನಲ್ಲಿರುವ ಜನರ ಬೇಡಿಕೆಗಳನ್ನು ಪಡೆಯಲಾಗಿದೆ. ಅಂತಿಮವಾಗಿ ಕಾಮಗಾರಿ ಗುಚ್ಛ ತಯಾರಿಸಿ ಗ್ರಾಮಸಭೆ ಮೂಲಕ ಒಪ್ಪಿಗೆ ಪಡೆದು ಮಾನವ ದಿನಗಳ ಗುರಿಗೆ ಅನುಗುಣವಾಗಿ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾ ಪಂಚಾಯತಿಯಿಂದ ಅಂತಿಮವಾಗಿ ಅನುಮೋದನೆ ಪಡೆಯಲಾಗುತ್ತದೆ ಎಂದು ತಿಳಿಸಿದರು.ಕ್ರಿಯಾ ಯೋಜನೆಯಲ್ಲಿ ನರೇಗಾ ಕೂಲಿಕಾರರ ಕೂಲಿ ಕೆಲಸಕ್ಕೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಗ್ರಾಮ ಪಂಚಾಯತಿಯಿಂದ ನರೇಗಾದಡಿ ಶೇ.65%ರಷ್ಟು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣಾ ಕಾಮಗಾರಿಗಳು ಅನುಷ್ಠಾನಿಸುವುದು ಕಡ್ಡಾಯವಾಗಿದೆ. ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುವುದು ಎಂದರು.ವಾರ್ಡವಾರು ಬಂದಿರುವ ಕಾಮಗಾರಿಗಳ ಬೇಡಿಕೆಯನ್ನು ಗ್ರಾಮಸಭೆಯಲ್ಲಿ ವಿವರಿಸಿದರು.ಇದೇ ವೇಳೆ ವಿಕಲಚೇತನರ ವಿಶೇಷ ಗ್ರಾಮಸಭೆ ಮಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಕಲಚೇತನರ ಬೇಡಿಕೆಗಳನ್ನು ಪಡೆಯಲಾಯಿತು.ಗ್ರಾಪಂ ಉಪಾಧ್ಯಕ್ಷರಾದ ಟಿ.ಗೌಸ್ ಸಾಬ್ ಅವರು ಗ್ರಾಮಸಭೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಮಹೇಶ್ ಡಾಕ್ಟರ್, ಪಂಪಣ್ಣ ಕೋರಿ, ಹೊನ್ನೂರಬಿ, ಸಯ್ಯದ್ ಮೇರಾಜ್ ಹುಸೇನ್, ಶಾಂತಮ್ಮ, ಪೀರ್ ಮಹಮ್ಮದ್, ಅರಣ್ಯ ಇಲಾಖೆಯ ಉಪ ವಲಯ ಅರಣ್ಯಧಿಕಾರಿಯಾದ ಚಂದ್ರಶೇಖರ, ಗ್ರಾಪಂ ಕಾರ್ಯದರ್ಶಿ ಈಶಪ್ಪ, ತಾಂತ್ರಿಕ ಸಹಾಯಕರಾದ ಉದಯ್ ಕುಮಾರ್, ವಿಆರ್ ಡಬ್ಲ್ಯು ಶೈಲಾಶ್ರೀ ಹಾಗೂ ಗ್ರಾಪಂ ಸಿಬ್ಬಂದಿಗಳು ಇದ್ದರು.

