ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣದಿಂದ ಗಮನ ಸೆಳೆದ ಸರ್ಕಾರಿ ಶಾಲೆ ಹೊಸಳ್ಳಿ …

ಗಂಗಾವತಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಳ್ಳಿ ಯಲ್ಲಿ ನವಂಬರ್ 14ರಂದು ಪಂಡಿತ್ ಜವಾಹರ ಲಾಲ್ನೆಹರು ಮಕ್ಕಳ ದಿನಾಚರಣೆಯನ್ನು ಅಂಗವಾಗಿ ಹಮ್ಮಿಕೊಂಡಿದ್ದು ಸಂಸ್ಕೃತ ಕಾರ್ಯಕ್ರಮಗಳು ಮಹನೀಯರ ಮಹಾತ್ಮರ ವೇಷಭೂಷಣದಿಂದ ನೃತ್ಯ ಮಾಡುವುದರ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿದೆ .

ಈ ಸಂದರ್ಭದಲ್ಲಿ ಮಾತನಾಡಿದ, ಮಹಾದೇವಪ್ಪ ಮೋಟಿ ಅವರು ಮಾತನಾಡಿ ಮಕ್ಕಳ ಕಲಿಕೆಯಲ್ಲಿ ಶಿಕ್ಷಕರು ಎಷ್ಟು ಮುಖ್ಯವೋ ಹಾಗೆ ಪೋಷಕರು ಅಷ್ಟೇ ಜವಾಬ್ದಾರಿಯತರು ಎಂಬುದನ್ನ ತಿಳಿಸಿದರು. ಶಾಲೆಯ ಶಿಕ್ಷಕಿಯಾದ ಪ್ರಭಾವತಿಯವರು ಸರ್ಕಾರದ ಪ್ರೋತ್ಸಾಹದಾಯಕ ಯೋಜನೆಗಳ ಕುರಿತು ಹಾಗೂ ಮಕ್ಕಳ ರಕ್ಷಣೆ ಇರುವ ಕಾಯ್ದೆಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು. ಎಸ್.ಡಿ..ಎಂ. ಸಿ.ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸರ್ವ ಸದಸ್ಯರು, ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಪ್ಪ , ಲಕ್ಷ್ಮಪ್ಪ , ಮೂಕಪ್ಪ , ಯಂಕಪ್ಪ , ಹನುಮಂತಪ್ಪ ಹಾಗೂ ಶಾಲೆಯ ಶಿಕ್ಷಕರಿಂದ ಮತ್ತು ಊರಿನ ಪೋಷಕರು ಮುದ್ದು ಮಕ್ಕಳು ಭಾಗವಹಿಸಿದರುಕಾರ್ಯಕ್ರಮದ ನಿರೂಪಕರಾಗಿ ಬಾರಿಕರ ಪಂಪಾಪತಿ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.

