ಕೃಷಿ ವಿಸ್ತರಣಾ ಕಾರ್ಯಕ್ರಮ ಜರುಗಿತು..

ಕೃಷಿ ವಿಸ್ತರಣಾ ಕಾರ್ಯಕ್ರಮ ಜರುಗಿತು..

ಬಳ್ಳಾರಿ / ಕಂಪ್ಲಿ : ತಾಲೂಕಿನ ಚಿಕ್ಕಜಾಯೀಗನೂರು ಗ್ರಾಮದಲ್ಲಿ ಕಂಪ್ಲಿ ರೈತ ಸಂಪರ್ಕ ಕೇಂದ್ರ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯುಕ್ತ ಆಶ್ರಯದಲ್ಲಿ ಕೃಷಿ ವಿಸ್ತರಣಾ ಕಾರ್ಯಕ್ರಮ ಯೋಜನೆ ಅಡಿಯಲ್ಲಿ ಯಂತ್ರ ಶ್ರೀ ಯೋಜನೆ ಬಗ್ಗೆ ರೈತ ಕ್ಷೇತ್ರ ಪಾಠಶಾಲೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಂತ್ರ ಶ್ರೀ ಮೂಲಕ 5 ಎಕ್ರೆಯಲ್ಲಿ ಬತ್ತ ನಾಟಿ ಮಾಡಿರುವ ರೈತ ಅಮರೇಗೌಡ ಅವರ ಗದ್ದೆಯಲ್ಲಿ ರೈತರಿಗೆ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು.ಈ ಕಾರ್ಯಕ್ರಮದಲ್ಲಿ ಹಂಪಾದೇವನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕವಿತಾ ಪಂಪನಗೌಡ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಂಪ್ಲಿ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ನಾಜನಿನ್ ನದಾಫ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಂದಿನ ದಿನಗಳಲ್ಲಿ ಯಾಂತ್ರಿಕರಣ ಬಳಕೆ ಮಾಡಿಕೊಂಡು, ಇಲಾಖೆಯ ಸಹಕಾರ ತೆಗೆದುಕೊಂಡು ಭತ್ತ ಬೆಳೆಯುವುದನ್ನ ಸರಳಿಕರಣ ಮಾಡಿಕೊಳ್ಳುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ನಂತರ ಸಹಾಯಕ ಕೃಷಿ ಅಧಿಕಾರಿಗಳಾದ ಜ್ಯೋತಿ ಅವರು ರೈತರಿಗೆ ರೈತ ಸಂಪರ್ಕ ಕೇಂದ್ರದಿಂದ ಒದಗಿಸುತ್ತಿರುವ ಸೌಲಭ್ಯಗಳ ಬಗ್ಗೆ ಮತ್ತು ಸ್ವ- ಉದ್ಯೋಗ ಮೇಷನರಿಗಳ ಬಗ್ಗೆ, ಇಲಾಖೆಯಿಂದ ಬೀಜ ಮತ್ತು ಗೊಬ್ಬರ ತೆಗೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಅಧಿಕಾರಿಗಳಾದ ಸಂಜುಕುಮಾರ್ ಅವರು ಯಂತ್ರ ಶ್ರೀ ಮೂಲಕ ಭತ್ತ ನಾಟಿ ಮಾಡಿರುವ ಅಮರೇಗೌಡ ಅವರ ಗದ್ದೆಯಲ್ಲಿ ರೈತರಿಗೆ ಸಸಿ ಮಡಿ ತಯಾರಿ ಮತ್ತು ನಿರ್ವಹಣೆ, ಬೀಜದ ಆಯ್ಕೆ,ನಾಟಿಗೆ ಗದ್ದೆ ತಯಾರಿ, ಯಂತ್ರಗಳ ಬಳಕೆ, ನೀರು ಹಾಗೂ ಗೊಬ್ಬರ ನಿರ್ವಹಣೆ, ಕಳೆ ನಿರ್ವಹಣೆ, ಕಟಾವು ಬಗ್ಗೆ ವಿವರವಾಗಿ ಪ್ರಾತ್ಯಕ್ಷಿಕೆ ತರಬೇತಿಯನ್ನು ನೀಡಿದರು, ಪ್ರಗತಿಪರ ರೈತರಾದ ಅಮರೇಗೌಡ ಅವರು ಯಾಂತ್ರಿಕರಣ ಬಳಕೆ ಮಾಡಿ ಭತ್ತ ನಾಟಿ ಮಾಡಿರುವ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿ, ಭತ್ತ ಕೈ ನಾಟಿ ಮತ್ತು ಯಂತ್ರ ಬಳಕೆ ಮಾಡಿ ನಾಟಿ ಮಾಡಿರುವ ಖರ್ಚು ವೆಚ್ಚಗಳ ಬಗ್ಗೆ ವ್ಯತ್ಯಾಸಗಳನ್ನು ತಿಳಿಸಿದರು. ಕಂಪ್ಲಿ ರೈತ ಸಂಪರ್ಕ ಕೇಂದ್ರದ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ರೇಣುಕಾರಾಜ್, ಗ್ರಾಮದ ಗಣ್ಯರು, ರೈತ ಬಾಂಧವರ ಇತರರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *