ಮಾದಕ ಸೇವನೆಯಿಂದ ಆರೋಗ್ಯ ಹಾಳು ಮಾಡುತ್ತದೆ.ಮಧ್ಯ- ಮಾದಕ ವಸ್ತುಗಳ ವಿರುದ್ಧ ಅಭಿಯಾನಕ್ಕೆ ಚಾಲನೆ. ಪಿಡಿಒ ಬಸವರಾಜ…

ಗಂಗಾವತಿ ತಾಲ್ಲೂಕಿನ ಮರಳಿ ಹೋಬಳಿ ಮಟ್ಟದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ ನವದೆಹಲಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕೊಪ್ಪಳ ಗ್ರಾಮ ಪಂಚಾಯತ್ ಮರಳಿ ವತಿಯಿಂದ ಹೋಬಳಿ ಮಟ್ಟದ ನಶಾ ಮುಕ್ತ ಭಾರತ ಅಭಿಯಾನದಡಿಯಲ್ಲಿ ವಿಕಲಚೇತನರಿಂದ ಯಂತ್ರ ಚಾರಿತ ವಾಹನ ಮೂಲಕ ಹಾಗೂ ಘೋಷಣೆ ಮತ್ತು ಮತ್ತು ಜಾಗೃತಿ ಜಾಥ ಮತ್ತು ಪ್ರತಿಜ್ಞೆ ಬೋಧನೆ ಚಾಲನೆ ನೀಡಿದರು.ಈ ಕಾರ್ಯಕ್ರಮದಲ್ಲಿ ಮರಳಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಬಸವರಾಜ ಗೌಡ್ರ ಮಾತನಾಡಿ ಯುವಕರು ದುಶ್ಚಟದಗಳಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ ಇದರಿಂದ ಬಿಡಿ. ಸಿಗರೇಟ್ .ಗುಟಕ ಸೇವನೆ ಮಾಡಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಮಾರಾಟಗಳು ಆಗುತ್ತವೆ. ಇದರಿಂದ ಯುವಕರು ದುಶ್ಚಟಕ್ಕೆ ಹಾಳಾಗುತ್ತಾರೆ. ಈ ಜಾಗೃತಿ ಕಾರ್ಯಕ್ರಮಗಳ ಮುಖಾಂತರ ಇಡೀ ದೇಶದಲ್ಲಿ ಇಲಾಖೆಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮ ತುಂಬಾ ಒಳ್ಳೆಯದಾಗಿದೆ ಕಾರ್ಯಕ್ರಮ ಮುಖಾಂತರ ನಮ್ಮ ಜಿಲ್ಲೆಯಲ್ಲಿ ನಶಾ ಮುಕ್ತ ವಾಗಬೇಕೆನ್ನುವುದೇ ನಮ್ಮ ಆಸೆಯಾಗಿದೆ.ಆರೋಗ್ಯ ಇಲಾಖೆ ಅಧಿಕಾರಿಗಳಾದ ಗುರುರಾಜ ಮಕ್ಕಳು ಮಹಿಳೆಯರು ಮತ್ತು ಯುವಕರು ಇವುಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದೆ ಯುವಕರು ಇದರಿಂದ ದಾರಿ ತಪ್ಪುತ್ತಿದ್ದಾರೆ ಮದ್ಯಪಾನ. ಗುಟುಕಾ. ಸಿಗರೇಟ್ ಇನ್ನು ಮುಂತಾದವುಗಳ ಮೂಲಕ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಇದರಿಂದ ಯುವಕರು ಎಚ್ಚೆತ್ತುಕೊಳ್ಳಬೇಕಾಗಿದೆ.

ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಬಸವರಾಜ ಗೌಡ್ರ ಮಂಜುಳಾ MRW ಗಂಗಾವತಿ ಆರೋಗ್ಯ ಇಲಾಖೆಯ ಅಧಿಕಾರಿಗಳಾದ.ಗುರುರಾಜ.ಕು. ಶೋಭಾ .ಮಂಜುಳಾ. ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಗಳಾದ.ಚಿದಾನಂದ ಮರಳಿ.ಮಂಜುನಾಥ ಹೊಸಕೇರಾ.ಬಸವರಾಜ ಗೋನಾಳ. ಸಂಗಪ್ಪ ಹೇರೂರು. ಯಂಕಮ್ಮ ಹಣವಾಳ . ಭುವನೇಶ್ವರಿ ಕೆಸರಹಟ್ಟಿ. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಶಿವನಗೌಡ ಅಭಿಲಾಷ ಗಿರಿಜಮ್ಮ ಎನ್ ಆರ್ ಎಲ್ ಎಂ ಒಕ್ಕೂಟದ ಸದಸ್ಯರಾದ ಬಸ್ಸಮ್ಮ. ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತರು ಮತ್ತು ವಿಕಲಚೇತನರು ಶಾಲಾ ಮಕ್ಕಳು ಭಾಗವಹಿಸಿ ಯಶಸ್ವಿಗೊಳಿಸಿದರು.

